Advertisement
ಕ್ರಿಕೆಟಿಗ ಧೋನಿಯ ಜೀವನ ಕುರಿತು ಬಂದ ಎಂ. ಎಸ್. ಧೋನಿ- ದ ಅನ್‌ಟೋಲ್ಡ್ ಸ್ಟೋರಿಯಲ್ಲಿ ಧೋನಿಯ ಹೆಂಡತಿ ಸಾಕ್ಷಿಯಾಗಿ ನಟಿಸಿದ ಚೆಲುವೆ. ಇದು ಕಿಯಾರಾಳ ಎರಡನೇ ಚಿತ್ರ. ಇದಕ್ಕೂ ಮೊದಲು ಫಗ್ಲಿ ಎಂಬ ಥ್ರಿಲ್ಲರ್ ಕಮ್ ಕಾಮೆಡಿ ಚಿತ್ರದಲ್ಲಿ ನಟಿಸಿದ್ದಳು. ಮೊದಲ ಚಿತ್ರ ನೆಲಕಚ್ಚಿದರೆ ಎರಡನೇ ಚಿತ್ರದಲ್ಲಿ ಧೋನಿಯೇ ಮುಖ್ಯವಾಗಿದ್ದ ಕಾರಣ ಕಿಯಾರಾಳ ಪಾತ್ರಕ್ಕೆ ಹೆಚ್ಚು ಸ್ಕೋಪ್ ಸಿಗಲಿಲ್ಲ. ಅಲ್ಲದೆ ಧೋನಿಯ ಮೊದಲ ಲವರ್ ಪಾತ್ರದಲ್ಲಿ ನಟಿಸಿದ ದಿಶಾ ಪಠಾನಿಯ ಗ್ಲಾಮರ್ ಎದುರು ಕಿಯಾರಾ ತುಸು ಕಳೆಗುಂದಿದ್ದಳು. ಹೀಗಾಗಿ ಧೋನಿಯ ಶೇ. 90 ಕ್ರೆಡಿಟ್ ಸುಶಾಂತ್ ಸಿಂಗ್ ರಜಪೂತನಿಗೂ ಶೇ. 10 ಕ್ರೆಡಿಟ್ ದಿಶಾ ಪಠಾನಿಗೂ ಹೋಯಿತು. ಸಾಕ್ಷಿ ಧೋನಿಯಾಗಿ ನಟಿಸಿದ ಕಿಯಾರಾ ಎಲೆಮರೆಯ ಕಾಯಿಯಾಗಬೇಕಾಯಿತು. ಇದೀಗ ತು ಚೀಝ್ ಬಡಿ ಹೈ ಮಸ್ತ್ ಮಸ್ತ್ ಹಾಡಿನ ರಿಮೇಕ್ ಕಿಯಾರಾಳಿಗೆ ಭರ್ಜರಿ ಪಬ್ಲಿಸಿಟಿ ಸಿಕ್ಕಿದೆ. ರವೀನಾಳಿಗಿಂತಲೂ ಒಂದು ತೂಕ ಹೆಚ್ಚೇ ಮಾದಕವಾಗಿ ಕುಣಿದಿದ್ದಾಳೆ ಎಂಬ ತಾರೀಫು ಕೂಡ ಸಿಕ್ಕಿದೆ. ಇದರ ಬೆನ್ನಿಗೆ ಕಿಯಾರಾಳಿಗೆ ತೆಲುಗು ಚಿತ್ರರಂಗದಿಂದ ಆಫರ್‌ಗಳ ಮೇಲೆ ಆಫರ್‌ಗಳು ಬರತೊಡಗಿದೆ. ಅಂದ ಹಾಗೆ ಕಿಯಾರಾ ಯಾರೆಂದೇ ಪರಿಚಯಿಸಲಿಲ್ಲ. ಸಿನೆಮಾ ಲೋಕದ ಏನೇನೂ ಸಂಬಂಧವಿಲ್ಲದ ಮಧ್ಯಮ ವರ್ಗದ ಕುಟುಂಬದಿಂದ ಬಂದವಳು ಕಿಯಾರಾ. ಮುಂಬಯಿಯ ಸಿಂಧಿ ಕುಟುಂಬದಲ್ಲಿ ಜನಿಸಿದ ಕಿಯಾರಾಳ ತಂದೆ ವ್ಯಾಪಾರಿ ಹಾಗೂ ತಾಯಿ ಗೃಹಿಣಿ. ತಂದೆ ಮಕ್ಕಳನ್ನು ಬಹಳ ಕಟ್ಟುನಿಟ್ಟಿನಿಂದ ಬೆಳೆಸಿದ್ದರು. ಆದರೆ 3 ಈಡಿಯಟ್ಸ್ ಚಿತ್ರ ನೋಡಿದ ಬಳಿಕ ತಂದೆಯ ನಿರ್ಧಾರಗಳು ಬದಲಾದವಂತೆ. ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದೇ ಕ್ಷೇತ್ರಕ್ಕೆ ಕಳುಹಿಸಬೇಕೆಂಬ ತೀರ್ಮಾನಕ್ಕೆ ಬಂದರು. ಹೀಗಾಗಿ ಕಿಯಾರ ಚಿತ್ರರಂಗಕ್ಕೆ ಬರುವುದು ಸಾಧ್ಯವಾಯಿತು.
Advertisement
ವೈಯಾರದ ಮಾನಿನಿ ಕಿಯಾರಾ ಆಡ್ವಾಣಿ
03:50 AM Mar 17, 2017 | |
Advertisement
Udayavani is now on Telegram. Click here to join our channel and stay updated with the latest news.