Advertisement

ಬಾಲ್ಯದಲ್ಲಿಯೇ ಮಕ್ಕಳಲ್ಲಿ ಆತ್ಮಸ್ಥೈರ್ಯ ಬೆಳೆಸಲು ಸಲಹೆ

02:18 PM Jun 17, 2019 | Suhan S |

ಲಕ್ಷ್ಮೇಶ್ವರ: ಶಾಲೆ ಮತ್ತು ಮನೆಗಳಲ್ಲಿ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಆತ್ಮಸ್ಥೈರ್ಯ, ನೈತಿಕ ಮೌಲ್ಯ, ನಾಯಕತ್ವಗುಣ ಬೆಳೆಸಬೇಕು. ಇಂತಹ ವಾತಾವರಣ ನಿರ್ಮಿಸಬೇಕು ಎಂದು ರಾಜ್ಯದ ಐಪಿಎಸ್‌ ಅಧಿಕಾರಿ ರವಿ ಡಿ. ಚನ್ನಣ್ಣನವರ್‌ ಹೇಳಿದರು.

Advertisement

ಭಾನುವಾರ ಪಟ್ಟಣದ ಸ್ಕೂಲ್ ಚಂದನ ವಿದ್ಯಾರ್ಥಿಗಳೊಂದಿಗೆ ಚಂದನ-ಸ್ಪಂದನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರತಿ ಮಗುವೂ ವಿಶೇಷ-ವಿಭಿನ್ನವಾದ ಪ್ರತಿಭೆ ಹೊಂದಿರುತ್ತದೆ. ಕಲಿಕಾ ಹಂತದಲ್ಲಿ ದೇಹ, ಮನಸ್ಸು, ಭಾವ ಶುದ್ಧಿಯಾಗಿದ್ದಾಗ ಗ್ರಹಣ ಶಕ್ತಿ ಚನ್ನಾಗಿರುತ್ತದೆ. ಆದ್ದರಿಂದ ಮಕ್ಕಳನ್ನು ಸಾಧನೆ ಹಾದಿಯಲ್ಲಿ ಕರೆದೊಯ್ಯುವ ಪ್ರಾಮಾಣಿಕ ಪ್ರಯತ್ನ ಶಿಕ್ಷಕ ಮತ್ತು ಪಾಲಕರದ್ದಾಗಿದೆ ಎಂದರು.

ಕಾರ್ಯಕ್ರಮದ ಮೊದಲು ಚಂದನ ಶಾಲೆ ಬ್ಯಾಂಡ್‌ ಮ್ಯೂಸಿಕ್‌ನ ವಿದ್ಯಾರ್ಥಿಗಳಿಂದ ಗೌರವ ವಂದನೆ ಸಲ್ಲಿಸಲಾಯಿತು. ರವಿ ಡಿ. ಚನ್ನಣ್ಣನವರಿಗೆ ಶಾಲೆಯಿಂದ ‘ಸತ್ಕಾರ ಚಂದನ’ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು. ಸಂಸ್ಥಾಪಕರಾದ ಟಿ. ಈಶ್ವರ ಮಾತನಾಡಿದರು. ಡಿವೈಎಸ್‌ಪಿ ಕಲ್ಲೇಶಪ್ಪ, ಎಚ್.ಸಿ. ರಟಗೇರಿ, ಡಿ.ಬಿ. ತಟ್ಟಿ, ವಿ.ಜಿ. ಪಡಗೇರಿ, ವಿಜಯ ಕರಡಿ, ನವೀನ ಕಗ್ಗಲಗೌಡರ, ಪ್ರಾಚಾರ್ಯ ಆರ್‌.ಜಿ. ಬಾವನವರ, ಪಟ್ಟಣದ ಗಣ್ಯರು, ಪಾಲಕರು, ವಿವಿಧೆಡೆಯಿಂದ ಆಗಮಿಸಿದ್ದ ಐಎಎಸ್‌, ಐಪಿಎಸ್‌ ಸೇರಿ ಸರ್ಧಾತ್ಮಕ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿರುವ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಾದ ಚೈತ್ರಾ, ರಿಹಾನ್‌ ಮಲೀಕ, ನವ್ಯಾ, ಕಾರ್ತಿಕ, ಸ್ನೇಹಾ, ಸಂಕೇತ ನಿರ್ವಹಿಸಿದರು. ನಂತರಚಂದನ ಸಂದನ ಸಂವಾದ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next