Advertisement

ಆಡ್ವಾಣಿ ಅಧಿಕೃತ ನಿವಾಸದಲ್ಲಿ ಧ್ವಜಾರೋಹಣ, ಶುಭ ಹಾರೈಕೆ

12:25 PM Aug 15, 2017 | udayavani editorial |

ಹೊಸದಿಲ್ಲಿ : ಹಿರಿಯ ಬಿಜೆಪಿ ನಾಯಕ ಎಲ್‌ ಕೆ ಆಡ್ವಾಣಿ ಅವರು ಪ್ರಧಾನಿ ನರೇಂದ್ರ  ಮೋದಿ ಸಹಿತ ಸಮಸ್ತ ದೇಶ ಬಾಂಧವರಿಗೆ 71ನೇ ಸ್ವಾತಂತ್ರ್ಯ ದಿನದ ಶುಭಾಶಯ ಹೇಳಿದ್ದಾರೆ.

Advertisement

ತಮ್ಮ ಅಧಿಕೃತ ನಿವಾಸದಲ್ಲಿ ರಾಷ್ಟ್ರ ಧ್ವಜ ಹಾರಿಸಿ, ವಂದನಾರ್ಪಣೆಗೈದು, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆಡ್ವಾಣಿ, ಎಲ್ಲರಿಗೂ ನನ್ನ ಶುಭಾಶಯಗಳು; ಈ ಸ್ವಾತಂತ್ರ್ಯ ದಿನದಂದು ನಾನು ನಿಮ್ಮೆಲ್ಲರಿಗೂ ಜೀವನದಲ್ಲಿ ಮಹೋನ್ನತ ಯಶಸ್ಸು ಪ್ರಾಪ್ತವಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next