Advertisement

ರಾಜ್ಯ ಸರ್ಕಾರ ಅನುದಾನ ಸದ್ಬಳಕೆಯಾಗಲು ಸಲಹೆ

03:11 PM Feb 01, 2022 | Team Udayavani |

ಕೆಂಭಾವಿ: ಮೂಲ ಸೌಲಭ್ಯಕ್ಕಾಗಿ ಮೀಸಲಿರುವ ಅನುದಾನ ಸದ್ಬಳಕೆಯಾದಾಗ ಮಾತ್ರ ಜನತೆಗೆ ನೆಮ್ಮದಿ ಸಿಗುತ್ತದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

Advertisement

ನಾಗನೂರ ಗ್ರಾಮದಲ್ಲಿ ಜಲಜೀವನ ಮಷಿನ್‌ ಯೋಜನೆಯಡಿ ನಡೆಯುತ್ತಿರುವ ಬೃಹತ್‌ ಕುಡಿಯುವ ನೀರಿನ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ನಾಗನೂರ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಬೃಹತ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರೊದಗಿಸಲು ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಎರಡು ಬೃಹತ್‌ ಕುಡಿಯುವ ನೀರಿನ ಟ್ಯಾಂಕ್‌, ಎರಡು ತೆರೆದ ಬಾವಿಗಳು ನಿರ್ಮಾಣವಾಗುತ್ತಿದ್ದು ಇದರಿಂದ ಸುಮಾರು 723 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಕುಡಿಯುವ ನೀರಿನ ಕೊರತೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಜನತೆ ಅಧಿಕಾರಿಗಳಿಗೆ ಸಹಕಾರ ನೀಡಿ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಚಿಂಚೋಳಿ, ಮುಖಂಡರಾದ ಶಿವಮಹಾಂತ ಚಂದಾಪೂರ, ಬಸನಗೌಡ ಹೊಸಮನಿ ಯಾಳಗಿ, ಅಶೋಕ ಗೂಗಲ್‌, ಶಿವರಾಜ ಬೂದೂರ, ವಿನಯರೆಡ್ಡಿ ಗೂಗಲ್‌, ಹಳ್ಳೆಪ್ಪ ಹವಾಲ್ದಾರ್‌, ಚನ್ನಾರೆಡ್ಡಿ ದೇಸಾಯಿ, ರುದ್ರಗೌಡ ವಣಕ್ಯಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next