Advertisement

ಸಂಸಾರ ದತ್ತು ಮತ್ತು ವಿದ್ಯಾರ್ಥಿಗಳ ದತ್ತು ಸ್ವೀಕಾರ”ದಿಶಾ’ಕಾರ್ಯಕ್ರಮ

03:23 PM Sep 04, 2018 | |

ಮುಂಬಯಿ: ಮನುಕುಲಕ್ಕೆ ಸಲ್ಲಿಸುವ ಹೃದಯಶೀಲತಾ ಸೇವೆ ಶಾಶ್ವತವಾದದ್ದು. ಅದನ್ನು ಸಂಘದ ಅಂಧೇರಿ-ಬಾಂದ್ರಾ  ಸಮಿತಿಯು ವೈಶಿಷ್ಟÂಮಯವಾಗಿ, ಅರ್ಥ ಪೂರ್ಣವಾಗಿ ಸಿದ್ಧಿಸಿದೆ. ಇದೊಂದು ಬಂಟ ಬಂಧುಗಳ ಪಾಲಿನ ಮಾದರಿ ಕಾರ್ಯಕ್ರಮ. ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದವರ ಪಾಲಿನ ಜೀವನೋತ್ಸವವೇ ಈ ಕಾರ್ಯಕ್ರಮದ ಉದ್ಧೇಶವಾಗಿದೆ. ಅಂಧೇರಿ-ಬಾಂದ್ರಾ ಸಮಿತಿ ಯ  ಈ ಕಾರ್ಯಕ್ರಮ ಮತ್ತು ತತ್ವವನ್ನು ಎಲ್ಲಾ ಪ್ರಾದೇಶಿಕ ಸಮಿತಿಗಳು ಪಾಲಿಸು ವಂತಾ ಗ‌ಲಿ ಎಂದು ಬಂಟ್ಸ್‌ ಸಂಘ ಮುಂಬಯಿ ಅಧ್ಯ ಕ್ಷ ಪದ್ಮನಾಭ ಎಸ್‌. ಪಯ್ಯಡೆ ತಿಳಿಸಿದರು.

Advertisement

ಸೆ. 1 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃ ಹದ ವಿ. ಕೆ. ಸಮೂಹದ ಕಾರ್ಯಾಧ್ಯಕ್ಷ ಕೆ. ಎಂ. ಶೆಟ್ಟಿ ವೇದಿಕೆಯಲ್ಲಿ ಬಂಟರ ಸಂಘ ಮುಂ ಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಏರ್ಪಡಿಸಿದ್ದ ಸಂಸಾರ ದತ್ತು ಹಾಗೂ ವಿದ್ಯಾರ್ಥಿಗಳ ದತ್ತು ಸ್ವೀಕಾರದ “ದಿಶಾ’ ಕಾರ್ಯಕ್ರಮವನ್ನು  ಉದ್ಘಾಟಿಸಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಂಟರ ಸಂಘ ಸಮಾಜ ಬಾಂಧವರ ಆಶೋತ್ತರಗಳಿಗೆ ಸ್ಪಂದಿಸಲು ಪ್ರಾದೇಶಿಕ ಸಮಿತಿಗಳನ್ನು ರಚಿಸಿದೆ. ಪ್ರಾದೇಶಿಕ ಸಮಿತಿಗಳು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿದಾಗ ಸಂಘದ ಪರಿಶ್ರಮ ಸಾರ್ಥಕವಾಗುತ್ತದೆ ಎಂದು ನುಡಿದು ಶುಭಹಾರೈಸಿದರು.

ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ ಅವರ ಸಾರಥ್ಯದಲ್ಲಿ ನೆರವೇರಿಸಲ್ಪಟ್ಟ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಬಂಟ್ಸ್‌ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌರವ  ಪ್ರಧಾನ  ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್‌ ಶೆಟ್ಟಿ ಐಕಳ, ಬಂಟ್ಸ್‌ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ  ಸುಭಾಷ್‌ ಬಿ. ಶೆಟ್ಟಿ, ದಾನಿಗಳಾದ ಶಕುಂತಳಾ ಸದಾನಂದ ಶೆಟ್ಟಿ, ಶಂಕರ ಶೆಟ್ಟಿ (ರೋನಕ್‌), ಭಾಸ್ಕರ ಶೆಟ್ಟಿ ಕಾರ್ನಾಡ್‌, ಸತೀಶ್‌ ಶೆಟ್ಟಿ ಪೆನಿನ್ಸುಲಾ, ರವೀಂದ್ರ ಎಂ. ಭಂಡಾರಿ, ಸಿಎ ರಮೇಶ್‌ ಎ. ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು 15 ಬಂಟ ಸಂಸಾರ ದತ್ತು ಹಾಗೂ ಸುಮಾರು 65 ವಿದ್ಯಾರ್ಥಿಗಳ ಸ್ವೀಕಾರ ನಡೆಸಿದರು.

ಡಾ| ಆರ್‌. ಕೆ. ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿ ಈ ವರ್ಷ ಸಮಾಜ ಸೇವೆಯ ಪ್ರಧಾನ ಭಾಗ ಞವಾಗಿ ಶೈಕ್ಷಣಿಕ ಸೇವೆಯಾಗಿಸಿ ಒಂದು ಹೆಜ್ಜೆ ಮುಂದಿರಿಸಿರುವ ನಮ್ಮ ಸಮಿತಿಯ ಅಂಧೇ ರಿ ಬಾಂದ್ರಾ ಪ್ರದೇಶದ ಸುತ್ತಮುತ್ತಲಿನ ಪರಿಸರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಕನಿಷ್ಠ ಸಾಮಾನ್ಯ ನೆಲೆಯ ಬದುಕು ಕಟ್ಟಿಕೊಳ್ಳಲು ಆಸರೆಯಾಗುವ ಹಿತದೃಷ್ಟಿಯಿಂದ ಆ ಕುಟುಂಬಕ್ಕೆ ಬೇಕಾದ ಅಗತ್ಯ ಸೌಲತ್ತುಗಳ‌ನ್ನು ಒದಗಿಸುವ ಕಾಯಕ ಕೈಗೊಂಡಿದೆ. ಅದೇ ಈ ದಿಶಾ ಕಾರ್ಯಕ್ರಮ. ಇದು ಸ್ವಸ್ಥ ಸಮಾಜಕ್ಕೆ ಪೂರಕ ಆಗುವ ಆಶಯ ನಮ್ಮದಾಗಿದೆ. ನಮ್ಮೊಳಗಿನ ನೂತನ ಸಂಬಂಧಗಳನ್ನು ಹುಟ್ಟುಹಾಕಿದಂತಿದೆ. ಇದು ಎಂದಿಗೂ ಪ್ರದರ್ಶನ ಆಗದೆ ನಿದರ್ಶನದ ಕಾರ್ಯಕ್ರಮವಾಗಿ ಅಖಂಡ  ಸಮಾಜಕ್ಕೆ ಮಾದರಿಯ ಕಾರ್ಯಕ್ರಮವನ್ನಾಗಿಸುವೆ. ಮುಂದೆಯೂ ನಮ್ಮ ನಡಿಗೆ ಮನೆ ಮನೆಗೆ ದಾನಿಗಳ ಸಹಾಯಸ್ತದ ಉದಾರತೆಯಿಂದ ಈ ಸೇವೆ ಸಾಧ್ಯವಾಗಿದೆ ಎಂದರು.

ಸಂಘದ ಜತೆ ಕಾರ್ಯದರ್ಶಿ  ಮಹೇಶ್‌ ಎಸ್‌. ಶೆಟ್ಟಿ ಮಾತನಾಡಿ,  ಪ್ರಾದೇಶಿಕ ಸಮಿತಿಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಮಹತ್ವ ಪೂರ್ಣ ಕಾರ್ಯಕ್ರಮ ಮಾಡಿದೆ. ಇದು ನಮ್ಮೆ ಲ್ಲರನ್ನು ಎಚ್ಚರಿಸಿ ಸೇವೆಗೆ ಇನ್ನಷ್ಟು ಪುರಸ್ಕರಿಸಿದೆ. ಸಮಿತಿಯ ದೂರ ದೃಷ್ಟಿತ್ವವುಳ್ಳ ಸಮಿತಿಯ ಕಾರ್ಯಧ್ಯಕ್ಷ ಆರ್‌. ಕೆ. ಶೆಟ್ಟಿ, ವನಿತಾ ನೋಂಡಾ ಮತ್ತು ಪದಾಧಿಕಾರಿಗಳು ಸಂಘದ, ನಮ್ಮೆಲ್ಲರ ಹಿರಿಮೆಯಾಗಿದ್ದಾರೆ ಎಂದರು.
ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹ ನದಾಸ್‌ ಶೆಟ್ಟಿ ಅವರು ಮಾತನಾಡಿ, ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಇದೇ ಮೊದಲ ಬಾರಿಗೆ ವಿಭಿನ್ನ ಕಾರ್ಯಕ್ರಮ ರೂಪಿಸಿದೆ. ಈ ಕಾರ್ಯಕ್ರಮ ಬಂಟರ ಸಹಿತ ಸಮಗ್ರ ಸಮಾಜಕ್ಕೆ ಮಾದರಿ ಮತ್ತು ಅನುಕೂಲಕಾರವಾಗಿದೆ. ಸಮಿತಿ ಬಹಳ ಒಳ್ಳೆಯ ರೀತಿಯಲ್ಲಿ ಬಂಟ ಬಾಂಧವರಿಗೆ ಸಹಾಯ ನೀಡುತ್ತಿದೆ ಎನ್ನಲು ಹೆಮ್ಮೆಯಾಗುತ್ತದೆ ಎಂದರು.

Advertisement

ಈ ಕಾರ್ಯಕ್ರಮವು ಇತರ ಪ್ರಾದೇಶಿಕ ಸಮಿತಿಗಳಿಗೆ ಮಾದರಿಯಾಗಿದ್ದು, ಇದೀಗ ಕಾರ್ಯರೂಪಕ್ಕೆ ಬಂದಿರುವುದು ಶ್ಲಾಘನೀಯ ಎಂದು ಸಂಘದ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ ಮತ್ತು ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ ಅವರು ಪ್ರಶಂಸಿದರು.

ಗೌರವ ಪ್ರಧಾನ ಕೋಶಾಧಿಕಾರಿ ಪ್ರವೀಣ್‌ ಶೆಟ್ಟಿ  ಮಾತನಾಡಿ,  ಬಂಟರ ಸಂಘವು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದೆ. ಆದರೆ ಇದೇ ಮೊದಲ ಬಾರಿ ಪ್ರಾದೇಶಿಕ ಸಮಿತಿ ಯೊಂದು ಬಂಟರ ಸಂಸಾರವನ್ನು ದತ್ತು ಸ್ವೀಕಾ ರ ಮಾಡಿ ಮೈಲಿಗಲ್ಲನ್ನು ಸೃಷ್ಟಿಸಿದೆ ಎಂದರು.

ಬಂಟಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪ್ರಾದೇಶಿಕ ಸಮಿತಿಯ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ನಾನಯರ ಗರಡಿ, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಯಶವಂತ ಶೆಟ್ಟಿ, ಮಾಜಿ ಕಾರ್ಯದರ್ಶಿ ಡಿ. ಕೆ. ಶೆಟ್ಟಿ, ಮಾಜಿ ಮಹಿಳಾಧ್ಯಕ್ಷೆ ಸುಜತಾ ಗುಣಪಾಲ್‌ ಶೆಟ್ಟಿ ಐಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಂಟರ ಸಂಘ ಪಶ್ಚಿಮ ವಿಭಾಗೀಯ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಬೋಳ,  ಪ್ರಾದೇಶಿಕ ಸಮಿತಿಯ ಜೊತೆ ಕೋಶಾಧಿಕಾರಿ ಪ್ರಸಾದ್‌ ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ. ನೋಂಡಾ, ಯುವ ವಿಭಾಗಧ್ಯಕ್ಷ ರಕ್ಷಿತ್‌ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು.

ಸುಚಿತ್ರಾ ಶೆಟ್ಟಿ ಪ್ರಾರ್ಥನೆಗೈದರು. ಪ್ರಾದೇಶಿಕ ಸಮಿತಿಯ ಉಪಾಧ್ಯಕ್ಷ ನ್ಯಾಯವಾದಿ  ಆರ್‌. ಜಿ. ಶೆಟ್ಟಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರವಿ ಆರ್‌. ಶೆಟ್ಟಿ ಅವರು  ಸಮಿತಿಯ ವಾರ್ಷಿಕ ಚಟುವಟಿಕೆಗಳನ್ನು ಭಿತ್ತರಿಸಿದರು. ಜೊತೆ ಕಾರ್ಯದರ್ಶಿ ರಮೇಶ್‌ ಡಿ. ರೈ ಕಯ್ನಾರು ಫಲಾನುಭವಿಗಳ ಯಾದಿಯನ್ನು  ಪ್ರಕಟಿಸಿದರು. ಬಂಟರವಾಣಿ ಮಾಸಿಕದ ಸಂಪಾದಕ ಅಶೋಕ್‌ ಪಕ್ಕಳ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಕರುಣಾಕರ  ವಿ. ಶೆಟ್ಟಿ ಅವರು ವಂದಿಸಿದರು. 

ಏನಿದು “ದಿಶಾ’ ಯೋಜನೆ…?
ನಮ್ಮ ಸಮಿತಿಯ ಸದಸ್ಯರು ತಂಡೋಪತಂಡ ರಚಿಸಿ ಮನೆ-ಮನೆಗೆ ಖುದ್ಧಾಗಿ ಭೇಟಿ ನೀಡಿ ಪರಿಶುದ್ಧ ಪರಿಶೀಲನಾ ವರದಿ ಸಿದ್ಧಪಡಿಸಿದ ನಂತರ ನಮ್ಮಲ್ಲಿನ ಜನರ ಕಷ್ಟಕಾರ್ಪಣ್ಯಗಳು ಬೆಳಕಿಗೆ ಬಂದಿವೆ. ಅವರಿಗೆಲ್ಲಾ  ಸೂಕ್ತ ರೀತಿಯಲ್ಲಿ ಸ್ಪಂದಿಸುವ ಉದ್ದೇಶವನ್ನಾಗಿರಿಸಿಕೊಂಡು ಭವಿಷ್ಯಕ್ಕೆ ಹೊಸ ದಿಸೆ ನೀಡಲು ಪ್ರೋತ್ಸಾಹ  ನೀಡಿ ಬೆಂಬಲಿಸುವುದೇ ದಿಶಾ ಯೋಜನೆಯಾಗಿದೆ. ಆ ಪೈಕಿ ಕ್ಯಾನ್ಸರ್‌ ಮತ್ತಿತರ ಕಾಯಿಲೆ ಪೀಡಿತ, ವಿಕಲಚೇತನರಿಗೆ ಆರೋಗ್ಯನಿಧಿ, ಉಳಿದುಕೊಳ್ಳಲು ಕನಿಷ್ಠ ಸೂರು ಇಲ್ಲದೇ ಒದ್ದಾಡುವ ಕುಟುಂಬಕ್ಕೆ ವಾಸ್ತವ್ಯದ ವ್ಯವಸ್ಥೆ, ಮಾತಾಪಿತರನ್ನು ಪೋಷಿಸಲು ಆರ್ಥಿಕ ಸಮಸ್ಯೆ ಎದುರಿರುವ ಮಕ್ಕಳಿಗೆ ಗರಿಷ್ಠ ಸಂಬಳದ ನೌಕರಿ ಒದಗಿಸುವುದು ಹಾಗೂ ಅವರ ಶಿಕ್ಷಣ ಪಡೆಯುವ ಮಕ್ಕಳಿಗೆ ವಿದ್ಯಾನಿಧಿ, ಮಾಸಿಕವಾಗಿ ಆಹಾರ ಧಾನ್ಯ, ಪಡಿತರ ವ್ಯವಸ್ಥೆ, ಬಟ್ಟೆ ಬರೆಗಳನ್ನು ಒದಗಿಸಿ ಸ್ವಯಂ ಆಧಾರ ವ್ಯವಸ್ಥೆ ಕಲ್ಪಿಸುವುದು. ಆ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಏಕಮನೋಭಾವದಿಂದ ಸಮಾಜ ಸೇವೆಗಾಗಿ ಒಮ್ಮತದ ನಿರ್ಧಾರಕ್ಕಿಳಿದೆವು.ಶೈಕ್ಷಣಿಕ ಸ್ಪಂದನೆ ನಮ್ಮ ಪ್ರಮುಖ ಉದ್ದೇಶವಾಗಿದೆ. ವಿಶೇಷವಾಗಿ ಬಂಟ ಬಂಧು ಮಕ್ಕಳಲ್ಲಿನ ಪ್ರತಿಭಾನ್ವೇಷಣೆ ನಡೆಸಿ ಅದರಲ್ಲೂ ಪ್ರತಿಭಾವಂತ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ  ಯಾವ ರೀತಿಯ ತೊಂದರೆಯಾಗದಂತೆ  ಸಮರ್ಥವಾಗಿ ನಿಭಾಯಿಸುವ ಭಾವನೆ ನಮ್ಮದಾಗಿದೆ. ಅವರ್ಯಾರೂ ನಮ್ಮಲ್ಲಿಗೆ ಬರುವ ಬದಲಾಗಿ ನಾವೇ ಅವರೆಲ್ಲರ ಮನೆಮನೆಗೆ ಹೋಗಿ ಸೇವಾ ನಿರತರಾಗುವ ಚಿಂತನೆ ಮೂಡಿಸಿದ್ದೇವೆ. ನಾವೆಲ್ಲರೂ ಮತ್ತೂಬ್ಬರ ಕಷ್ಟ ತಿಳಿದು ಬೆಳೆದ ಕಾರಣ ಇಂತಹ ಸೇವೆಗೆ ಬದ್ಧರಾಗಲು ಸಾಧ್ಯವಾಗುತ್ತಿದೆ ಎಂದು ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ, ಡಾ| ಆರ್‌. ಕೆ. ಶೆಟ್ಟಿ  ತಿಳಿಸಿದರು.

ಚಿತ್ರ- ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next