Advertisement
ಒಂದು ಮುಡಿ ಗದ್ದೆತಮ್ಮ ಗುಡ್ಡದ ಜಾಗವನ್ನು ನಾಲ್ಕು ಅಡಿಗಳಷ್ಟು ಅಗೆದು ಸಮತಟ್ಟು ಮಾಡಿ, 50 ಸೆಂಟ್ಸ್ ವಿಸ್ತೀರ್ಣದಲ್ಲಿ ಗದ್ದೆ ರೂಪಿಸಿ ದರು. ಜೆಸಿಬಿ ಹಾಗೂ ಟಿಪ್ಪರ್ ಬಳಸಿ 15 ದಿವಸ ಕೆಲಸ ಮಾಡಿದ್ದು, ಅದಕ್ಕಾಗಿಯೇ 1.64 ಲಕ್ಷ ರೂ. ಖರ್ಚು ಮಾಡಿದ್ದಾರೆ. ಆರಂಭಿಕ ಹಂತವಾಗಿ ಗದ್ದೆಗೆ ಹಟ್ಟಿ ಗೊಬ್ಬರ ಹಾಗೂ ಸೊಪ್ಪು ಹಾಕಿ ಹದ ಮಾಡಿದ್ದು, ಈಗ ಬೇಸಾಯಕ್ಕೆ ಬೇಕಾದ ನೇಜಿಯನ್ನೂ ತಯಾರು ಮಾಡಿದ್ದಾರೆ. ಒಂದು ವಾರದೊಳಗೆ ಟ್ರ್ಯಾಕ್ಟರ್ ಉಳುಮೆ ಮಾಡಿ, ನೇಜಿ ನಾಟಿ ಮಾಡಲು ತಯಾರಿ ನಡೆಯುತ್ತಿದೆ. ವರ್ಷಕ್ಕೆ ಎರಡು ಬಾರಿ (ಏನೆಲು ಮತ್ತು ಸುಗ್ಗಿ) ಬೇಸಾಯ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಒಂದು ಮುಡಿ ಗದ್ದೆ ಇದಾಗಿದ್ದು, 20 ಮುಡಿ ಭತ್ತದ ಫಸಲು ನಿರೀಕ್ಷಿಸಲಾಗಿದೆ. ಪ್ರಥಮ ಬಾರಿಯ ಬೇಸಾಯದಲ್ಲಿ ಇಷ್ಟು ಫಸಲು ಬಾರದಿದ್ದರೂ ಸುಗ್ಗಿ ಬೇಸಾಯದಲ್ಲಿ ಉತ್ತಮ ಬೆಳೆ ನಿರೀಕ್ಷಿಸಲಾಗಿದೆ. ಈ ಗದ್ದೆಗೆ ಯಾವುದೇ ರಸಗೊಬ್ಬರ ಬಳಸದೆ ಕೇವಲ ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡಲು ನಿರ್ಧರಿಸಿದ್ದಾರೆ.
ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿಗಳು ಸಂಪೂರ್ಣ ನಾಶವಾಗಿವೆ. ಅನಾದಿ ಕಾಲದಿಂದ ತುಳುನಾಡಿನಲ್ಲಿ ಅನುಸರಿಸಿಕೊಂಡು ಬರುತ್ತಿದ್ದ ಹೊಸ ಅಕ್ಕಿ ಊಟ (ಪುದ್ವಾರ್), ಕೊರಳು ಕಟ್ಟುವ ಕಾರ್ಯಗಳು ಇಂದು ಮರೆಯಾಗಿವೆ. ತುಳುನಾಡಿನ ಆಚಾರ, ವಿಚಾರಗಳು ಮಾಯವಾಗಿವೆ. ಈ ನಿಟ್ಟಿನಲ್ಲಿ ಮುಂದಿನ ಜನಾಂಗಕ್ಕೆ ನಮ್ಮ ಪೂರ್ವಜರು ಆಚರಿಸಿಕೊಂಡು ಬರುತ್ತಿದ್ದ ತುಳುನಾಡಿನ ಸಂಸ್ಕಾರಗಳನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಗದ್ದೆ ಮಾಡುವ ಸಾಹಸಕ್ಕೆ ಕೈಹಾಕಿದೆ.
- ನಾರಾಯಣ ಪೂಜಾರಿ,ಕೃಷಿಕ ಖುಷಿ, ಭೀತಿ
20 ವರ್ಷಗಳ ಹಿಂದೆ ನನ್ನ ತವರು ಮನೆಯಲ್ಲಿ ಬೇಸಾಯ ಕೃಷಿಯಲ್ಲಿ ಕೆಲಸ ಮಾಡಿದ ಅನುಭವವಿದೆ. ಇದೀಗ ಬಹಳ ಕಾಲದ ನಂತರ ಬೇಸಾಯದಲ್ಲಿ ತೊಡಗುವ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗುತ್ತಿದ್ದೆ. ದುಬಾರಿ ವೆಚ್ಚ ಭರಿಸಿ ಗದ್ದೆ ಮಾಡಲಾಗಿದೆ. ಆದರೆ, ಕಾಡು ಪ್ರಾಣಿಗಳ ಜೊತೆಗೆ ಹಕ್ಕಿಗಳ ಉಪಟಳ ಹೆಚ್ಚಾಗುವ ಭೀತಿಯಿದೆ. ಆದರೂ ಹಗಳಿರುಳು ಕಾವಲು ನಿಂತು ನಮ್ಮ ಬೆಳೆಯನ್ನು ರಕ್ಷಿಸಿಕೊಳ್ಳುತ್ತೇನೆ.
– ಶಕುಂತಳಾ,
ನಾರಾಯಣ ಪೂಜಾರಿ ಪತ್ನಿ
Related Articles
Advertisement