ಹೊಸದಿಲ್ಲಿ : 2019ರ ಏರೋ ಇಂಡಿಯಾ ಫೆಬ್ರವರಿ 20ರಿಂದ 24ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ; ಲಕ್ನೋದಲ್ಲಿ ಅಲ್ಲ ಎಂಬುದೀಗ ಖಚಿತವಾಗಿದೆ.
2019ರ ಏರ್ ಇಂಡಿಯಾ ಶೋ ಗೆ ಸರಕಾರ ಬೆಂಗಳೂರನ್ನೇ ಆತಿಥೇಯ ನಗರವನ್ನಾಗಿ ಉಳಿಸಿಕೊಳ್ಳಲು ನಿರ್ಧರಿಸಿದೆ. ಈ ಹಿಂದಿನ ವರದಿಗಳ ಪ್ರಕಾರ 2019ರ ಏರ್ ಶೋ ಲಕ್ನೋದಲ್ಲಿ ನಡೆಯುವುದೆಂದು ಹೇಳಲಾಗಿತ್ತು.
ಐದು ದಿನಗಳ ಈ ಏರೋ ಇಂಡಿಯಾ ಶೋ ನಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಕೈಗಾರಿಕೆಗಳ ಪ್ರಮುಖ ವಾಣಿಜ್ಯ ಪ್ರದರ್ಶನ ನಡೆಯಲಿದ್ದು ಅದರ ಜತೆಗೆ ಸಾರ್ವಜನಿಕರಿಗೆ ಮೈನವಿರೇಳಿಸುವ ಏರ್ ಶೋ ನಡೆಯಲಿದೆ.
ದೇಶೀಯ ವಾಯು ಯಾನ ಕೈಗಾರಿಕೆಗೆ ಈ ಕಾರ್ಯಕ್ರಮವು ಮಹತ್ವದ ಬೂಸ್ಟ್ ನೀಡಲಿದೆಯಲ್ಲದೆ ಕೇಂದ್ರ ಸರಕಾರದ ಮೇಕ್ ಇನ್ ಇಂಡಿಯಾ ಯೋಜನೆಗ ವಿಶೇಷ ಪ್ರಾಮುಖ್ಯ ನೀಡಲಿದೆ.
ಬೆಂಗಳೂರಿನಲ್ಲಿ 1996ರಲ್ಲಿ ಏರೋ ಇಂಡಿಯಾ ಮೊದಲ ಆವೃತ್ತಿ ನಡೆದಿತ್ತು. ಕಳೆದ ತಿಂಗಳಲ್ಲಿ ಇದನ್ನು ಉತ್ತರ ಪ್ರದೇಶದ ಲಕ್ನೋಗೆ ವರ್ಗಾಯಿಸಲಾಗುವುದೆಂಬ ವಿವಾದ ಸೃಷ್ಟಿಯಾಗಿತ್ತು.