Advertisement

ಭಾರತೀಯ ಫ‌ುಟ್‌ ಬಾಲಿಗರ ಶ್ರಮ ಶ್ಲಾಘಿಸಿದ ಏಷ್ಯನ್‌ ಫ‌ುಟ್‌ಬಾಲ್‌ ಕಾನ್ಫೆಡರೇಷನ್‌

01:11 PM Apr 15, 2020 | keerthan |

ನವದೆಹಲಿ: ಕೋವಿಡ್-19 ವೈರಸ್‌ ಹರಡುತ್ತಿರುವ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಿದ ಭಾರತೀಯ ಫ‌ುಟ್‌ಬಾಲ್‌ ಫೆಡರೇಷನ್‌ ಹಾಗೂ ಆಟಗಾರರಿಗೆ ಏಷ್ಯನ್‌ ಫ‌ುಟ್‌ಬಾಲ್‌ ಕಾನ್ಫೆಡರೇಷನ್‌ (ಎಎಫ್ಸಿ) ಶ್ಲಾಘನೆ ವ್ಯಕ್ತಪಡಿಸಿದೆ.

Advertisement

ಪತ್ರದ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದೆ. “ಸಂಕಷ್ಟದಲ್ಲಿರುವವರಿಗೆ ನೀವು ನೀಡಿರುವ ನೆರವು ನಿಜಕ್ಕೂ ಶ್ಲಾಘನೀಯ ಎಂದು ಪತ್ರದಲ್ಲಿ ತಿಳಿಸಿದೆ. ಭಾರತೀಯ ಫ‌ುಟ್‌ಬಾಲ್‌ ಫೆಡರೇಷನ್‌ ಪ್ರಧಾನಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದೆ.

ಆಟಗಾರರಾದ ಪ್ರೀತಮ್‌ ಕೊಟಾಲ್‌, ಪ್ರಣೋಯ್‌ ಹಲ್ದಾರ್‌, ಪ್ರಬೀರ್‌ ದಾಸ್‌ ಹಾಗೂ ಅರಿಂಧಮ್‌ ಭಟ್ಟಾಚಾರ್ಯ ವಿವಿಧ ಚಾರಿಟಿಗಳಿಗೆ ತಮ್ಮ ಕೈಯಿಂದಾದ ಹಣವನ್ನು ನೀಡಿದ್ದಾರೆ. ಜತೆಗೆ ಅನ್ನ, ನೀರು ನೀಡಿ ಬಡವರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ್ದಾರೆ.

ತಾರಾ ಆಟಗಾರರಾದ ಲಾಲ್‌ ಪೆಖ್ಲುವ ರಕ್ತದಾನ ಮಾಡಿದ್ದಾರೆ. ವಿನೀತ್‌ ತನ್ನ ಹುಟ್ಟೂರು ಕಣ್ಣೂರಿನಲ್ಲಿ ಕೋವಿಡ್-19 ಪರಿಹಾರ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ, ಈ ಎಲ್ಲ ಸೇವೆಗಳಿಗೆ ಎಎಫ್ಸಿ ಮೆಚ್ಚುಗೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next