Advertisement

ಶಾಲೆ-ಕಾಲೇಜು ಪುನರಾರಂಭ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಲಹೆ

03:57 PM Aug 23, 2020 | Suhan S |

ನ್ಯೂಯಾರ್ಕ್‌: ಸದ್ಯ ಎಲ್ಲೆಡೆ ಕೋವಿಡ್ ನಿಯಂತ್ರಣಕ್ಕಾಗಿ ಜಾರಿ ಮಾಡಿದ್ದ ಲಾಕ್‌ಡೌನ್‌ ನಿಯಮಗಳನ್ನು ಹಿಂಪಡೆದುಕೊಳ್ಳುತ್ತಿದ್ದು, ಕೆಲವೊಂದು ದೇಶಗಳು ಶೈಕ್ಷಣಿಕ ಸಂಸ್ಥೆಗಳ ಪುನರಾರಂಭಕ್ಕೂ ಮುಂದಾಗಿದೆ.  ಈ ನಡುವೆ ಶಾಲಾ ಕಾಲೇಜುಗಳು ಪ್ರಾರಂಭಗೊಂಡರೆ ಯಾವ ರೀತಿಯಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತದೆಎಂಬುದರ ಕುರಿತು ಭಾರಿ ಕುತೂಹಲ ಮೂಡಿದ್ದು, ಈ ಬಗ್ಗೆ ಚರ್ಚೆ ಶುರುವಾಗಿದೆ.

Advertisement

ಆದರೆ ಇದೀಗ ಶಾಲೆಯಲ್ಲಿ ಯಾವ ರೀತಿ ಸಾಮಾಜಿಕ ಅಂತರ ನಿಯಮ ಅಳವಡಿಸಬೇಕು ಎನ್ನುವ ಪ್ರಶ್ನೆಗೆ ಅಮೆರಿಕ ಶಿಕ್ಷಕನೊಬ್ಬರು ವಿನೂತನ ಸಲಹೆ ನೀಡಿದ್ದಾರೆ.  ಅಮೆರಿಕದ ಶಾಲೆಯೊಂದರ ರೆಕ್ಸ್  ಚಾಂಪ್ಶಾನ್‌ ಎಂಬ ಶಿಕ್ಷಕ ವಿದ್ಯಾರ್ಥಿಗಳ ಸುರಕ್ಷತೆಯನ್ನು ದೃಷ್ಟಿಯಲ್ಲಿರಿಸಿಕೊಂಡಿದ್ದು, ಮಕ್ಕಳಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿದ್ದಾರೆ. ಜತೆಗೆ ಆ  ಕುರ್ಚಿಗೆ ಪ್ರತ್ಯೇಕ ಗಾಜಿನ ಕ್ಯಾಬಿನ್‌ ಅಳವಡಿಸಿದ್ದು, ಇದರಿಂದ ಮಕ್ಕಳಿಗೆ ಹೆದರಿಕೆ ಆಗಬಾರದು ಎನ್ನುವ ಉದ್ದೇಶದಿಂದ ಟ್ರಂಕ್‌ ಎಂಜಿನ್‌ ರೀತಿ ಮಾರ್ಪಾಡು ಮಾಡಲಾಗಿದೆ. ಇನ್ನು ಸಾಮಾಜಿಕ ಜಾಲತಾಣದಲಿಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಶಿಕ್ಷಕನ ಈ ಯೋಚನೆಗೆ ನೆಟ್ಟಿಗರು ಶಹಬಾಸ್‌ಗಿರಿ ನೀಡಿದ್ದಾರೆ.

ಈ ವೀಡಿಯೋವನ್ನು ಸುಮಾರು 3.3 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸುಮಾರು 1.20 ಲಕ್ಷ ಲೈಕ್‌ ಹಾಗೂ 20 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿದೆ.

ಕೋವಿಡ್ ಭೀತಿಯ ನಡುವೆ ವಿವಿ ಪರೀಕ್ಷೆ : ಮಣಿಪಾಲ: ಜಗತ್ತಿನಲ್ಲಿ 222,610,749 ಪ್ರಕರಣಗಳು ವರದಿಯಾಗಿದೆ. ಅವರಲ್ಲಿ 15,326,490 ರೋಗಿಗಳು ಗುಣಮುಖದ್ದಾಗಿದ್ದಾರೆ. 791,670 ಮಂದಿ ಸಾವನ್ನಪ್ಪಿದ್ದಾರೆ.

ಇರಾನ್‌ನಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 20 ಸಾವಿರ ದಾಟಿದೆ. ಇದು ಪಶ್ಚಿಮ ಏಷ್ಯಾದ ದೇಶದಲ್ಲಿದಾಖಲಾದ ಅತೀ ಹೆಚ್ಚು ಸೋಂಕು ಇದಾಗಿದೆ. ಆದರೆ  ಪರೀಕ್ಷೆಗಳಿಗೆ ವಿನಾಯಿತಿ ನೀಡಲಾಗಿಲ್ಲ. ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯನ್ನು ನಡೆಸಲು ಅವಕಾಶ ನೀಡಲಾಗಿದೆ.

Advertisement

ಹಾಗೆ ನೋಡಿದರೆ ಮಧ್ಯಪ್ರಾಚ್ಯದಲ್ಲಿ, ಸೋಂಕಿನ ಮೊದಲ ಪ್ರಕರಣಗಳು ವರದಿಯಾಗಿರುವುದು ಇರಾನ್‌ನಲ್ಲೇ.ಈ ವರೆಗೆ ದೇಶದಲ್ಲಿ 3 ಲಕ್ಷ 50 ಸಾವಿರ  ಪ್ರಕರಣಗಳು ವರದಿಯಾಗಿವೆ. ಮೆಕ್ಸಿಕೊದಲ್ಲಿ 24 ಗಂಟೆಗಳಲ್ಲಿ 5792 ಹೊಸ ಪ್ರಕರಣಗಳು ಮತ್ತು 707 ಸಾವುಗಳು ಸಂಭವಿಸಿವೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ 37 ಸಾವಿರ 31ಕ್ಕೆ ಏರಿದೆ. ಈ ವರೆಗೆ ದೇಶದಲ್ಲಿ 58 ಸಾವಿರ 481 ಜನರು ಸಾವನ್ನಪ್ಪಿದ್ದಾರೆ. ಲ್ಯಾಟಿನ್‌ ಅಮೆರಿಕನ್‌ ದೇಶಗಳಲ್ಲಿ ಮೆಕ್ಸಿಕೊಕ್ಕಿಂತ ಬ್ರೆಜಿಲ್‌ ಮತ್ತು ಪೆರು ಮಾತ್ರ ಹೆಚ್ಚಿನ ಪ್ರಕರಣಗಳನ್ನು ಹೊಂದಿವೆ. ಕೆಲವು ಕಂಪನಿಗಳು ಲಸಿಕೆ ಪ್ರಯೋಗಗಳನ್ನು ಪ್ರಾರಂಭಿಸಿವೆ. ಶೀಘ್ರದಲ್ಲೇ ಅದನ್ನು ಸಿದ್ಧಪಡಿಸಲಿದೆ.

24 ಗಂಟೆಗಳಲ್ಲಿ ಬ್ರೆಜಿಲ್‌ನಲ್ಲಿ 49,298 ಪ್ರಕರಣಗಳು ವರದಿಯಾಗಿವೆ. 1212 ಸಾವುಗಳು ಸಂಭವಿಸಿವೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,460,413ಕ್ಕೆ ಏರಿದೆ. ಇಲ್ಲಿ ಸಾವಿನ ಸಂಖ್ಯೆ 111,189ಕ್ಕೆ ಏರಿದೆ. ಆದರೆ ಬ್ರೆಜಿಲ್‌ ಆರೋಗ್ಯ ಇಲಾಖೆಯ ಪ್ರಕಾರ, ಸೋಂಕಿನಲ್ಲಿ ಇಳಿಕೆ ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next