Advertisement

Mangaluru ಎಇಪಿಎಸ್‌ ವಂಚನೆ: ಪೊಲೀಸರಿಂದ ಎಚ್ಚರಿಕೆ

08:23 PM Sep 01, 2023 | Team Udayavani |

ಮಂಗಳೂರು: ಆಧಾರ್‌ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ-ಎಇಪಿಎಸ್‌ (AEPS) ಪಾವತಿ ಸಿಸ್ಟಂನಲ್ಲಿ ವಂಚನೆ ಮಾಡುವ ಸಾಧ್ಯತೆಗಳಿದ್ದು, ಎಚ್ಚರವಾಗಿರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

Advertisement

ಎಇಪಿಎಸ್‌ ಎನ್ನುವುದು ಬ್ಯಾಂಕ್‌ ತನ್ನ ಗ್ರಾಹಕರಿಗೆ ಆಧಾರ್‌ ಲಿಂಕ್‌ ಆಗಿರುವ ಬ್ಯಾಂಕ್‌ ಖಾತೆಗಳಿಂದ ಬಯೋಮೆಟ್ರಿಕ್‌ ಉಪಯೋಗಿಸಿ ಹಣವನ್ನು ವಿದ್‌ಡ್ರಾ ಮತ್ತು ರವಾನೆಯಂತಹ ಬ್ಯಾಂಕಿಂಗ್‌ ವಹಿವಾಟುಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ವ್ಯವಸ್ಥೆಯಾಗಿದೆ.

ಆಧಾರ್‌ ಕಾರ್ಡ್‌ದಾರರು ತಮ್ಮ ಆಧಾರ್‌ ಸಂಖ್ಯೆ ಮತ್ತು ಬಯೋಮೆಟ್ರಿಕ್‌ ದೃಢೀಕರಣವನ್ನು ಬಳಸಿಕೊಂಡು ವಹಿವಾಟು ನಡೆಸಬಹುದು. ಆದರೆ ಇದರಲ್ಲಿಯೂ ಇತರ ಪಾವತಿ ವ್ಯವಸ್ಥೆಗಳಂತೆ ವಂಚನೆಯಾಗುವ ಸಾಧ್ಯತೆ ಇರುತ್ತದೆ. ಸೈಬರ್‌ ವಂಚಕರು ಬಳಕೆದಾರರ ಆಧಾರ್‌ ದತ್ತಾಂಶಗಳನ್ನು ಸರಕಾರಿ ವೆಬ್‌ಸೈಟ್‌ಗಳಿಂದ ಅಥವಾ ಇತರ ಮೂಲಗಳಿಂದ ಸಂಗ್ರಹಿಸಿ ಅದನ್ನು ಪಿಒಎಸ್‌/ಮೈಕ್ರೋ ಎಟಿಎಂ ಮೂಲಕ ಹಣ ವಿದ್‌ಡ್ರಾ ಅಥವಾ ವರ್ಗಾವಣೆ ಮಾಡುವ ಅಪಾಯವಿರುತ್ತದೆ.

ಮುಂಜಾಗ್ರತ ಕ್ರಮ
ವಂಚನೆಯಿಂದ ಸುರಕ್ಷಿತರಾಗಿರಬೇಕಾದರೆ ಬಳಕೆದಾರರು ಆಧಾರ್‌ ಕಾರ್ಡ್‌ ಬಯೋಮೆಟ್ರಿಕ್‌ ಲಾಕ್‌ ಅನ್ನು ಆಧಾರ್‌ ವೆಬ್‌ಸೈಟ್‌/ಆಧಾರ್‌ ಆ್ಯಪ್‌ ಮೂಲಕ ಸಕ್ರಿಯಗೊಳಿಸಬೇಕು. ಬ್ಯಾಂಕ್‌ ಅಧಿಕಾರಿಗಳು ಅಥವಾ ಸರಕಾರಿ ಪ್ರತಿನಿಧಿಗಳು ಸೇರಿದಂತೆ ಯಾರೊಂದಿಗೂ ಆಧಾರ್‌ ಸಂಖ್ಯೆಗಳು, ಪಿನ್‌ಗಳು ಅಥವಾ ಪಾಸ್‌ವರ್ಡ್‌ನಂತಹ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಬಾರದು. ಲಿಂಕ್‌ಗಳ ಮೇಲೆ ಕ್ಲಿಕ್‌ ಮಾಡಬಾರದು. ಅಪರಿಚಿತರಿಂದ ಬಂದ ಅಟ್ಯಾಚ್‌ಮೆಂಟ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಾರದು. ಇತ್ತೀಚಿನ ಭದ್ರತ ನವೀಕರಣಗಳು ಮತ್ತು ಆ್ಯಂಟಿವೈರಸ್‌ ಸಾಫ್ಟ್ವೇರ್‌ನೊಂದಿಗೆ ಮೊಬೈಲ್‌ ಮತ್ತು ಕಂಪ್ಯೂಟರ್‌ ಸಿಸ್ಟಂಗಳನ್ನು ನವೀಕೃತವಾಗಿರಿಸಿಕೊಳ್ಳಬೇಕು.

ಸೈಬರ್‌ ವಂಚನೆಗೊಳಗಾದರೆ ಕೂಡಲೇ ಸೈಬರ್‌ ಕ್ರೈಂ ಅಪರಾಧ ಸಹಾಯವಾಣಿ 1930 ಇದಕ್ಕೆ ಕರೆ ಮಾಡಿ ದೂರು ದಾಖಲಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next