Advertisement
ಆರೋಗ್ಯ ವೆಚ್ಚ ನಿಭಾಯಿಸುವುದೇ ಕಷ್ಟ ಸಾಮಾಜಿಕ ಯೋಜನೆಗಳ ಸೌಲಭ್ಯ ಮತ್ತು ಬಳಕೆ ಕುರಿತು ರಾಷ್ಟ್ರೀಯ ಸಮೀಕ್ಷೆ ಸಂಸ್ಥೆ ಅಧ್ಯಯನ ನಡೆಸಿದ್ದು, ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡಜನರು ಆರೋಗ್ಯ ವೆಚ್ಚಗಳನ್ನು ನಿಭಾಯಿಸಲು ಕಷ್ಟಪಡುತ್ತಾರೆ ಎಂದು ಹೇಳಿದೆ.
ಗ್ರಾಮೀಣರ ಪೈಕಿ ಶೇ.10.2ರಷ್ಟು ಬಡ ಜನರು ಮಾತ್ರ ಸರಕಾರಿ ಅಥವಾ ಖಾಸಗಿ ಸಂಸ್ಥೆಗಳ ಆರೋಗ್ಯ ವಿಮ ಯೋಜನೆಯನ್ನು ಹೊಂದಿದ್ದಾರೆ. ತುಸು ಸುಧಾರಣೆ
ಆಯುಷ್ಮಾನ್ ಭಾರತ್ ಜಾರಿಗೆ ಮೊದಲು ಗ್ರಾಮೀಣ ಪ್ರದೇಶದಲ್ಲಿ ಶೇ.12.9ರಷ್ಟು ಮತ್ತು ನಗರ ಪ್ರದೇಶದ ಶೇ.8.9ರಷ್ಟು ಬಡ ಜನರು ಮಾತ್ರ ಸರಕಾರಿ ಆರೋಗ್ಯ ವಿಮೆ ಯೋಜನೆ ಪಡೆಯುತ್ತಿದ್ದರು. ಪ್ರಸ್ತುತ ಈ ಯೋಜನೆ ಅಡಿಯಲ್ಲಿ 6.4 ಲಕ್ಷದಷ್ಟು ಜನರಿಗೆ ಆರೋಗ್ಯ ವೆಚ್ಚವನ್ನು ನೀಡಲಾಗಿದೆ.
Related Articles
ದೇಶದ ನಗರಗಳಲ್ಲಿರುವ ಶೇ.9.8ರಷ್ಟು ಬಡವರು ಮಾತ್ರ ಆರೋಗ್ಯ ವಿಮೆ ಹೊಂದಿದ್ದಾರೆ ಎಂದು ವರದಿ ಹೇಳಿದೆ.
Advertisement
ಚಿಕಿತ್ಸೆಗಳಿಗೆ ಬಡವರು ಹೇಗೆ ಹಣ ಹೊಂದಿಸ್ತಾರೆ? ಉಳಿತಾಯದ ಹಣ ಬಳಕೆ
ಆರೋಗ್ಯ ವಿಮೆ ಇಲ್ಲದ ಪರಿಣಾಮ 2016-17ರಲ್ಲಿ, ಗ್ರಾಮೀಣ ಪ್ರದೇಶದ ಶೇ.79.5 ಮತ್ತು ನಗರ ಪ್ರದೇಶದ ಶೇ.83.7 ಜನರು ತಮ್ಮ ಉಳಿತಾಯ ಹಣ ದಿಂದ ವೈದ್ಯಕೀಯ ವೆಚ್ಚವನ್ನು ಪಾವತಿಸಿ¨ªಾರೆ. 2014 ರಲ್ಲಿ ಗ್ರಾಮೀಣ ಪ್ರದೇಶದ ಶೇ.67.8 ಮತ್ತು ನಗರ ಪ್ರದೇಶದ ಶೇ.74.9ರಷ್ಟು ಜನರು ಆರೋಗ್ಯ ವೆಚ್ಚಕ್ಕಾಗಿ ತಮ್ಮ ಉಳಿತಾಯ ಮೊತ್ತವನ್ನು ವ್ಯಯಿಸಿದ್ದರು. ಶೇ.13.4ರಷ್ಟು ಸಾಲ
2017-18ರಲ್ಲಿ ಗ್ರಾಮೀಣ ಭಾಗದ ಶೇ.13.4ರಷ್ಟು ಮತ್ತು ನಗರ ಪ್ರದೇಶದ ಶೇ.8.5ರಷ್ಟು ಬಡ ಜನರು ಸಾಲ ಮಾಡಿ ಆರೋಗ್ಯ ಖರ್ಚನ್ನು ಭರಿಸಿದ್ದಾರೆ. ಶೇ.3.4 ರಷ್ಟು ಬಂಧುಗಳ ನೆರವು
ಗ್ರಾಮೀಣ ಪ್ರದೇಶದಲ್ಲಿ ಶೇ.3.4 ರಷ್ಟು ಜನರು ತಮ್ಮ ಆರೋಗ್ಯ ನಿರ್ವಹಣೆಯ ವೆಚ್ಚಕ್ಕಾಗಿ ಸ್ನೇಹಿತರು ಅಥವಾ ಬಂಧು ಬಳಗದವರಿಂದ ನೆರವು ಪಡೆದಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಇವರ ಪ್ರಮಾಣ ಶೇ.3.8ರಷ್ಟಿದೆ. ಆಸ್ತಿ ಮಾರಾಟ
ಗ್ರಾಮೀಣ ಮತ್ತು ನಗರ ಪ್ರದೇಶದ ಶೇ.0.4 ರಷ್ಟು ಬಡ ಜನರು ಆರೋಗ್ಯ ವೆಚ್ಚವನ್ನು ತುಂಬುವುದಕ್ಕಾಗಿ ತಮ್ಮ ಆಸ್ತಿಯನ್ನು ಮಾರಿದ್ದಾರೆ. ಶೇ.3.2ರಷ್ಟು
ಗ್ರಾಮೀಣ ಭಾಗದ ಶೇ.3.2ರಷ್ಟು ಮತ್ತು ನಗರ ಪ್ರದೇಶದ ಶೇ. 3.4ರಷ್ಟು ಬಡ ಜನರು ಆರೋಗ್ಯ ಕುರಿತಾದ ಖರ್ಚುಗಳನ್ನು ಹೊಂದಿ ಸಲು ಇತರ ಮೂಲಗಳನ್ನು ಅವಲಂಬಿಸಿದ್ದರು. 31,845 ರೂ. ಸರಾಸರಿ ಖರ್ಚು
ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಪ್ರತಿಯೊಬ್ಬ ರೋಗಿಗಳ ಮೇಲೆ ಸುಮಾರು 31,845 ರೂ. ಸರಾಸರಿ ವೈದ್ಯಕೀಯ ವೆಚ್ಚವನ್ನು ವಿಧಿಸಲಾಗಿದ್ದು, ಇದರ ಪ್ರಮಾಣ ಸರಕಾರಿ ಆಸ್ಪತ್ರೆಯ ವೆಚ್ಚಕ್ಕಿಂತ (4,452 ರೂ.) ಏಳು ಪಟ್ಟು ಹೆಚ್ಚಾಗಿದೆ ಎಂದು ಎನ್‌ಎಸ್‌ಒ ವರದಿ ತಿಳಿಸಿದೆ. ಅರ್ಧಕ್ಕಿಂತ ಹೆಚ್ಚು ಖಾಸಗಿ ಆಸ್ಪತ್ರೆಗಳು
ದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಖಾಸಗಿ ಆಸ್ಪತ್ರೆಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ ಶೇ.51.9ರಷ್ಟು ಮತ್ತು ನಗರದಲ್ಲಿ ಶೇ.61.4 ರಷ್ಟು ಖಾಸಗಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ.