Advertisement

ಕಲಬುರಗಿ: ಐವರು‌ ಮಕ್ಕಳ ಸೇರಿ ಮತ್ತೆ 11 ಜನರಿಗೆ ಕೋವಿಡ್-19 ಸೋಂಕು ದೃಢ

08:26 PM Jun 10, 2020 | Sriram |

ಕಲಬುರಗಿ: ಜಿಲ್ಲೆಯಲ್ಲಿ ಬುಧವಾರ ಐವರು ಮಕ್ಕಳು ಸೇರಿದಂತೆ ಮತ್ತೆ 11 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದ 10 ಜನ ಮತ್ತು ದೆಹಲಿ ಪ್ರವಾಸ ಹಿನ್ನೆಲೆಯ ಓರ್ವ ಯುವತಿಗೆ ಮಹಾಮಾರಿ‌ ಪತ್ತೆಯಾಗಿದೆ. ಇದರೊಂದಿಗೆ ಕೋವಿಡ್-19 ಸೋಂಕಿತರ ಸಂಖ್ಯೆ 780ಕ್ಕೆ ಏರಿಕೆಯಾಗಿದೆ.

Advertisement

ದೆಹಲಿದಿಂದ ವಾಪಸ್ ಆಗಿರುವ ಕಲಬುರಗಿ ನಗರದ ಗಣೇಶ ನಗರದ ಬಳಿಯ ಬಾರೆಹಿಲ್ಸ್ ಪ್ರದೇಶದ 24 ವರ್ಷದ ಯುವತಿ (ಪಿ 5963) ಕೋವಿಡ್-19 ಸೋಂಕು ಅಂಟಿಕೊಂಡಿದೆ. ಉಳಿದಂತೆ ಮಹಾರಾಷ್ಟ್ರದಿಂದ ಬಂದವರಿಗೆ ಸೋಂಕು ವಕ್ಕರಿಸಿದೆ.

ಕಾಳಗಿ ಪಟ್ಟಣದ 5 ವರ್ಷದ ಹೆಣ್ಣು ಮಗು (ಪಿ 5958) ಮತ್ತು 13 ವರ್ಷದ ಬಾಲಕಿ (ಪಿ 5961), ಕಲಬುರಗಿಯ ಬಾಪುನಗರ ಪ್ರದೇಶದ 35 ವರ್ಷದ ಯುವಕ (ಪಿ 5959), ಆಶ್ರಯ ಕಾಲೋನಿ ಸುಲ್ತಾನಪುರ ರಸ್ತೆ ಪ್ರದೇಶದ 15 ವರ್ಷದ ಬಾಲಕಿ (ಪಿ 5987)‌ ಮತ್ತು 23 ವರ್ಷದ ಯುವತಿ (ಪಿ 5988)ಗೆ ಮಹಾಮಾರಿ‌ ಸೋಂಕು ಕಾಣಿಸಿಕೊಂಡಿದೆ.

ಚಿಂಚೋಳಿ ತಾಲೂಕಿನ ಲಚ್ಚುನಾಯಕ ತಾಂಡಾದ 7 ವರ್ಷದ ಬಾಲಕ (ಪಿ 5960) ಮತ್ತು 35 ವರ್ಷದ ಯುವಕ (ಪಿ 5962), ಯಡ್ರಾಮಿಯ 13 ವರ್ಷದ ಬಾಲಕ (ಪಿ 5964), ಕಲಬುರಗಿ ತಾಲೂಕಿನ ಬಬಲಾದ ಗ್ರಾಮದ 7 ವರ್ಷದ ಬಾಲಕ (ಪಿ 5985), ಅಫಜಲಪುರ ತಾಲೂಕಿನ ಮದರಾ (ಬಿ) ಗ್ರಾಮದ 25 ವರ್ಷದ ಯುವತಿ(ಪಿ 5986)ಗೆ ಕೋವಿಡ್-19 ಸೋಂಕು ತಗುಲಿದೆ.

Advertisement

Udayavani is now on Telegram. Click here to join our channel and stay updated with the latest news.

Next