Advertisement

 ಹರೆಯದ ಹಾಡುಗಳು 

12:30 AM Feb 15, 2019 | Team Udayavani |

ಈ ಹಿಂದೆ “ತೂಫಾನ್‌’ ಮತ್ತು “ಬಳ್ಳಾರಿ ದರ್ಬಾರ್‌’ ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಟೈಲ್‌ ಶ್ರೀನು ಈಗ “18 ಟು 25′ ಹೆಸರಿನಲ್ಲಿ ಮತ್ತೂಂದು ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶಿಸಿ ಅದನ್ನು ಪ್ರೇಕ್ಷಕರ ಮುಂದೆ ತರುವ ಸಿದ್ಧತೆಯಲ್ಲಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ “18 ಟು 25′ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸುವ ಮೂಲಕ ಚಿತ್ರತಂಡ, ಇತ್ತೀಚೆಗೆ ಚಿತ್ರದ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಿದೆ. 

Advertisement

“18 ಟು 25′ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಶ್ರೀನು, “ಚಿತ್ರದ ಹೆಸರೇ ಹೇಳುವಂತೆ ಇದು 18 ರಿಂದ 25 ವರ್ಷದ ಹರೆಯದ ಹುಡುಗ-ಹುಡುಗಿಯರ ಹೃದಯದ ಮಿಡಿತ, ತುಮುಲ-ತಲ್ಲಣಗಳನ್ನು ತೋರಿಸುವ ಚಿತ್ರ. ಇಂದು ನಮ್ಮ ಜೀವನದಲ್ಲಿ ಸ್ಮಾರ್ಟ್‌ ಫೋನ್‌, ಸ್ಮಾರ್ಟ್‌ ವಾಚ್‌, ಸ್ಮಾರ್ಟ್‌ ಟಿವಿ, ಸ್ಮಾರ್ಟ್‌ ಟೆಕ್ನಾಲಜಿ ಹೀಗೆ ಎಲ್ಲವೂ ಸ್ಮಾರ್ಟ್‌ ಆಗುತ್ತಿದೆ. ಇಂಥ ಸಮಯದಲ್ಲಿ ಸ್ಮಾರ್ಟ್‌ ಲವ್‌ಸ್ಟೋರಿಯೊಂದನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇವೆ. ಹಾಗಂತ ಇದು ಕೇವಲ 18 ರಿಂದ 25 ವಯಸ್ಸಿನವರಿಗಷ್ಟೇ ಅಲ್ಲ, ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುವ ಚಿತ್ರವಾಗಲಿದೆ’ ಎನ್ನುತ್ತಾರೆ.

“18 ಟು 25′ ಚಿತ್ರದಲ್ಲಿ ಅಭಿರಾಮ್‌, ರಿಷಿ ತೇಜ್‌, ಅಖೀಲ ಪ್ರಕಾಶ್‌, ವಿದ್ಯಾಶ್ರೀ ನಾಯಕ-ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಾಕ್‌ಲೈನ್‌ ಸುಧಾಕರ್‌, ಫಾರೂಖ್‌ ಖಾನ್‌, ನಾಗೇಶ್ವರ ರಾವ್‌, ಉದಯ್‌ ಭಾಸ್ಕರ್‌, ರವಿ ರಾಮ್‌, ಪೋಲಾ ಶ್ರೀನಿವಾಸ ಬಾಬು ,ಭಾಗ್ಯಶ್ರೀ ಮೊದಲಾದ ಕಲಾವಿದರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

“ಭೀಮಾವರಂ ಟಾಕೀಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಚಿತ್ರದುರ್ಗ, ಬಳ್ಳಾರಿ, ಜಿಂದಾಲ್‌ ಸುತ್ತಮುತ್ತ ಸುಮಾರು 35 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಚರಣ್‌ ಅರ್ಜುನ್‌ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ಚಿತ್ರದ ಪ್ರಮೋಷನ್‌ ಕೆಲಸಗಳಲ್ಲಿ ನಿರತವಾಗಿರುವ “18 ಟು 25′ ಚಿತ್ರತಂಡ, ಮಾರ್ಚ್‌ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next