ಮಲ್ಪೆ: ಜಾನಪದ ಕಲೆಗಳು ಬದುಕಿನಲ್ಲಿ ಸೌಂದರ್ಯ ಪ್ರಜ್ಞೆಯನ್ನು ಕೊಡುತ್ತವೆ. ಸೌಂದರ್ಯ ಪ್ರಜ್ಞೆ ಉಳ್ಳವ ದೇಶೀಯ ಜೀವನ ಪದ್ಧತಿ, ಕಲೆ, ಕಲಾವಿದನನ್ನು ಪ್ರೀತಿಸುತ್ತಾನೆ, ಸಾಮರಸ್ಯದ ಬದುಕನ್ನು ಪ್ರೀತಿಸುತ್ತಾನೆ.
ದೇಶದ ಬಹುದೊಡ್ಡ ಸಂಪತ್ತಾಗಿರುತ್ತಾನೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.
ಅವರು ರವಿವಾರ ಮಲ್ಪೆ ಹನು ಮಾನ್‌ವಿಠೊಭ ಭಜನ ಮಂದಿರದ ಬ್ರಹ್ಮಕಲಶ ಕಾರ್ಯಕ್ರಮದ ಸಮಾ ರೋಪ ಸಮಾರಂಭವನ್ನು ಉದ್ಘಾಟಿಸಿ ಬಳಿಕ ಸಮ್ಮಾನವನ್ನು ಸೀÌಕರಿಸಿ ಮಾತನಾಡಿದರು.
ಬೆಂಗಳೂರು ಹರಿದಾಸರ ಸಂಘದ ಅಧ್ಯಕ್ಷ ಹರಾ ನಾಗರಾಜ್ ಆಚಾರ್ಯ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೈಲಕರೆ ನಾಗಬನ ಸೇವಾ ಸಮಿತಿ ಅಧ್ಯಕ್ಷ ಸದಾನಂದ ಸಾಲ್ಯಾನ್, ಉಡುಪಿ ಜಿಲ್ಲಾ ಭಜನ ಮಂಡಳಿ ಒಕ್ಕೂಟದ ಅಧ್ಯಕ್ಷ ಭೋಜರಾಜ್ ಆರ್. ಕಿದಿಯೂರು, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಉದ್ಯಮಿಗಳಾದ ಸುಭಾಷ್ ಮೆಂಡನ್, ವಾಮನ ಮೆಂಡನ್, ಕನಕೋಡ ಶ್ರೀ ಪಂಡರೀನಾಥ ಭಜನಾ ಮಂದಿರ ಮಾಜಿ ಅಧ್ಯಕ್ಷ ಶಿವರಾಮ್ ಪುತ್ರನ್, ಮತೊÕ éàದ್ಯಮಿಗಳಾದ ಸುಧಾಕರ ಕುಂದರ್, ಗುರುದಾಸ್ ಸುವರ್ಣ, ದಯಾನಂದ ಕೋಟ್ಯಾನ್, ಅನ್ಸರ್ ಮಲ್ಪೆ, ನಗರಸಭಾ ಸದಸ್ಯೆ ಎಡ್ಲಿನ್ ಕರ್ಕಡ, ಹನುಮಾನ್ ವಿಠೊಭ ಭಜನ ಮಂದಿರದ ಅಧ್ಯಕ್ಷ ಶೇಖರ್ ಎಸ್. ಪುತ್ರನ್, ಗೌರವ ಸಲಹೆಗಾರ ಸುಂದರ ಪಿ. ಸಾಲ್ಯಾನ್, ರುಖುಮಾಯಿ ಮಹಿಳಾ ಮಂಡಳಿಯ ಅಧ್ಯಕ್ಷೆ ಮೋಹಿನಿ ಪ್ರಭಾಕರ್ ಉಪಸ್ಥಿತರಿದ್ದರು.
ಸಮ್ಮಾನ-ಗೌರವಾರ್ಪಣೆ
ಸಮಾಜ ಸೇವಕ ವಿಶ್ವನಾಥ್ ಶೆಣೈ, ಯೋಗಾಸನ ಮತ್ತು ನೃತ್ಯದಲ್ಲಿ ಗಿನ್ನೆಸ್ ದಾಖಲೆಗೈದ ತನುಶ್ರೀ ಪಿತ್ರೋಡಿ, ಮಣಿಪಾಲದ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೆರವಾಗುವ ಲಕ್ಷ್ಮಣ ಬಂಗೇರ ಮತ್ತು ಶಿಲ್ಪಿ ಬಾಬಣ್ಣ ಶಿವಮೊಗ್ಗ ಅವರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಿಸಲಾಯಿತು.
ಹನುಮಾನ್ ವಿಠೊಭ ಭಜನ ಮಂದಿರದ ಗೌರವಾಧ್ಯಕ್ಷ ಜಗನ್ನಾಥ್ ಎಸ್. ಮೈಂದನ್, ಅಧ್ಯಕ್ಷ ಶೇಖರ್ ಎಸ್. ಪುತ್ರನ್, ರುಖುಮಾಯಿ ಮಹಿಳಾ ಮಂಡಲ ಅಧ್ಯಕ್ಷೆ ಮೋಹಿನಿ ದಂಪತಿಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನಿಂದ ಗೌರವಿಸಲಾಯಿತು.
ಗಿರೀಶ್ ಮೈಂದನ್ ಸ್ವಾಗತಿಸಿ, ಸತೀಶ್‌ಚಂದ್ರ ಶೆಟ್ಟಿ ವಂದಿಸಿದರು. ಧನಂಜಯ ಕಾಂಚನ್ ಅವರು ವರದಿ ವಾಚಿಸಿದರು.