Advertisement

ನರೇಗಾ ಸದ್ಬಳಕೆಗೆ ಸಲಹೆ

05:25 PM Aug 09, 2019 | Team Udayavani |

ಚಿಂತಾಮಣಿ: ಪ್ರತಿಯೊಬ್ಬರು ಜಾಬ್‌ ಕಾರ್ಡ್‌ ಪಡೆದು ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಸಾಮಾಜಿಕ ಲೇಕ್ಕಪರಿಶೋಧಕ ಶ್ರೀಕಾಂತ್‌ ಸಲಹೆ ನೀಡಿದರು.

Advertisement

ತಾಲೂಕಿನ ಕೆಂಚಾರ‌್ಲಹಳ್ಳಿ ಗ್ರಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ 2018-19ನೇ ಸಾಲಿನ ಬಸವ ವಸತಿ ಯೋಜನೆ ಫ‌ಲಾನುಭವಿ ಆಯ್ಕೆ ಮತ್ತು ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನರೇಗಾ ಯೋಜನೆಯಡಿ ಕಾಮಗಾರಿ ನಡೆಸಿ ಗ್ರಾಮೀಣ ಭಾಗದ ಜನ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿ ಎಂದು ಹಾಗೂ ಕೂಲಿಗಾಗಿ ವಲಸೆ ಹೋಗುವುದು ನಿಲ್ಲಲಿ ಎಂದು ಸರ್ಕಾರ ನರೇಗಾ ಯೋಜನೆ ಜಾರಿ ಮಾಡಿದೆ. ಗ್ರಾಪಂ ವತಿಯಿಂದ ಜಾಬ್‌ ಕಾರ್ಡ್‌ ಪಡೆದು ತಮ್ಮ ಜಮೀನುಗಳಲ್ಲೇ ವಿವಿಧ ರೀತಿಯ ಕಾಮಗಾರಿಗಳನ್ನು ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ತಿಳಿಸಿದರು.

ಪಿಡಿಒ ಎನ್‌.ವಿ.ರವಿ ಮಾತನಾಡಿ, ನಮ್ಮ ಭಾಗದಲ್ಲಿ ಬರಗಾಲವಿರುವುದರಿಂದ ಸರ್ಕಾರ ಅನೇಕ ಯೋಜನೆಗಳನ್ನು ನೀಡುತ್ತಿದೆ. ಆದರೆ ಆ ಯೋಜನೆಗಳನ್ನು ಅರ್ಹ ಫ‌ಲಾನುಭವಿಗಳಿಗೆ ತಲುಪುತ್ತಿಲ್ಲ. ಕೆಲವು ಪ್ರಭಾವಿಗಳು ಮಾತ್ರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಿ ಅರ್ಹ ಫ‌ಲಾನುಭವಿಗಳು ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಗ್ರಾಮಸಭೆಯಲ್ಲಿ ಬಸವ ವಸತಿ ಯೋಜನೆಯಡಿಯಲ್ಲಿ 24 ಫ‌ಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿದ ನೋಡಲ್ ಅಧಿಕಾರಿ ತೋಟಗಾರಿಕಾ ಇಲಾಖೆಯ ರಾಜೇಶ್‌ ಅವರು ತಮ್ಮ ಇಲಾಖೆಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

Advertisement

ಕೆಂಚಾರ್ಲಹಳ್ಳಿ ಗ್ರಾಪಂ ಅಧ್ಯಕ್ಷ ಸುಜಾತಮ್ಮ, ಉಪಾಧ್ಯಕ್ಷ ಎಸ್‌.ವಿ.ನಾಗೇಶ್‌, ಗ್ರಾಪಂ ನೋಡಲ್ ಅಧಿಕಾರಿ ರಾಜೇಶ್‌, ಕಾರ್ಯದರ್ಶಿ ಸಯ್ಯದ್‌ ಕಲೀಂ, ಅಕ್ವಸಫಿ ರೂರಲ್ ಡೆವಲಪ್‌ಮೆಂಟ್ ಫೌಂಡೇಷನ್‌ನ ಗಣೇಶ್‌ ಮತ್ತು ಗ್ರಾಪಂ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next