Advertisement

ಹೆಣ್ಣಾದರೂ ಗಂಡಾಗಿರುವ ದಯನೀಯ ಕತೆ ಇದು

11:20 AM Apr 24, 2018 | Karthik A |

ಕಾಬೂಲ್‌: ಆಕೆಗೆ ಗೊತ್ತು ತಾನು ‘ಅವಳು’ ಅನ್ನೋದು. ಆದರೆ ಪೋಷಕರ ಪಾಲಿಗೆ ಮಾತ್ರ ಕಳೆದೊಂದು ದಶಕದಿಂದಲೂ ಅವಳು ಅವಳಲ್ಲ ‘ಅವನು’! ಹೌದು, ಅಫ್ಘಾನಿಸ್ಥಾನದ 18ರ ಯುವತಿ ಸಿತಾರಾ ವಫ‌ದಾರ್‌ ಎಂಬಾಕೆಯ ಕರಾಳ ಬದುಕು ಇದು. ಕರುಳು ಹಿಂಡುವ ಕ್ಷಣಗಳನ್ನು ಎದುರಿಸುತ್ತಿರುವ ಸಿತಾರಾ,  ಹೆತ್ತವರ ಪಾಲಿಗೆ ಕಿರಿಯ ಮಗ. ವಾಸ್ತವವಲ್ಲದ ರೀತಿಯಲ್ಲಿ ದಿನ ಕಳೆಯುತ್ತಿರುವ, ಅವಮಾನಗಳನ್ನು ಅನುಭವಿಸುತ್ತಿರುವ ಹೆಣ್ಣು.

Advertisement

ತಾನು ಹೆಣ್ಣು ಎಂದು ಬಾಯಿ ಬಡಿದುಕೊಂಡರೂ ಕೇಳಿಸಿಕೊಳ್ಳದ ಪೋಷಕರು ಮಾತ್ರ ‘ಮಗ’ ಎಂದೇ ಹೇಳಿಕೊಂಡು ಆಕೆಯನ್ನು ಇಟ್ಟಿಗೆ ತಯಾರಿಕಾ ಕೇಂದ್ರದಲ್ಲಿ ದುಡಿಸಿಕೊಳ್ಳುತ್ತಿದ್ದಾರೆ. ಸಿತಾರಾ ಪ್ರತಿದಿನ ಬೆಳಗ್ಗೆ 7ರಿಂದ ಸಂಜೆ 5ರ ತನಕ ಹುಡುಗನಾಗಿ ದುಡಿಯುತ್ತಿದ್ದಾಳೆ. ಮನೆಯಿಂದಾಚೆ ಬರುವಾಗಲೆಲ್ಲ ಹುಡುಗರಂತೆ ಇದ್ದು, ಅವರಂತೆ ಡ್ರೆಸ್‌ ಮಾಡಿಕೊಂಡು ಬದುಕುತ್ತಿದ್ದಾಳೆ. 

ನಂಗಾರ್‌ಹಾರ್‌ ಪ್ರಾಂತ್ಯದ ನಿವಾಸಿ ಸಿತಾರಾ, ಐದು ಮಂದಿ ಸೋದರಿಯರನ್ನು ಹೊಂದಿದ್ದಾಳೆ. ಸೋದರರಿಲ್ಲ, ಹೀಗಾಗಿ ಪೋಷಕರು ಸಿತಾರಾಳನ್ನೇ ಮಗನಾಗಿ ಬೆಳೆಸಿದ್ದಾರೆ. ಸಿತಾರಾ ಈ ಕುರಿತು ಪ್ರತಿಕ್ರಿಯಿಸಿದ್ದು, ನನಗೆಂದೂ ನಾನು ಹೆಣ್ಣು ಅನಿಸಿಯೇ ಇಲ್ಲ ಎಂದೂ ಹೇಳಿಕೊಂಡಿದ್ದಾಳೆ.

ಯಾಕೆ ಹೀಗೆ?: ಅಷ್ಟಕ್ಕೂ ಸಿತಾರಾ ಅವರ ಈ ದಯನೀಯ ಸ್ಥಿತಿಗೆ ಕಾರಣ ಇಷ್ಟೆ. ಗಂಡು ಮಕ್ಕಳಿಲ್ಲದ ದಂಪತಿಯ ಕಿರಿಯ ಮಗಳೇ ಪೋಷಕರ ಪಾಲಿಗೆ ಮಗನಾಗಿ ಬದುಕಬೇಕೆನ್ನುವುದು ಅಫ್ಘಾನಿಸ್ಥಾನ, ಪಾಕಿಸ್ಥಾನದಲ್ಲಿ ಬೆಳೆದುಬಂದ ಸಂಪ್ರದಾಯ. ಇದನ್ನು ಇಲ್ಲಿ ‘ಬಚ್ಚಾ ಪೋಷಿ’ ಎಂದು ಕರೆಯಲಾಗುತ್ತೆ.

Advertisement

Udayavani is now on Telegram. Click here to join our channel and stay updated with the latest news.

Next