Advertisement

ಕ್ವಾರಂಟೈನ್‌ ಅಸಮರ್ಪಕ ನಿರ್ವಹಣೆ: ಭಾಷಾ ಪಟೇಲ್‌

06:58 PM Jun 29, 2020 | Naveen |

ಅಫಜಲಪುರ: ಅನ್ಯ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್‌ ಮಾಡುವಲ್ಲಿ ಅಸಮರ್ಪಕತೆ ತೋರಿದ್ದರಿಂದಲೇ ಕೋವಿಡ್  ಪ್ರಕರಣಗಳು ಹೆಚ್ಚಳವಾಗುತ್ತಿವೆ ಎಂದು ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಭಾಷಾ ಪಟೇಲ್‌ ಹಸರಗುಂಡಗಿ ಆರೋಪಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ, ಗೋವಾ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಬಂದ ಕೂಲಿ ಕಾರ್ಮಿಕರನ್ನು ತಾಲೂಕು, ಪುರಸಭೆ, ಗ್ರಾ.ಪಂ ಆಡಳಿತದ ವತಿಯಿಂದ ಲಕ್ಷಾಂತರ ರೂ. ಖರ್ಚು ಮಾಡಿ ಕ್ವಾರಂಟೈನ್‌ದಲ್ಲಿ ಇಡಲಾಗಿತ್ತು. ಆದರೆ ಅವರ ಗಂಟಲು ಮಾದರಿ ಪರೀಕ್ಷೆ ಬರುವ ಮುನ್ನವೆ ಮನೆಗೆ ಕಳುಹಿಸಿದ್ದರಿಂದ ಕೋವಿಡ್‌-19 ಪ್ರಕರಣಗಳು ಹೆಚ್ಚಾಗಿವೆ ಎಂದರು.

ಕೂಡಲೇ ಸಂಬಂಧಪಟ್ಟವರು ಈ ಕುರಿತು ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಕ್ವಾರಂಟೈನ್‌ ನೀತಿ ಖಂಡಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next