Advertisement

ಮಾದಕ ವ್ಯಸನಗಳಿಂದ ದೂರವಿರಲು ಸಲಹೆ

12:56 PM Nov 20, 2019 | Team Udayavani |

ಬೆಳಗಾವಿ: ನಾವು ಸುರಕ್ಷಿತವಾಗಿ ಅಂತರ್ಜಾಲ ಬಳಕೆ ಮಾಡುವ ಜತೆಗೆ ಮಾದಕ ವ್ಯಸನಗಳಿಂದ ದೂರ ಇರಬೇಕು ಎಂದು ಮಕ್ಕಳ ರಕ್ಷಣಾ ಅಧಿಕಾರಿ ಲೋಕೇಶ ಹೇಳಿದರು.

Advertisement

ಯುನೈಟೆಡ್‌ ಸಮಾಜ ಕಲ್ಯಾಣ ಸಂಸ್ಥೆಯ ಚೈಲ್ಡ್‌ಲೈನ್‌ 1098 ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಂಡಿದ್ದ ಅಂತರ್ಜಾಲ ಸುರಕ್ಷತೆ ಹಾಗೂ ಮಾದಕ ವ್ಯಸನ ಮುಕ್ತಿ ಕುರಿತ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು. ದುಶ್ಚಟಗಳು ಮನುಷ್ಯನ ಜೀವನವನ್ನೇ ಹಾಳು ಮಾಡುತ್ತವೆ. ಇಂಥದರಿಂದ ದೂರ ಇದ್ದು ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಬದುಕು ಸಾರ್ಥಕಗೊಳಿಸಲು ಪ್ರತಿಯೊಬ್ಬರೂ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಅಧಿಕಾರಿ ಎಫ್‌.ಬಿ. ನದಾಫ್‌ ಮಾತನಾಡಿ, ಮಕ್ಕಳು ಹಾಗೂ ಪಾಲಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಥಾ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಮಕ್ಕಳ ಆಯೋಗದ ಸದಸ್ಯೆ ಭಾರತಿ ವಾಳ್ವೆಕರ ಜಾಥಾಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭಗೊಂಡ ಬೈಕ್‌ ಜಾಥಾ ಕಿತ್ತೂರು ಚನ್ನಮ್ಮ ವೃತ್ತ, ಬೋಗಾರವೇಸ್‌, ರೈಲ್ವೆ ನಿಲ್ದಾಣ ಮೂಲಕ ಗೋವಾವೇಸ್‌ ಬಸವೇಶ್ವರ ವೃತ್ತ ಬಳಿ ಮುಕ್ತಾಯಗೊಂಡಿತು.

ಸಂಸ್ಥೆಯ ಸಂಯೋಜಕ ಎಂ.ಕೆ. ಕುಂದರಗಿ ಜಾಥಾ ಆಯೋಜನೆ ಬಗ್ಗೆ ಮಾತನಾಡಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್‌ ಲೂದ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಉಮಾ ಭಂಡಾರಕರ, ರಾಜು ಬೋಜಪ್ಪಗೋಳ, ಬಸವರಾಜ ನಿರ್ವಾಣಿ, ಶಿವಲೀಲಾ ಹಿರೇಮಠ, ಸುಧಾ ಗಟ್ಟಿ, ನಿಂಗಪ್ಪ ಮರಿಕಟ್ಟಿ, ರಮೇಶ ಬೊಮ್ಮನವರ, ಪ್ರೀತಿ ಪಾಟೀಲ, ಕೋಮಲ ಕಮಡೊಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next