Advertisement

ಭಕ್ತಿಯ ಸೇವೆಯಿಂದ ಪುಣ್ಯದ ಲಾಭ: ಸೂಗೂರ ಶ್ರೀ

12:55 PM Jun 16, 2018 | |

ಚಿತ್ತಾಪುರ: ಅಧಿಕ ಮಾಸದಲ್ಲಿ ಭಕ್ತಿಯಿಂದ ಪೂಜಿಸಿ ಸೇವೆ ಸಲ್ಲಿಸಿದ ಭಕ್ತರಿಗೆ ಶಾಂತಿ, ನೆಮ್ಮದಿ ಜತೆಗೆ ಪುಣ್ಯದ ಲಾಭವಾಗುತ್ತದೆ ಎಂದು ಸೂಗುರ (ಎಚ್‌) ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯರು ನುಡಿದರು.

Advertisement

ಪಟ್ಟಣದ ಸಿದ್ಧೇಶ್ವರ ಪೆದ್ದು ಮಠದಲ್ಲಿ ಅಧಿಕ ಮಾಸ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ದಿಗ್ಗಾಂವ ಶ್ರೀ ಸಿದ್ಧವೀರ ಶಿವಾಚಾರ್ಯರ ಒಂದು ತಿಂಗಳ ಮೌನವ್ರತ ಅನುಷ್ಠಾನ ಮಂಗಲೋತ್ಸವ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಅವರು, ಮಠಗಳು ಭಕ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿವೆ ಎಂದರು.

ಲೋಕ ಕಲ್ಯಾಣಕ್ಕಾಗಿ ಹಾಗೂ ಭಕ್ತರ ಉದ್ಧಾರಕ್ಕಾಗಿ ದಿಗ್ಗಾಂವ ಶ್ರೀಗಳು ವಿವಿಧ ಬಗೆಯ ಅನೇಕ ಅನುಷ್ಠಾನಗಳನ್ನು
ಕೈಗೊಳ್ಳುತ್ತಿರುವುದು ಶ್ಲಾಘನೀಯ. ಗುರು-ಶಿಷ್ಯರ ಉತ್ತಮ ಸಂಬಂಧದಿಂದ ವಿಶ್ವಕ್ಕೆ ಬೆಳಕು ಸಿಗುತ್ತದೆ ಎಂದು
ಹೇಳಿದರು.

ಒಂದು ತಿಂಗಳವರೆಗೆ ಮೌನವ್ರತ ಅನುಷ್ಠಾನ ಕೈಗೊಂಡ ದಿಗ್ಗಾಂವ ಪಂಚಗೃಹ ಹಿರೇಮಠದ ಶ್ರೀ ಸಿದ್ದವೀರ
ಶಿವಾಚಾರ್ಯರು, ವಿವಿಧ ಮಠಾಧೀಶರು, ಭಕ್ತರು ಸನ್ಮಾನಿಸಿದರು. ಬೆಳಗಾವಿಯ ಬನ್ನೂರ ಚಿಕ್ಕಮಠದ
ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯ, ಸೇಡಂನ ಶ್ರೀ ಶಿವಶಂಕರ ಶಿವಾಚಾರ್ಯರು ಅಧ್ಯಕ್ಷತೆ, ಬೆನಕನಳ್ಳಿಯ
ಶ್ರೀ ಕರಿಬಸವ ಶಿವಾಚಾರ್ಯರು ನೇತೃತ್ವ , ಶ್ರೀನಿವಾಸ ಸರಡಗಿಯ ಶ್ರೀ ವೀರಭದ್ರ ಶಿವಾಚಾರ್ಯರು, ಬೊಮ್ಮನಳ್ಳಿಯ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಹಲಕರ್ಟಿಯ ಶ್ರೀ ರಾಜಶೇಖರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಹಣಮಂತರಾಯ ಕಂಚನಾಳ ಪ್ರವಚನ ಹೇಳಿದರು. ಕಲಾವಿದರಾದ ಕಲ್ಯಾಣಕುಮಾರ ಭಂಟನಳ್ಳಿ, ನಾಗೇಶ ಮಡಿವಾಳ ಸಂಗೀತ ಸೇವೆ ಸಲ್ಲಿಸಿದರು. 

ಮುಖಂಡರಾದ ಸತ್ಯನಾರಾಯಣ ಯಾದವ, ಶರಣು ಬೊಮ್ಮನಳ್ಳಿ, ಭಗವಂತ ಕಟಗೆ, ಶರಣು ಪೂಜಾರಿ ಇದ್ದರು.
ದೇವಿಂದ್ರ ಚೌಧರಿ ಸ್ವಾಗತಿಸಿದರು. ಶರಣಬಸಪ್ಪ ಊಡಗಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next