Advertisement

ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಸಲಹೆ

12:52 PM Jan 29, 2020 | Suhan S |

ಬೆಳಗಾವಿ: ಗಡಿಪ್ರದೇಶದ ಮಕ್ಕಳು ವೈಜ್ಞಾನಿಕವಾಗಿ ಮುನ್ನಡೆಯಲು ಗುರುಗಳು ಮಕ್ಕಳ ಮನಸ್ಸಿನಲ್ಲಿ ಆತ್ಮ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಹೇಳಿದರು.

Advertisement

ತಾಲೂಕಿನ ಹೊನಗಾದಲ್ಲಿರುವ ಜಂಬಗಿ ಪಪೂ ಮಹಾವಿದ್ಯಾಲಯದಲ್ಲಿ ಮಂಗಳವಾರ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸಹಯೋಗದಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಡಿಎಲ್‌ಇಪಿಸಿ-10 ಇನಸ್ಪೈರ್‌ ಅವಾರ್ಡ್‌ ಪಡೆದ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಹಾಗೂ ಸಂಶೋಧನಾತ್ಮಕ ಚಿಂತನೆಯನ್ನು ವ್ಯಕ್ತಪಡಿಸಲು ಸರಕಾರ ಇನ್‌ಸ್ಪೆçರ್‌ ಅವಾರ್ಡ್‌ದಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಮಕ್ಕಳಿಗೆ ವೇದಿಕೆ ನೀಡುತ್ತಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಂಡು ಯುವ ವಿಜ್ಞಾನಿಗಳಾಗಬೇಕು ಎಂದು ಹಾರೈಸಿದರು. ಡಯಟ್‌ ಉಪನಿರ್ದೇಶಕ ಎಂ.ಎಂ. ಸಿಂಧೂರ ಮಾತನಾಡಿ, ಮಕ್ಕಳಿಗೆ ಮನಸ್ಸು ಮತ್ತು ಪರಿಶ್ರಮ ವಿದ್ಯಾರ್ಥಿ ಜೀವನದಲ್ಲಿ ಬಹಳ ಮುಖ್ಯವಾದದ್ದು,ಶಿಕ್ಷಣ ಅಭಿವೃದ್ಧಿ ಮನೋಧರ್ಮವನ್ನುಹೊಂದಿದವರು ಮಾತ್ರ ಶಿಕ್ಷಣ ಸಂಸ್ಥೆಗಳನ್ನು ಕಟ್ಟುತ್ತಾರೆ ಎಂದು ಹೇಳಿದರು.

ಪ್ರೌಢ ಶಾಲಾ ಮಕ್ಕಳಿಗಾಗಿ ಸಿದ್ಧಪಡಿಸಿದ ವಿಜ್ಞಾನ ಪಠ್ಯವಸ್ತುವಿನಲ್ಲಿ ಬರುವ ಪ್ರಯೋಗಗಳ ಹೊತ್ತಿಗೆ ವಿಜ್ಞಾನ ದೀಪ್ತಿಯನ್ನು ಬಿಡುಗಡೆಗೊಳಿಸಲಾಯಿತು. 2018-19ನೇ ಸಾಲಿನಲ್ಲಿ ಇನಸ್ಪೆ çರ್‌ ಕಾರ್ಯಕ್ರಮದ ಸ್ಫೂರ್ತಿಯೊಂದಿಗೆ ಜಪಾನಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಸನ್ನ ಶಿರಹಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿದರು . ಸಹನಿರ್ದೇಶಕ ಪ್ರಸನ್ನಕುಮಾರ, ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಬಿ.ಪುಂಡಲೀಕ, ಗಜಾನನ ಮನ್ನಿಕೇರಿ, ಜಂಬಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಲಕ್ಷ್ಮಣ ಜಂಬಗಿ ಇದ್ದರು. ಪಿ.ಬಿ. ಪಾಟೀಲ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next