Advertisement

ಇಂದಿನಿಂದ ಎಎಫ್ ಸಿ ಏಷ್ಯನ್‌ ಕಪ್‌ ಫ‌ುಟ್ಬಾಲ್‌ ಸಮರ

12:45 AM Jan 05, 2019 | Team Udayavani |

ಅಬುಧಾಬಿ (ಯುಎಇ): 17ನೇ ಆವೃತ್ತಿ ಎಎಫ್ ಸಿ ಏಷ್ಯನ್‌ ಕಪ್‌ ಫ‌ುಟ್‌ಬಾಲ್‌ಗೆ ಕ್ಷಣಗಣನೆ ಶುರುವಾಗಿದೆ. ಶನಿವಾರ ಕೂಟಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. ಭಾರತ ತನ್ನ ಮೊದಲ ಸೆಣಸಾಟದಲ್ಲಿ ಭಾನುವಾರ ಥಾಯ್ಲೆಂಡ್‌ ಅನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.

Advertisement

1964ರ ಬಳಿಕ ಭಾರತ: 1964ರ ಬಳಿಕ ಏಷ್ಯನ್‌ ಕೂಟದಲ್ಲಿ ಕಪ್‌ ಗೆಲ್ಲುವ ಭರವಸೆಯನ್ನು ಭಾರತೀಯರು ಮೂಡಿಸಿದ್ದಾರೆ.  ಹೀಗಾಗಿ ಸುನಿಲ್‌ ಚೆಟ್ರಿ ಬಳಗದ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ. ಒಟ್ಟಾರೆ ಕೂಟದಲ್ಲಿ 28 ಪ್ರಬಲ ತಂಡಗಳು ಕೂಟದಲ್ಲಿ ಪಾಲ್ಗೊಳ್ಳುತ್ತಿವೆ. ಭಾರತ “ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಪ್ರಬಲ ಯುಎಇ, ಥಾಯ್ಲೆಂಡ್‌ ಹಾಗೂ ಬಹೆÅàನ್‌ ತಂಡಗಳ ಸವಾಲನ್ನು ಭಾರತೀಯರು ಎದುರಿಸಬೇಕಿದೆ. ಅಷ್ಟೇ ಅಲ್ಲ ಒಟ್ಟಾರೆ ವಿಶ್ವ ಮಟ್ಟದ ಖ್ಯಾತ ತಂಡಗಳು ಭಾಗವಹಿಸಿರುವುದರಿಂದ ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆ ಎನ್ನಲಾಗಿದೆ. 1964ರಲ್ಲಿ ಭಾರತ ಕೂಟದ ಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿತ್ತು. ಆದರೆ ಇಸ್ರೇಲ್‌ ವಿರುದ್ಧ ಸೋತು ರನ್ನರ್‌ಅಪ್‌ ಆಗಿತ್ತು. ಆ ಕೂಟದಲ್ಲಿ ಒಟ್ಟಾರೆ 4 ತಂಡಗಳು ಮಾತ್ರ ಭಾಗವಹಿಸಿದ್ದವು. ಅದಾದ ಬಳಿಕ ಭಾರತೀಯರು ಇದುವರೆಗೆ ಕನಿಷ್ಠ ನಾಲ್ಕನೇ ಸ್ಥಾನವನ್ನೂ ಪಡೆಯಲು ಸಾಧ್ಯವಾಗಿಲ್ಲ.

“ಬಿ’ ಗುಂಪಿನಲ್ಲಿ ಆಸ್ಟ್ರೇಲಿಯ, ಸಿರಿಯಾ, ಪ್ಯಾಲೆಸ್ಟೈನ್‌, ಜೋರ್ಡಾನ್‌ ತಂಡಗಳಿವೆ. “ಸಿ’ ಗುಂಪಿನಲ್ಲಿ ದಕ್ಷಿಣ ಕೊರಿಯ, ಚೀನಾ, ಕಿರ್ಗಿಸ್ತಾನ್‌, ಫಿಲಿಪೈನ್ಸ್‌ ತಂಡಗಳು ಸ್ಥಾನ ಪಡೆದಿವೆ. “ಡಿ’ ಗುಂಪಿನಲ್ಲಿ ಇರಾನ್‌, ಇರಾಕ್‌, ವಿಯೆಟ್ನಾಂ ಹಾಗೂ ಯೆಮೆನ್‌ ತಂಡಗಳಿವೆ. ಗುಂಪು “ಇ’ ನಲ್ಲಿ ಸೌದಿ ಅರೇಬಿಯ, ಕತಾರ್‌, ಲೆಬನಾನ್‌ ಹಾಗೂ ಉತ್ತರ ಕೊರಿಯ ತಂಡಗಳಿದ್ದರೆ “ಎಫ್’ ಗುಂಪಿನಲ್ಲಿ ಜಪಾನ್‌, ಉಜ್ಬೇಕಿಸ್ತಾನ, ಓಮನ್‌ ಹಾಗೂ ತುರ್ಕಮೇನಿಸ್ತಾನ್‌ ತಂಡಗಳು ಸ್ಥಾನ ಪಡೆದಿವೆ. ಜಪಾನ್‌ 4 ಸಲ ಟ್ರೋಫಿ ಮೇಲೆ ಹಿಡಿತ ಸಾಧಿಸಿದ್ದು ಕೂಟದ ಬಲಿಷ್ಠ ತಂಡ ಎನಿಸಿಕೊಂಡಿದೆ.

4 ನಗರ, 8 ಕ್ರೀಡಾಂಗಣ: ಅಬುಧಾಬಿಯ ಮೂರು, ದುಬೈನ ಎರಡು, ಅಲ್‌ ಐನ್‌ ನ 2 ಹಾಗೂ ಶಾರ್ಜಾದ 1 ಸೇರಿದಂತೆ ಒಟ್ಟು ಯುಎಇ (ಯುನೈಟೆಡ್‌ ಅರಬ್‌ ಎಮಿರೆಟ್ಸ್‌)ನ 4 ಪ್ರಮುಖ ನಗರದ 8  ಕ್ರೀಡಾಂಗಣದಲ್ಲಿ ಫೆ.1ರ ತನಕ ಪಂದ್ಯಗಳು  ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next