ಹುಣಸೂರು: ಇತ್ತೀಚೆಗೆ ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದ್ದು, ಭತ್ತದ ನೇರ ಬಿತ್ತನೆ ಮತ್ತು ಬೀಜೋಪಚಾರದ ಮೂಲಕ ಹೆಚ್ಚಿನ ಇಳುವರಿ ಪಡೆಯುವ ಬಗ್ಗೆ ರೈತರು ಆಸಕ್ತಿ ತೋರಬೇಕೆಂದು ನಾಗನಹಳ್ಳಿ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಕೃಷಿ ವಿಜ್ಞಾನಿ ಡಾ. ರಾಮಚಂದ್ರಪ್ಪ ಸೂಚಿಸಿದರು.
ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಮತ್ತು ಮೈಸೂರು ನಾಗನಹಳ್ಳಿ ವಿಸ್ತಾರಣಾ ಶಿಕ್ಷಣ ಘಟಕ ಹಾಗೂ ರೈತ ಸಂಪರ್ಕ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಭತ್ತದ ನೇರ ಬಿತ್ತನೆ ಮತ್ತು ಬೀಜೋಪಚಾರ ಕುರಿತು ರೈತರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ,
ವೈಜ್ಞಾನಿಕ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು, ನೇರ ಭತ್ತ ಬಿತ್ತನೆ ಮಾಡುವುದರಿಂದ 1 ಎಕರೆಯಲ್ಲಿ 15ರಿಂದ 20 ಕ್ವಿಂಟಲ್ ಇಳುವರಿ ಪಡೆಯಬಹುದು. ರೈತರು ಸುಲಭ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಭತ್ತದ ಬೆಳೆಗೆ ತಗಲುವ ರೋಗವನ್ನು ತಡೆಗಟ್ಟಲು ಬೀಜೋಪಚಾರದಿಂದ ಸಾಧ್ಯ, ಬೀಜದಿಂದ ಹರಡುವ ಶಿಲೀಂದ್ರ ಮತ್ತು ದುಂಡಾಣು ರೋಗಗಳನ್ನು ಆರಂಭದಲ್ಲಿ ಹತೋಟಿ ಮಾಡುವುದರ ಜೊತೆಗೆ ಕಡಿಮೆ ಸಮಯ ಹಾಗೂ ಕಡಿಮೆ ವೆಚ್ಚದಲ್ಲಿ ರೋಗ ಮತ್ತು
ಕೀಟಗಳ ಹತೋಟಿ ಜೀವಾಣು ಗೊಬ್ಬರಗಳನ್ನು ಬಿತ್ತನೆ ಬೀಜಕ್ಕೆ ಲೇಪಿಸುವುದರಿಂದ ಜಮೀನಿನಲ್ಲಿ ಸಾರಜನಕ, ರಂಜಕ ಒದಗಿಸಿದರೆ ರಸಗೊಬ್ಬರ ಕಡಿಮೆ ಮಾಡಬಹುದು. ಕೃಷಿ ಅಧಿಕಾರಿಗಳು ಶಿಫಾರಸು ಮಾಡಿದ ಕೀಟನಾಶಕವನ್ನು ರೈತರು ಬಳಸಿ ಉಳಿದ ಕೀಟನಾಶಕವನ್ನು ಮಕ್ಕಳು ಹಾಗೂ ಪಶುಗಳಿಗೆ ಸಿಗದಂತೆ ಜಾಗೃತಿ ವಹಿಸಿಬೇಕೆಂದರು.
ಕಾರ್ಯಕ್ರಮದಲ್ಲಿ ಡಾ.ದೊರೆಸ್ವಾಮಿ, ತಾಪಂ ಅಧ್ಯೆಕ್ಷೆ ಪದ್ಮಮ್ಮ, ಕೃಷಿ ವಿಜ್ಞಾನಿ ಗೋವಿಂದರಾಜು, ಗ್ರಾಪಂ ಉಪಾಧ್ಯಾಕ್ಷ ನಿಂಗರಾಜೇಗೌಡ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಧುಲತಾ, ಸಿಬ್ಬಂದಿಗಳಾದ ರಾಮು, ಶಶಿ,ಧರಣೇಶ್, ಅನುವುಗಾರರಾದ ಸುದರ್ಶನ್‌ರಾವ್‌ಶಿಂದೆ, ಸುರೇಶ್, ರೈತ ಮುಖಂಡರಾದ ಶಿವಪ್ಪ, ಸುರೇಶ್, ವಿಜಯ್, ದೇವೇಗೌಡ, ಪ್ರಕಾಶ್, ನಾಗೇಶ್ ರೈತರು ಹಾಜರಿದ್ದರು.