Advertisement

ಈ ಪುಟ್ಟ ಪೋರಿ ನಗುವಿನಲ್ಲೇ ಎಲ್ಲರ ಮನ ಗೆದ್ದಳು…

05:30 PM Mar 23, 2022 | Team Udayavani |

ಮಕ್ಕಳ ನಗು ಎಂಥವರ ಮುಖದಲ್ಲೂ ಮಂದಹಾಸ ಚೆಲ್ಲುವಂತೆ ಮಾಡುತ್ತದೆ ಎನ್ನುವ ಮಾತಿದೆ. ಅದೇ ರೀತಿ ಪುಟಾಣಿ ಬಾಲಕಿಯೊಬ್ಬಳ ನಗು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮನ ಗೆದ್ದಿದೆ.

Advertisement

ಇನ್‌ಸ್ಟಾಗ್ರಾಂನಲ್ಲಿ ಗುಡ್‌ ನ್ಯೂಸ್‌ ಮೂವ್‌ಮೆಂಟ್‌ ಹೆಸರಿನ ಖಾತೆಯಲ್ಲಿ ಬಾಲಕಿಯೊಬ್ಬಳು ನಗುತ್ತಿರುವ ವಿಡಿಯೋ ಹಂಚಿಕೊಳ್ಳಲಾಗಿದೆ.

ಕೆಂಪು ಕೆನ್ನೆಯ ಪುಟಾಣಿ ಮಗುವಿನ ನಗುವಿರುವ ವಿಡಿಯೋ ಕೆಲವೇ ಸೆಕೆಂಡುಗಳಿದ್ದರೂ ನೆಟ್ಟಿಗರ ಮನಸ್ಸನ್ನು ಕರಗಿಸುವಲ್ಲಿ ಯಶಸ್ವಿಯಾಗಿದೆ. ಲಕ್ಷಾಂತರ ಮಂದಿ ವಿಡಿಯೋ ನೋಡಿದ್ದು, ನಗುವ ಇಮೋಜಿಗಳನ್ನು ಕಾಮೆಂಟ್‌ ಮಾಡಿದ್ದಾರೆ.

ಕೆಂಪು ಕೆನ್ನೆಯ ಪುಟಾಣಿಯ ನಗು ಎಂದು ನೆಟ್ಟಿಗರು ವಿಡಿಯೋವನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next