ಹನುಮಸಾಗರ: ರೈತರು ಮೇವಿನ ಬ್ಯಾಂಕಿನ ಲಾಭವನ್ನು ಪಡೆಯಬೇಕು ಎಂದು ನಾಡ ತಹಶೀಲ್ದಾರ್ ರೇಣುಕಾ ಹಾದಿಮನಿ ರೈತರಿಗೆ ಹೇಳಿದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಮೇವಿನ ಬ್ಯಾಂಕ್ ಉದ್ಘಾಟಿಸಿ ಮಾತನಾಡಿದರು. ಸತತ ಬರಗಾಲ ನಿಮಿತ್ತ ಸರ್ಕಾರ ರೈತರ ಅನುಕೂಲಕ್ಕಾಗಿ ಜಾನುವಾರುಗಳಿಗೆ ಮೇವಿನ ಬ್ಯಾಂಕ್‌ನ್ನು ತೆರೆಯಲಾಗಿದೆ. ಆದ್ದರಿಂದ ರೈತರು ಗುಣಮಟ್ಟದ ಮೇವು ಖರೀದಿಸಬೇಕು ಎಂದು ಹೇಳಿದರು.
ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಅವರಿಗೆ ರೈತರೆಲ್ಲರೂ ಸೇರಿ ಮೇವಿನ ಬ್ಯಾಂಕ್ ಸ್ಥಾಪಿಸಲು ಒತ್ತಾಯಿಸಿದ ಹಿನ್ನೆಲೆಯಲ್ಲಿ ಮೇವಿನ ಬ್ಯಾಂಕ್‌ನ್ನೂ ಸ್ಥಾಪಿಸಿದ ಹಿನ್ನೆಲೆಯಲ್ಲಿ ರೈತರು ಹರ್ಷವ್ಯಕ್ತಪಡಿಸಿದರು.
ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಬಸಪ್ಪ ಮಾತನಾಡಿ, ರೈತ ಭವನದಲ್ಲಿ ಒಂದು ಕೆ.ಜಿ. ಹೊಟ್ಟು, ಹುಲ್ಲು, 2 ರೂ. ನಂತೆ ದರ ನಿಗದಿ ಮಾಡಲಾಗಿದೆ. ರೈತರು ಖರೀದಿಸಬಹುದಾಗಿದೆ ಎಂದ ಅವರು ಹನುಮಸಾಗರ ವ್ಯಾಪ್ತಿಯಲ್ಲಿ ಬರುವ 42 ಹಳ್ಳಿಗಳ ರೈತರ ಜಾನುವಾರುಗಳಿಗೆ ಅನುಕೂಲವಾಗುವುದು ಈಗಾಗಲೇ 2 ಟನ್ ಮೇವು ಬಂದಿದೆ.ಆದ್ಯತೆ ಮೇರೆಗೆ ಪುನಃ ತರಲಾಗುವುದು.ಮೇವು ಪಡೆಯಲು ರೈತರು ಜಾನುವಾರು ದೃಢೀಕರಣ ಪತ್ರ ಹಾಗೂ ಆಧಾರ್‌ಕಾರ್ಡ್ ಜೆರಾಕ್ಸ್ ಪ್ರತಿ ಕಡ್ಡಾಯವಾಗಿ ತರಬೇಕು ಎಂದು ಹೇಳಿದರು.
ಕಂದಾಯ ನಿರೀಕ್ಷಕ ವೇಲಪ್ಪನ್, ಪಶು ವೈದ್ಯಾಧಿಕಾರಿ ಸಂತೋಷ ಕುದರಿ, ಎಪಿಎಂಸಿ ಸದಸ್ಯ ಶರಣಪ್ಪ ಹುಲ್ಲೂರ, ಎಪಿಎಂಸಿ ಸಹಾಯಕ ಕಾರ್ಯದರ್ಶಿ ಗುರುರಾಜ ಗುಡಿ ಸೇರಿದಂತೆ ರೈತರು ಇದ್ದರು.