Advertisement

ಪರ್ಕಳ-ಹೆರ್ಗ ವ್ಯಾಪ್ತಿಯಲ್ಲಿ ಏರಿಯಲ್‌ ಬಂಚಡ್‌ ಕೇಬಲ್‌ ಅಳವಡಿಕೆ

06:50 AM May 15, 2018 | Team Udayavani |

ಪರ್ಕಳ:ಅನೇಕ ವರ್ಷಗಳಿಂದ  ವಿದ್ಯುತ್‌ ಪೂರೈಕೆಯಲ್ಲಿ  ಆಗುವ ತೊಂದರೆಗಳಿಂದ  ಅನಿಶ್ಚಿತತೆಯನ್ನು ಅನುಭವಿಸುತ್ತಿದ್ದ  ಉಡುಪಿ ನಗರಸಭಾ ವ್ಯಾಪ್ತಿಯ  ಗ್ರಾಮೀಣ ಪ್ರದೇಶವಾದ  ಪರ್ಕಳ-ಹೆರ್ಗ ವ್ಯಾಪ್ತಿಯ ಗ್ರಾಹಕರ ಸಮಸ್ಯೆಗೆ ಇನ್ನು ಮುಕ್ತಿ. 

Advertisement

ಕಾರಣ ವಿದ್ಯುತ್‌ ಪೂರೈಕೆಯಲ್ಲಿ ನಿರಂತರತೆ, ಸುರಕ್ಷತೆ, ಸೋರಿಕೆ ತಡೆಗಟ್ಟಲು ಮೆಸ್ಕಾಂ ಇಲ್ಲಿ ಏರಿಯಲ್‌ ಬಂಚಡ್‌ ಕೇಬಲ್‌ನ್ನು ಅಳವಡಿಸಲು ಮುಂದಾಗಿದೆ. ಈ ಮಳೆಗಾಲದ ಮುನ್ನ  ಈ ಕಾಮಗಾರಿಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಏನಿದು ಏರಿಯಲ್‌ ಬಂಚಡ್‌ ಕೇಬಲ್‌? 
ಈಗಿರುವ ವಿದ್ಯುತ್‌ ಕಂಬಗಳಿಗೆ ದಪ್ಪ ಫೈಬರ್‌ ಕೋಟಿಂಗ್‌ ಇರುವ ಕೇಬಲ್‌ಗ‌ಳ ಮೂಲಕ ವಿದ್ಯುತ್‌ ಸರಬರಾಜು ಮಾಡುವ ವಿಧಾನ ಇದಕ್ಕೆ ಏರಿಯಲ್‌ ಬಂಚಡ್‌ ಕೇಬಲ್‌ (ಎಬಿಸಿ ) ತಂತ್ರಜ್ಞಾನ ಎನ್ನುತ್ತಾರೆ. ಈಗಾಗಲೇ ಇದನ್ನು ಬೆಂಗಳೂರಿನಂತಹ ನಗರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.
 
ನಿರಂತರ ದೂರು
ಉಡುಪಿ ನಗರಸಭಾ ವ್ಯಾಪ್ತಿಯ ಪರ್ಕಳ, ಹೆರ್ಗ ಪರಿಸರದಲ್ಲಿ  ಮಳೆಗಾಲ, ಬೇಸಿಗೆಯನ್ನದೇ  ರಾತ್ರಿ ವೇಳೆ ವಿದ್ಯುತ್‌ಪೂರೈಕೆ  ಕಡಿತಗೊಂಡರೆ ಮತ್ತೆ  ಮರಳಿ ವಿದ್ಯುತ್‌ ಪೂರೈಕೆಯಾಗುವುದೇ ಬೆಳಗ್ಗೆಯ ಅನಂತರವೇ. ಮೆಸ್ಕಾಂ ಇಲಾಖೆಗೆ ಈ ಕುರಿತು ನಿರಂತರ ದೂರುಗಳು ಬಂದಿದ್ದರೂ  ಯಾವುದೇ ಪ್ರಯೋಜನ ವಾಗಿರಲಿಲ್ಲ. ಆದರೆ ಹಲವಾರು ಕಾರಣಗಳನ್ನು ಮುಂದಿಟ್ಟುಕೊಂಡು ಈ ತನಕ ತನ್ನ ನಿಲುವನ್ನು ಪ್ರಕಟಿಸುತ್ತಾ ಬಂದಿರುವ ಇಲಾಖೆ ಈ ತೊಂದರೆಗಳನ್ನು  ನಿವಾರಿಸುವಲ್ಲಿ  ಇಲಾಖೆ ಬೇರೆ ನಗರಗಳಲ್ಲಿ  ಅಳವಡಿಸಿದಂತೆ ಪರ್ಕಳ ವ್ಯಾಪ್ತಿಯ ಗ್ರಾಮೀಣ ಪ್ರದೇಶದ  ಮುಖ್ಯ ಲೈನ್‌ಗಳಲ್ಲಿ  ಎಬಿಸಿಯನ್ನು  ಅಳವಡಿಸಲು ಮುಂದಾಗಿದೆ.

ಏನು ಪ್ರಯೋಜನ? 
ಏರಿಯಲ್‌ ಬಂಚ್‌ಡ್‌ ಕೇಬಲ್‌ಗ‌ಳಿಂದ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಆರ್ಥಿಕವಾಗಿ ಬಹಳಷ್ಟು ಉಳಿತಾಯವಾಗಲಿದೆ, ವಿದ್ಯುತ್‌ ಹರಿವಿನ ಸಂದರ್ಭದಲ್ಲಿ ಆಗುವ ನಷ್ಟವನ್ನು ತಡೆಗಟ್ಟುತ್ತದೆ.  ಗ್ರಾಮೀಣ ಪ್ರದೇಶಗಳಿಗೆ ಮಾದರಿ ಯೋಜನೆಯಾಗಿದ್ದು ವಿಭಿನ್ನ ಭೌಗೋಳಿಕ ಪ್ರದೇಶದಲ್ಲಿಯೂ ಸುಲಭವಾಗಿ ಅಳವಡಿಸಬಹುದು. ಈ ಕೇಬಲ್‌ ಅಳವಡಿಸುವುದರಿಂದ ಗ್ರಾಮೀಣ ಪ್ರದೇಶದಲ್ಲಿ  ಜೋರಾದ ಗಾಳಿಯಿಂದಾಗಿ ಮರಗಳ ಉರುಳುವಿಕೆ ಮೊದಲಾದ ಅನಾಹುತಗಳು ನಡೆದರೂ ನಿರಾಂತಕ ವಿದ್ಯುತ್‌ ಸರಬರಾಜನ್ನು ಪಡೆಯಬಹುದಾಗಿದೆ.  ವಿದ್ಯುತ್‌ ತಂತಿಗಳಿಗೆ ಫೈಬರ್‌ ಕೋಟಿಂಗ್‌ ಇರುವುದರಿಂದ ವಿದ್ಯುತ್‌ ಸೋರುವಿಕೆಯನ್ನು ತಡೆಗಟ್ಟಬಹುದಾಗಿದೆ. ಅಲ್ಲದೇ ನಿರ್ವಹಣೆಯೂ ಸುಲಭವಾಗಿದೆ.

ಸುರಕ್ಷತೆಗೆ ಆಧ್ಯತೆ
ಮೆಸ್ಕಾಂ ವ್ಯಾಪ್ತಿಯಲ್ಲಿ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗುತ್ತಿದೆ. ಸುರಕ್ಷತೆ ದೃಷ್ಠಿಯಿಂದ ವಿತರಣಾ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಉಡುಪಿ ನಗರಸಭಾ ವ್ಯಾಪ್ತಿಯ ಪರ್ಕಳ, ಹೆರ್ಗ ವ್ಯಾಪ್ತಿಯ ಮುಖ್ಯ ಲೈನ್‌ಗಳಲ್ಲಿ  ಏರಿಯಲ್‌ ಬಂಚ್‌ ಕೇಬಲ್‌ನ್ನು ಅಳವಡಿಸಲಾಗುತ್ತದೆ. ಮತ್ತು ನಿರಂತರ ವಿದ್ಯುತ್‌ ಪೂರೈಕೆಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ 
– ಸುಕೇಶ್‌, 
ಜ್ಯೂನಿಯರ್‌ ಇಂಜಿನಿಯರ್‌ ಮೆಸ್ಕಾಂ, ಪರ್ಕಳ.

Advertisement

ರಾತ್ರಿ ವಿದ್ಯುತ್‌ ಸಮಸ್ಯೆ
ಹಲವಾರು ವರ್ಷಗಳಿಂದ ನಮ್ಮ ಪರಿಸರದಲ್ಲಿ  ವಿದ್ಯುತ್‌ ಪೂರೈಕೆಯಲ್ಲಿ  ಸಾಕಷ್ಟು  ಅನಿಶ್ಚತತೆಯನ್ನು ಅನುಭವಿಸುತ್ತಿರುವ ನಾವು ಈಗಾಗಲೇ ಇಲಾಖೆಗೆ ಮನವಿ ನೀಡುತ್ತಾ ಬಂದಿದ್ದೇವೆ. ಈ ಪರಿಸರದಲ್ಲಿ ರಾತ್ರಿ ವೇಳೆ ವಿದ್ಯುತ್‌ ನಿಲುಗಡೆಯಾದರೆ ಮತ್ತೆ ಚಾಲನೆಯಾಗುವುದು ಮರುದಿನ ಬೆಳಗ್ಗೆಯ ನಂತರವೇ. ಈ ಸಮಸ್ಯೆಯನ್ನು ಪರಿಹರಿಸಲು  ಇಲಾಖೆ ಕ್ರಮ ತೆಗೆದುಕೊಳ್ಳಬೇಕು.
– ಸದಾನಂದ ಕೆ.ಸ್ಥಳೀಯರು

– ಉದಯ ಆಚಾರ್‌ ಸಾಸ್ತಾನ

Advertisement

Udayavani is now on Telegram. Click here to join our channel and stay updated with the latest news.

Next