ಸೈದಾಪುರ: ಕ್ರೀಡಾಪಟುಗಳು ಸೋತಾಗ ಮಾನಸಿಕವಾಗಿ ಕುಗ್ಗದೆ ಸೋಲು, ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಸೋಲೇ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬೇಕು ಎಂದು ಗ್ರಾಪಂ ಸದಸ್ಯ ರಾಕೇಶ ಕೋರೆ ಸಲಹೆ ನೀಡಿದರು.
ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕ್ರೀಡೆಯು ಒತ್ತಡದಲ್ಲಿರುವ ಮನುಷ್ಯನ ಮನಸ್ಸು ನಿಯಂತ್ರಿಸಿ ಸದಾ ಆರೋಗ್ಯ ಮತ್ತು ಚೈತನ್ಯದಿಂದ ಇರುವಂತೆ ಮಾಡುತ್ತದೆ. ದೈಹಿಕ ಸಾಮರ್ಥ್ಯ ಸದೃಢಗೊಳಿಸುತ್ತದೆ. ಇಂದಿನ ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಆರೋಗ್ಯ ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಈ ಪಂದ್ಯಾವಳಿಯಲ್ಲಿ ಸುಮಾರು 25 ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯಲ್ಲಿ ಜಯಗಳಿಸಿದ ತಂಡಕ್ಕೆ ಮೊದಲನೇ ಬಹುಮಾನವನ್ನು ಗ್ರಾಪಂ ಸದಸ್ಯ ರಾಕೇಶ ಕೋರೆ, ದ್ವಿತೀಯ ಬಹುಮಾನ ಜೆಡಿಎಸ್ ಯುವ ಮುಖಂಡ ಅರುಣುಕುಮಾರ ಜೇಗರ್ ಹಾಗೂ ಪಂದ್ಯಾವಳಿಗೆ ಮುಲಭೂತ ಸೌಕರ್ಯವನ್ನು ಗ್ರಾಪಂ ಮಾಜಿ ಸದಸ್ಯ ಬಂದು ಕಟ್ಟಿಮನಿ ರಾಂಪೂರ ಒದಗಿಸಿ ಕ್ರೀಡಾಪಟುಗಳಿಗೆ ನೆನಪಿನ ಕಾಣಿಕೆ ನೀಡಿದರು.
ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಗಂಗಾಧರ ಯಳಗೇರಾ, ರಾಘವೇಂದ್ರ ಗುಡ್ಲಗುಂಟಿ ಜೋಡಿ, ದ್ವಿತೀಯ ಬಹುಮಾನ ದೇವು ವಟಡವಟ್, ನವೀನ ವಡವಟ್ ಜೋಡಿ ಜಯಗಳಿಸಿತು. ಈ ಸಂದರ್ಭದಲ್ಲಿ ಜೆಡಿಎಸ್ ಯುವ ಮುಖಂಡ ಬಂದು ರಾಂಪೂರ, ಅರುಣಕುಮಾರ ಜೇಗರ್, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ನಾಯಕ, ಸಿಆರ್‌ಪಿ ಸುಬ್ರಮಣಿ, ಶಿಕ್ಷಕರಾದ ವಿರಪಾಕ್ಷಪ್ಪ ಗದಗ, ಇಸ್ಮಾಯಿಲ್, ಚಂದ್ರಶೇಖರ, ತಿಪ್ಪೆಸ್ವಾಮಿ, ಮೃಂತ್ಯುಜಯ, ಚೇತನ್, ಪಂದ್ಯಾವಳಿ ಆಯೋಜಕರಾದ ಶಂಕರ ವಡವಟ್, ಅವಿನಾಶ ಮನ್ನೆ, ಅಂಜನೇಯ ವಡವಟ್ ಇದ್ದರು.