Advertisement

ಸಾವಯವ ಕೃಷಿ ಪದ್ಧತಿಗೆ ಅನುರೂಪಾ ಸಲಹೆ

02:41 PM Jan 04, 2021 | Team Udayavani |

ಚಿಂತಾಮಣಿ: ಅನೇಕ ವರ್ಷಗಳ ಹಿಂದೆ ಉತ್ತಮ ಪರಿಸರವಿದ್ದು, ಸಮಯಕ್ಕೆ ಸರಿಯಾಗಿ ಮಳೆ-ಬೆಳೆಯಾಗುತ್ತಿತು. ಆರೋಗ್ಯವೂ ಉತ್ತಮವಾಗಿರು ತ್ತಿತ್ತು. ಆದರೆ ಆಧುನಿಕ ಜಗತ್ತಿನಲ್ಲಿ ರಸಗೊಬ್ಬರಗಳ ಬಳಕೆಯಿಂದ ನಾವು ಬೆಳೆಯುವ ಬೆಳೆಯಲ್ಲಿ ಪೌಷ್ಟಿಕಾಂಶ ಕುಂಠಿತಗೊಂಡು ಆರೋಗ್ಯ ಕೆಡುತ್ತಿದೆ.  ಉತ್ತಮ ಆರೋಗ್ಯಕ್ಕಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿ ಕೃಷಿ ಇಲಾಖೆಯ ಉಪನಿರ್ದೇಶಕಿ ಅನುರೂಪಾ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಮುರಗಮಲ್ಲಾ ಹೋಬಳಿ, ನಿಮ್ಮ  ಕಾಯಿಲಹಳ್ಳಿ ಗ್ರಾಮದ ಮುನಿಯಪ್ಪ ಬಿನ್‌ ಗಂಗಪ್ಪರವರ ಜಮೀನಿನಲ್ಲಿ ಆತ್ಮಾ ಯೋಜನೆಯ ಅಡಿಯಲ್ಲಿ ಹಮ್ಮಿಕೊಂಡಿದ್ದ ಸಾವಯುವ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರೈತರು ಹಳೇ ಪದ್ಧತಿಯನ್ನು ಉಪಯೋಗಿಸಿ ಕೊಳ್ಳುವುದು ಉತ್ತಮ. ಈಗಿನ ಆಧುನಿಕ ಕೃಷಿ ಪದ್ಧತಿಯ ಪದಾರ್ಥಗಳನ್ನು ಸೇವನೆ ಮಾಡುತ್ತಿರುವುದರಿಂದ ಬಹುತೇಕ ಮಂದಿಗೆ ಬಾಲ್ಯದಲ್ಲೇ ಆರೋಗ್ಯ ದಲ್ಲಿ ಏರುಪೇರಾಗುತ್ತಿದೆ. ಜೊತೆಗೆ ವಾತಾವರಣ ಪರಿಸರವೂ ಏರುಪೇರಾಗಿದೆ ಎಂದರು.

ಆತ್ಮಾ ಯೋಜನೆಯ ಉಪನಿರ್ದೇಶಕ ಸತೀಶ್‌ ಮಾತನಾಡಿ, ರೈತರಿಗೆ ಗೋವಿನ ಅದರಲ್ಲೂ ನಾಟಿಹಸುಗಳನ್ನು ರೈತರು ಪೋಷಣೆ ಮಾಡುವುದು ಉತ್ತಮ. ಇದರಿಂದ ಒಳ್ಳೆಯ ಹಾಲು, ತುಪ್ಪ, ಬೆಣ್ಣೆ ಸೇವೆನೆ ಮಾಡುವುದರಿಂದ ಪೌಷ್ಟಿಕಾಂಶ ಹೆಚ್ಚುತ್ತದೆ ಹಾಗೂ ಇದರ ಸಗಣಿಯಿಂದ ರೈತರು ಗೊಬ್ಬರತಯಾರಿಸಿ ವ್ಯವಸಾಯಕ್ಕೆ ಉಪಯೋಗಿಸಿದಾಗ ಉತ್ತಮ ರೀತಿಯ ಪೌಷ್ಟಿಕಾಂಶದ ಬೆಳೆ ಬೆಳೆಯಬಹುದು ಎಂದರು.

ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ಮಾತನಾಡಿ, ಮುಂಗಾರು ಬೆಳೆ ಸಮೀಕ್ಷೆಯನ್ನು ರೈತರು ಆ್ಯಪ್‌ ಮೂಲಕ ಅಳವಡಿಸಿಕೊಂಡಂತೆ ಹಿಂಗಾರು ಬೆಳೆಯ ಸಮೀಕ್ಷೆ ಅಳವಡಿಸಿಕೊಳ್ಳಬೇಕು. ಪಿ.ಆರ್‌ಆ್ಯಪ್‌ ಮೂಲಕ ನೋಂದಣಿ ಮಾಡಿ ಕೊಳ್ಳಬೇಕೆಂದು ಅರಿವು ಮೂಡಿಸಿದರು. ಕೃಷಿ ಅಧಿಕಾರಿ ಎಂ.ಸಿ.ಪ್ರಸಾದ್‌ ರಾಗಿ ಬೆಂಬಲ ಬೆಲೆ ಸಂಬಂಧಿಸಿದಂತೆ ಬೆಲೆ ದರ್ಶಕ ತಾಂತ್ರಂಶ ಉಪಯೋಗಿಸುವ ಮತ್ತುಆಕ್ಷೇಪಣೆ ಸಲ್ಲಿಸುವ ಬಗ್ಗೆ ತಿಳಿಸಿದರು. ಆತ್ಮ ಯೋಜನೆಯ ಸಂಜಯ್‌ ಶ್ವೇತ, ಮುನಿರಾಜು, ರಾಮಚಂದ್ರ ರೈತರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next