Advertisement

ಭೀಮಾ ನದಿಗೆ ಮೂವತ್ತು ಸಾವಿರ ಕ್ಯೂಸೆಕ್‌ ನೀರು

06:22 PM Oct 13, 2019 | Naveen |

ಅಫಜಲಪುರ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ 30 ಸಾವಿರ ಕ್ಯೂಸೆಕ್‌ ನೀರು ಬಿಡಲಾಗಿದೆ ಎಂದು ಕೆಎನ್‌ಎನ್‌ಎಲ್‌ ಇಇ ಅಶೋಕ ಆರ್‌. ಕಲಾಲ್‌, ಎಇಇ ಲಕ್ಷ್ಮೀಕಾಂತ ತಿಳಿಸಿದ್ದಾರೆ.

Advertisement

ಮಹಾರಾಷ್ಟ್ರದಲ್ಲಿ ಇನ್ನು ಮಳೆ ಆಗುತ್ತಿರುವುದರಿಂದ ಅಲ್ಲಿನ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಹೆಚ್ಚಾದ ನೀರನ್ನು ನದಿ ಮೂಲಕ ಹರಿಬಿಡಲಾಗುತ್ತಿದ್ದು, ಸದ್ಯ ತಾಲೂಕಿನ ಭೀಮಾ ನದಿಗೆ ಹೆಚ್ಚಿನ ನೀರು ಬರುತ್ತಿದೆ ಎಂದು ತಿಳಿಸಿದ್ದಾರೆ.

ಈ ವರ್ಷ ಆಗಸ್ಟ್‌ 5 ರಿಂದ ಅಕ್ಟೋಬರ್‌ 12ರ ವರೆಗೆ 63,83,449
ಕ್ಯೂಸೆಕ್‌ (190.37 ಟಿಎಂಸಿ ಅಡಿ) ನೀರು ಭೀಮಾ ನದಿಗೆ ಹರಿದು ಬಂದಿದೆ. ಆಗಸ್ಟ್‌ 5 ರಿಂದ ಆಗಸ್ಟ್‌ 21ರ ವರೆಗೆ 14,11,500 (121.95) ಟಿಎಂಸಿ ಅಡಿ ನೀರು ಬಂದಿದೆ. ನಂತರ ಸೆಪ್ಟೆಂಬರ್‌ 8 ರಿಂದ ಸೆ. 26ರ ವರೆಗೆ 4,64,04 ಕ್ಯೂಸೆಕ್‌ (40.09 ಟಿಎಂಸಿ) ನೀರು ಬಂದಿದೆ.
ಸೆ. 8 ರಿಂದ ಅಕ್ಟೋಬರ್‌ 12ರ ವರೆಗೆ 3,27,945 ಕ್ಯೂಸೆಕ್‌ (28.33 ಟಿಎಂಸಿ) ನೀರು ಹರಿದು ಬಂದಿದೆ.

ಸದ್ಯ ಭೀಮಾ ಬ್ಯಾರೇಜ್‌ನಿಂದ ಮೂರು ಗೇಟ್‌ಗಳಿಂದ ನೀರು ಹೊರ ಬಿಡಲಾಗುತ್ತಿದೆ. ಒಂದು ಗೇಟ್‌ನಿಂದ ವಿದ್ಯುತ್‌ ಉತ್ಪಾದನೆಗಾಗಿ ನೀರು ಬಿಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next