Advertisement
ತಾಲೂಕಿನ ಬನ್ನಟ್ಟಿ ಗ್ರಾಮದಲ್ಲಿ ಲೋಕಸಭೆ ಚುನಾವಣೆ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಕೋಲಿ ಸಮಾಜಬಾಂಧವರು ನಿಷ್ಠಾವಂತರು, ವಿಶ್ವಾಸಿಕರು. ಜೊತೆಗೆ ಬಹಳಷ್ಟು ಮುಗ್ದರಾಗಿದ್ದಾರೆ. ಅಲ್ಲದೆ ನಿರ್ಣಾಯಕ ಮತದಾರರಾಗಿದ್ದಾರೆ ಎಂದರು.
ಸಮಾಜದ ಆಶಯಗಳಿಗೆ ದಿ. ವಿಠ್ಠಲ ಹೇರೂರ ಅವರ ಆಶಯಗಳಿಗೆ ಕೊಳ್ಳಿ ಇಟ್ಟು ಮೈ ಕಾಯಿಸಿಕೊಂಡಿದ್ದಾರೆ. ಇಂತಹ ಮೋಸದ ನಾಯಕನನ್ನು ಸೋಲಿಸುವ ಭೀಷ್ಮ ಪ್ರತಿಜ್ಞೆ
ತೊಟ್ಟಿದ್ದೇನೆ ಎಂದರು. ಕೋಲಿ ಸಮಾಜ ಎಸ್.ಟಿಗೆ ಸೇರುವ ಕಾಲ ಸನ್ನಿಹಿತವಾಗಿದೆ. ಕೋಲಿ ಸಮಾಜವನ್ನು ಎಸ್.ಟಿಗೆ ಸೇರ್ಪಡೆ
ಮಾಡಿಸುತ್ತೇವೆಂದು ಬಿಜೆಪಿಯವರು ಭರವಸೆ ಕೊಟ್ಟಿದ್ದರಿಂದಲೇ ನಾನು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಮಲ್ಲಿಕಾರ್ಜುನ ಖರ್ಗೆ
ಹಾಗೂ ಕಾಂಗ್ರೆಸ್ ಪಕ್ಷದವರು ಕೋಲಿ ಸಮಾಜ ಎಸ್.ಟಿಗೆ ಸೇರಿಸುತ್ತೇವೆಂದು ಸುಳ್ಳು ಹೇಳಿ ಕಾಲಹರಣ ಮಾಡಿದ್ದಾರೆ. ಹೀಗಾಗಿ ಈ ಬಾರಿ ತಾವು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಯಾವುದೇ ಷರತ್ತಿಲ್ಲದೆ
ಸೇರ್ಪಡೆಯಾಗಿದ್ದೇವೆ. ಡಾ| ಉಮೇಶ ಜಾಧವ ಅವರನ್ನು ನಾವು ಗೆಲ್ಲಿಸಿ ಕಳುಹಿಸಿದರೆ ಕೋಲಿ ಸಮಾಜ ಎಸ್.ಟಿಗೆ ಸೇರ್ಪಡೆಯಾಗುವುದು ಖಂಡಿತ ಎಂದು ಹೇಳಿದರು. ಕಲಬುರಗಿಯಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಕೋಲಿ ಸಮಾಜವನ್ನು ಮರೆಯುವುದಿಲ್ಲ ಎಂದಿದ್ದಾರೆ. ಹೀಗಾಗಿ ಅವರ ನೆನಪಿನಲ್ಲಿ ಕೋಲಿ ಸಮಾಜ ಇದೆ. ಆದ್ದರಿಂದ ತಾಲೂಕಿನ ಸಮಾಜ
ಬಾಂಧವರು ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರಲ್ಲದೇ, ಪ್ರಧಾನಿ ಮೋದಿ ದೇಶಕ್ಕೆ
ಚೌಕಿದಾರರಾದರೆ ನಾನು ಕೋಲಿ ಸಮಾಜಕ್ಕೆ ಚೌಕಿದಾರನಾಗಿದ್ದೇನೆ ಎಂದರು. ಡಾ| ಉಮೇಶ ಜಾಧವ ಮಾತನಾಡಿ, ಈ ಬಾರಿ ತಮಗೆ ಮತ ನೀಡಿ ಗೆಲ್ಲಿಸಿದರೆ ಕೋಲಿ ಸಮಾಜವನ್ನು ಎಸ್.ಟಿಗೆ ಸೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದರ ಜೊತೆಗೆ ಈ ಭಾಗದ ಅಭಿವೃದ್ದಿಗೆ ಕೂಲಿಯಾಳಿನಂತೆ ದುಡಿಯುವುದಾಗಿ ತಿಳಿಸಿದರು. ಶಾಸಕ
ದತ್ತಾತ್ರೇಯ ಪಾಟೀಲ ರೇವೂರ (ಬಿ), ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಡಾ| ಎ.ಬಿ. ಮಾಲಕರೆಡ್ಡಿ ಹಾಗೂ ಇತರರು ಇದ್ದರು.