Advertisement

ರೈತರಿಗೆ ವಿತರಿಸಲು ಸಂಗ್ರಹಿಸಿದ್ದ ಬಿತ್ತನೆ ಬೀಜದಲ್ಲಿ ಕಲಬೆರಕೆ: ಶಾಸಕ ಪರಣ್ಣ ಗರಂ

07:29 PM Jun 03, 2021 | Team Udayavani |

ಗಂಗಾವತಿ: ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ವಿತರಿಸಲು ಸಂಗ್ರಹಿಸಿದ್ದ ಸೋನಾಮಸೂರಿ(ಬಿಪಿಟಿ) ಭತ್ತ ಬೀಜ
ಕಲಬೆರಕೆಯಾಗಿದ್ದು, ಶಾಸಕ ಪರಣ್ಣ ಮುನವಳ್ಳಿ ಕೃಷಿ ಅಧಿಕಾರಿಗಳ ವಿರುದ್ಧ ಗರಂ ಆದ ಘಟನೆ ನಗರದ ರೈತ ಸಂಪರ್ಕ
ಕೇಂದ್ರದಲ್ಲಿ ಬುಧವಾರ ಜರುಗಿತು.

Advertisement

ರೈತರಿಗೆ ಭತ್ತ ಬೀಜ ವಿತರಣೆ ಕಾರ್ಯಕ್ರಮದ ಸಂದರ್ಭದಲ್ಲಿ ರೈತರೊಬ್ಬರು ಸದ್ಯ ವಿತರಣೆ ಮಾಡುತ್ತಿರುವ ಸೋನಾಮಸೂರಿ
ಬೀಜ ಕಲಬೆರಕೆಯಾಗಿದೆ. ಸರಿಯಾಗಿ ಸಸಿ ಬೆಳೆಯುವುದಿಲ್ಲ ಎಂದು ಆರೋಪಿಸಿದರು. ತಕ್ಷಣ ಶಾಸಕ ಪರಣ್ಣ ಮುನವಳ್ಳಿ ಬೀಜದ ಚೀಲವನ್ನು ಬಿಚ್ಚಿಸಿ ನೋಡಿದಾಗ ರೈತ ಹೇಳಿದ್ದು ಸತ್ಯವಾಗಿತ್ತು. ಅಲ್ಲೇ ಇದ್ದ ಕೃಷಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಳೆದ ಬೆಳೆಗೆ ಸೂಕ್ತ ದರ ಇಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕಲಬೆರಕೆ ಮತ್ತು ನಕಲಿ ಬೀಜದಿಂದ ರೈತರು ಮತ್ತಷ್ಟು ನಷ್ಟ ಅನುಭವಿಸಲಿದ್ದಾರೆ. ಕೂಡಲೇ ಸಂಗ್ರಹಿಸಿರುವ ಸೋನಾಮಸೂರಿ ಭತ್ತದ ಬೀಜವನ್ನು ವಾಪಾಸ್‌
ಕಳಿಸಿ ಗುಣಮಟ್ಟದ ಬೀಜ ರೈತರಿಗೆ ವಿತರಿಸಬೇಕು. ಇದಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ
ಎಂದು ಎಚ್ಚರಿಸಿದರು.

ಇದನ್ನೂ ಓದಿ :ಸೋಂಕಿತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಗವಿಮಠ ಆಸ್ಪತ್ರೆಯಲ್ಲಿ ಭಜನೆ!

ರೈತರು ಗುಣಮಟ್ಟದ ಬೀಜ ಖರೀದಿಸಿ ರಸೀದಿ ಪಡೆಯಬೇಕು. ಕೆಲವೆಡೆ ಖಾಸಗಿಯವರು ಭತ್ತ ಬೀಜ ತಯಾರಿಸಿ ಮಾರಾಟ ಮಾಡುತ್ತಿದ್ದು, ಕೃಷಿ ಅಧಿ ಕಾರಿಗಳು ಅವರ ಪರವಾನಗಿ ಹಾಗೂ ಬೀಜದ ಗುಣಮಟ್ಟ ಪರೀಕ್ಷೆ ಮಾಡಬೇಕು. ಪ್ರತಿ ವರ್ಷ ಕಳಪೆ
ಬೀಜದ ಕಾರಣಕ್ಕೆ ಕೆಲ ಪ್ರದೇಶದ ರೈತರ ಇಳುವರಿ ಕಡಿಮೆಯಾಗುತ್ತಿತ್ತು. ಅಧಿಕಾರಿಗಳು ಬೀಜ ತಯಾರಕರು ಮತ್ತು ಬೀಜ ಗೊಬ್ಬರ ಮಾರಾಟ ಮಾಡುವವರ ಲೈಸೆನ್ಸ್‌, ಸಂಗ್ರಹ ಗುಣಮಟ್ಟ ಪರಿಶೀಲನೆ ಮಾಡಬೇಕು. ತಪ್ಪು ಕಂಡುಬಂದರೆ ಕ್ರಿಮಿನಲ್‌ ಕೇಸ್‌ ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಕೃಷಿಕ ಸಮಾಜದ ಅಧ್ಯಕ್ಷ ಚನ್ನಪ್ಪ ಮಳಗಿ, ಕೃಷಿ ಅಧಿಕಾರಿ ಸಂತೋಷ ಪಟ್ಟದಕಲ್ಲು, ಪ್ರಕಾಶ, ಭಗವಾನ್‌, ದೀಪಾ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next