Advertisement
ಈ ಹಿಂದೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅಲ್ಲದೇ ಕಳೆದ ವರ್ಷದ ಭೀಮಾನದಿಯ ಭೀಕರ ಪ್ರವಾಹ ಸಾವಿರಾರು ರೈತರ ಬದುಕು ಬೀದಿಗೆ ತಂದು ನಿಲ್ಲಿಸಿದೆ.
Related Articles
Advertisement
ರೈತ ಅಬ್ದುಲ್ ಹಮೀದ್ ಹಾಗೂ ಇನ್ನಿತರ ರೈತರು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತಂದ ನಂತರ ರಾಯಚೂರ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬಂದು ಪರಿಶೀಲನೆ ನಡೆಸಿ ಹೋಗಿದ್ದಾರೆ. ಆದರೆ ಇಲ್ಲಿಯವರೆಗೂ ಯಾವ ಕಾರಣಕ್ಕಾಗಿ ತೊಗರಿ ಬೆಳೆಗೆ ಗೊಡ್ಡು ರೋಗ ಬಾಧೆ ತಗುಲಿದೆ ಎಂಬ ವರದಿ ನೀಡುವಲ್ಲಿ ವಿಜ್ಞಾನಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡದೇ ಉಡಾಫೆ ಮಾಡುತ್ತಿದ್ದಾರೆ ಎಂದು ಟಿಪ್ಪು ಸುಲ್ತಾನ್ ಕಮಿಟಿ ಅಧ್ಯಕ್ಷ ಮೋಹಿಯುದ್ದೀನ್ ಇನಾಂದಾರ ಆರೋಪಿಸಿದ್ದಾರೆ.
ರೈತರು ಸಾಲಸೂಲ ಮಾಡಿ ಬೀಜ ಗೊಬ್ಬರ ಖರೀದಿ ಮಾಡಿ ಬಿತ್ತನೆ ಮಾಡಿದ್ದಾರೆ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನೀಡಿದ ಬೀಜವೇ ಗೊಡ್ಡು ಇರುವಾಗ ರೈತರು ನಂಬ ಬೇಕು ಯಾರಿಗೆ? ಕೂಡಲೇ ಸಂಬಂಧ ಪಟ್ಟವರು ತಾಲೂಕಿನಲ್ಲಿ ಗೊಡ್ಡು ರೋಗಕ್ಕೆ ತುತ್ತಾದ ಎಲ್ಲ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ವಿಳಂಬ ಮಾಡಿದರೇ ರೈತರೊಂದಿಗೆ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಮೋಹಿಯುದ್ದೀನ್ ಇನಾಂದಾರ ಎಚ್ಚರಿಸಿದ್ದಾರೆ.
ರೈತರಿಂದ ದೂರು ಬಂದ ನಂತರ ರಾಯಚೂರ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ರೈತರ ಹೊಲಗಳಿಗೆ ಬಂದು ತೊಗರಿ ಬೆಳೆ ಪರಿಶೀಲನೆ ನಡೆಸಿ ಹೋಗಿದ್ದಾರೆ. ಶೀಘ್ರದಲ್ಲಿಯೇ ಜಂಟಿ ಕೃಷಿ ನಿರ್ದೇಶಕರಿಗೆ ವರದಿ ನೀಡಲಿದ್ದಾರೆ. -ಡಾ| ಸಂಜೀವ್ ಬೆಲ್ಲದ, ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ ರದ್ದೇವಾಡಗಿ
-ವಿಜಯಕುಮಾರ ಎಸ್.ಕಲ್ಲಾ