Advertisement

ಔಷಧ ಬಳಕೆ ಜಾಗೃತಿ ಮೂಡಿಸಲು ಸಲಹೆ

01:43 PM Sep 26, 2017 | Team Udayavani |

ಕಲಬುರಗಿ: ಫಾರ್ಮಾಸಿಸ್ಟ್‌ರರು ತಮ್ಮ ಔಷಧಿಗಳ ವಿವರಣೆ ಹಾಗೂ ಮಾಹಿತಿ ಜತೆಗೆ ಬಳಕೆ ಕುರಿತಾಗಿಯೂ ಜಾಗೃತಿ ಮೂಡಿಸಬೇಕು ಎಂದು ಗುಲಬರ್ಗಾ ಸರ್ಕಾರಿ ವೈದ್ಯಕೀಯ ಕಾಲೇಜಿನ (ಜಿಮ್ಸ್‌) ನಿರ್ದೇಶಕ ಡಾ| ರವಿ ರಾಠೊಡ ಹೇಳಿದರು.

Advertisement

ನಗರದ ಜಿಮ್ಸ್‌ ವೈದ್ಯಕೀಯ ವಿಜ್ಞಾನ ಸಂಸ್ಥೆ ಪರಿಸರದಲ್ಲಿರುವ ಶುಶ್ರೂಷಕರ ಮಹಾವಿದ್ಯಾಲಯದ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್‌ ಸಂಘದ ವತಿಯಿಂದ ಸೋಮವಾರ ನಡೆದ ವಿಶ್ವ ಫಾರ್ಮಾಸಿಸ್ಟ್‌ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಹಾಗೂ ನಿವೃತ್ತ ಫಾರ್ಮಾಸಿಸ್ಟ್‌ರರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಆ್ಯಂಟಿಬಯಾಟಿಕ್‌ ಇನ್ನಿತರ ಔಷಧಗಳ ದುರ್ಬಳಕೆ ಹೆಚ್ಚಿದ್ದರಿಂದ ಫಾಮಾಸಿಸ್ಟ್‌ರ ಸೇವೆ ಬಹಳ ಮುಖ್ಯವಾಗಿದೆ. ಹೀಗಾಗಿ ಫಾರ್ಮಸಿಸ್ಟರ್‌ ಸೇವೆಯೂ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ಸಲಹೆ ನೀಡಿದರು.

ಗುಲಬರ್ಗಾ ಸರ್ಕಾರಿ ವೈದ್ಯಕೀಯ ಕಾಲೇಜಿಗೆ (ಜಿಮ್ಸ್‌) ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವೈದ್ಯ ಕಾಲೇಜುಗಳಲ್ಲಿಯೇ ಬೆಸ್ಟ್‌ ಮೆಡಿಕಲ್‌ ಕಾಲೇಜು ಎಂಬ ಪ್ರಶಸ್ತಿ ಲಭಿಸಿದೆ ಎಂದು ನಿರ್ದೇಶಕ ಡಾ| ರವಿ ರಾಠೊಡ ಹಾಗೂ ವೈದ್ಯಕೀಯ ಅಧೀಕ್ಷಕ ಡಾ| ಶಿವಕುಮಾರ ಸಿ.ಆರ್‌. ಇದೇ ಸಂದರ್ಭದಲ್ಲಿ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ ಮಾತನಾಡಿ, ಸರ್ಕಾರವು ಜನರಿಗೆ ಎಲ್ಲ ತೆರನಾದ ಔಷಧ ಸಿಗಲಿ ಎಂಬ ಕಾರಣದಿಂದಲೇ ಔಷಧ ಖರೀದಿಗೆ ನೀಡುತ್ತಿದ್ದ ಅನುದಾನ ಮೊತ್ತವನ್ನು 130 ಕೋಟಿಯಿಂದ 350 ಕೋಟಿಗೆ ಹೆಚ್ಚಿಸಿದೆ ಎಂದು ಹೇಳಿದರು. ಜಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ| ಶಿವಕುಮಾರ ಸಿ.ಆರ್‌, ಜಿಲ್ಲಾ ಸರ್ಜನ್‌ ಡಾ| ಬಿ.ಎನ್‌. ಜೋಷಿ ಮಾತನಾಡಿದರು. 

Advertisement

ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಬಿ.ಎಸ್‌.ದೇಸಾಯಿ ಮಾತನಾಡಿ, ಫಾರ್ಮಾಸಿಸ್ಟ್‌ರು ತಪ್ಪು ಔಷಧ ನೀಡಿದರೆ, ರೋಗಿಗಳು ಹಲವು ತೊಂದರೆ ಅನುಭವಿಸುತ್ತಾರೆ. ಹೀಗಾಗಿ ನಾವೆಲ್ಲರು ಹೊಣೆ ಅರಿತು ಜಾಗೃರಾಗಿ ಕಾರ್ಯನಿರ್ವಹಿಸಬೇಕು. ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಬೇಕು.

ಪ್ರತಿ ಪಿಎಚ್‌ಸಿಗೆ ಇಬ್ಬರನ್ನು ನಿಯೋಜಿಸಬೇಕು. ಕಲಬುರಗಿಯಲ್ಲಿ ಐವಿ ಪ್ಲೂಯಿಡ್‌ ತಯಾರಿಕಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನಿವೃತ್ತ ಫಾರ್ಮಾಸಿಸ್ಟ್‌ರಾದ ಸಿದ್ರಾಮಯ್ಯ, ರಹಿಮ್‌ಸಾಬ್‌, ಹೀರಾಚಂದ ಪವಾರ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಔಷಧ ತಜ್ಞ ರವಿಶಂಕರ ಅಮರಶೆಟ್ಟಿ, ಸಹಾಯಕ ಅಧೀಕ್ಷಕ ಜಿ. ಬಿ. ದೊಡ್ಡಮನಿ, ಸಂಘದ ಪದಾಧಿಕಾರಿಗಳಾದ ಅನೀಲಕುಮಾರ ರಟಕಲ್‌, ಓಂಪ್ರಕಾಶ ಬರಸಾನೋರ, ಚಂದ್ರಕಾಂತ ಅಷ್ಟಗಿ, ಈರಣ್ಣ, ಕೆ.ಪಿ. ಗಿರಿಧರ, ಸಂತೋಷ ಪಾಟೀಲ, ಭರತೇಶ ಮಾಲಗತ್ತಿ, ಸೈಯ್ಯದ್‌ ಶೌಕತ್‌ಅಲಿ, ಪ್ರಕಾಶ, ಜಯಾ ಡಂಬಳ, ರಾಚಪ್ಪ ಕರ್ಜಗಿ, ಪ್ರಮೀಳಾ, ಸುವರ್ಣ, ಶೋಭಾ, ಬಸವರಾಜ ಸಜ್ಜನ, ಗಣೇಶ ಅವರಾದಿ, ಶಿವಕುಮಾರ ಅಲ್ಲೂರ, ಚಂದ್ರಭಾಗಿರಥಿ, ಅರ್ಚನಾ ಪಾಟೀಲ, ಸುಮಲತಾ, ರೂಪಾ ಪಾಟೀಲ, ಲಿಂಗಾರಾಜ ಅವಟೆ, ಪ್ರಾಚಾರ್ಯರಾದ ಏಸ್ತರಾ, ಸುವರ್ಣ ಪಾಲ್ಗೊಂಡಿದ್ದರು. ಮಾಲಾಶ್ರೀ ಪ್ರಾರ್ಥಿಸಿದರು. ಸಂತೋಷ ಕುಮಾರ ಕುಸುಮ
ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next