ಅಮೀನಗಡ: ಯುವಕರು ದೇಹ ಬಲಿಷ್ಟವಾಗಿಟ್ಟುಕೊಳ್ಳಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಜಿಮ್ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಆರ್.ಜಿ.ಸನ್ನಿ ಹೇಳಿದರು.
ಪಟ್ಟಣದ ಪಂಚಮಸಾಲಿ ಸಮುದಾಯ ಭವನದಲ್ಲಿ ನಡೆದ ಬುಲ್ ಜಿಮ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕರು ವ್ಯಾಯಾಮ, ಜಿಮ್‌ಗಳಲ್ಲಿ ತೊಡಗಿಸಿಕೊಂಡಲ್ಲಿ ರೋಗದಿಂದ ಮುಕ್ತರಾಗಬಹುದು. ಪಟ್ಟಣದಲ್ಲಿ ಅತ್ಯಾಧುನಿಕ ಜಿಮ್ ಕೇಂದ್ರ ಆರಂಭವಾಗಿದ್ದು, ಯುವ ಪೀಳಿಗೆ ಇಂತಹ ಕೇಂದ್ರದಲ್ಲಿ ದೇಹದಂಡನೆ ಮಾಡಬೇಕು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ, ಬುಲ್ ಜಿಮ್ ಮಾಲೀಕ ಸಂತೋಷ ಐಹೊಳ್ಳಿ ಮಾತನಾಡಿ, ಯುವ ಜನತೆ ದೈಹಿಕವಾಗಿ ಸದೃಢತೆ ಹೊಂದಲಿ ಎಂಬ ಸದುದ್ದೇಶದಿಂದ ಬುಲ್ ಜಿಮ್ ಪ್ರಾರಂಭ ಮಾಡಲಾಗಿದೆ ಎಂದರು. ಪಿಎಸ್‌ಐ ಎಂ.ಜಿ.ಕುಲಕರ್ಣಿ ಉದ್ಘಾಟಿಸಿದರು.
ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯಾ ಕರದಂಟು ಮಾಲಕ ಬಸವರಾಜ ಐಹೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯರಾದ ತುಕಾರಾಮ ಪವಾರ, ವಿಜಯಕುಮಾರ ಕನ್ನೂರ ಇತರರು ಇದ್ದರು