Advertisement

ಅನಿರ್ಬಂಧಿತ ಔಷಧ ಪೂರೈಸಲು ಕ್ರಮಕ್ಕೆ ಸಲಹೆ

05:24 AM May 20, 2020 | Lakshmi GovindaRaj |

ಬೆಂಗಳೂರು: ಔಷಧಗಳ ಅನಿರ್ಬಂಧಿತ ಪೂರೈಕೆಗೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಆರೋಗ್ಯ ಇಲಾಖೆಗೆ ಹೈಕೋರ್ಟ್ ಸೂಚಿಸಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್‌ (ಎಚ್‌ಸಿಕ್ಯೂಎಸ್‌), ಅಲ್ಟ್ರಾಸೆಟ್‌ ಮತ್ತು ಪ್ಯಾನ್‌  ಮಾತ್ರೆಗಳು ಔಷಧ ಅಂಗಡಿಗಳು ಹಾಗೂ ಫಾರ್ಮಾಸ್ಯೂಟಿಕಲ್‌ ಸೆಂಟರ್‌ಗಳಲ್ಲಿ ಸಿಗುತ್ತಿಲ್ಲ ಎಂದು ಆಕ್ಷೇಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್‌. ಓಕಾ ಹಾಗೂ ನ್ಯಾ. ವಿ. ಶ್ರೀಶಾನಂದ ಅವರಿದ್ದ  ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.

Advertisement

ತಮ್ಮ ತಾಯಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್‌ (ಎಚ್‌ಸಿಕ್ಯೂಎಸ್‌), ಅಲ್ಟ್ರಾಸೆಟ್‌ ಮತ್ತು ಪ್ಯಾನ್‌ ಮಾತ್ರೆಗಳು ಬೇಕು. ಆದರೆ, ಎಲ್ಲಿಯೂ ಈ ಮೂರು ಮಾತ್ರೆಗಳ ಸಿಗುತ್ತಿಲ್ಲ. ಹಾಗಾಗಿ, ಈ ವಿಚಾರವಾಗಿ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಈಗಾಗಲೇ ಕೋವಿಡ್‌-19 ಸಂಬಂಧಿಸಿದ ಅರ್ಜಿಗಳ ವಿಚಾರಣೆಯಲ್ಲಿ ರಾಜ್ಯದಲ್ಲಿ ಔಷಧಗಳ ಲಭ್ಯತೆ ಮತ್ತು ಪೂರೈಕೆ ವಿಚಾರವನ್ನು ನ್ಯಾಯಾಲಯ ಗಮನಿಸುತ್ತಿದೆ. ಅದರೆ, ಇದು  ಅರ್ಜಿದಾರರ ವೈಯುಕ್ತಿಕ ವಿಚಾರವಾಗಿದ್ದು, ಒಂದೊಮ್ಮೆ ಅರ್ಜಿದಾರರು ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿದರೆ ಇಲಾಖೆ ಅದನ್ನು ಪರಿಗಣಿಸಬೇಕು. ಆರೋಗ್ಯ ಇಲಾಖೆ ಸೂಕ್ತ ನಿರ್ದೇಶನ ನೀಡಲಿದೆ ಎಂದು ತಿಳಿಸಿದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿತು

Advertisement

Udayavani is now on Telegram. Click here to join our channel and stay updated with the latest news.

Next