ಮೂಡುಬಿದಿರೆ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ನಡುವೆ ತಾಂತ್ರಿಕ ಒಡಂಬಡಿಕೆ ನಡೆದಿದೆ.
ಒಡಂಬಡಿಕೆ ಪ್ರಕಾರ ಗೋವಾ- ಕರ್ನಾಟಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರದಿಂದ ಮುರ್ಡೇಶ್ವರದವರೆಗೆ 73 ಕಿ.ಮೀ.ಉದ್ದದ ಹೆದ್ದಾರಿಯ ದತ್ತು ಸ್ವೀಕಾರ ಮತ್ತು ಮಂಗಳೂರು ನಗರ ಹೊರ ವಲಯದ ಮೂಲ್ಕಿ-ಕಿನ್ನಿಗೋಳಿ- ಮೂರು ಕಾವೇರಿ- ಬಜಪೆ, ಕೈಕಂಬ- ಪೊಳಲಿ-ಕಲ್ಪನೆ-ಬಿ.ಸಿ. ರೋಡು- ಪಾಣೆ ಮಂಗಳೂರು- ತೊಕ್ಕೊಟ್ಟು ಇವುಗಳನ್ನು ಜೋಡಿಸುವ ಸಿಟಿ ಬೈಪಾಸ್ ಯೋಜನೆ ಒಡಂಬಡಿಕೆಯಲ್ಲಿ ಒಳಗೊಂಡಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಾರಿಗೆ ಹಾಗೂ ಹೆದ್ದಾರಿ ವಿಷಯ ದಲ್ಲಿ ಇತ್ತೀಚಿನ ತಾಂತ್ರಿಕ ಬೆಳವಣಿಗೆಗಳನ್ನು ತಿಳಿಯಲು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳಿಗೆ ಅವಕಾಶ ಸಿಗಲಿದೆ. ದತ್ತು ಪಡೆದ ಹೆದ್ದಾರಿ ಉದ್ದಗಲಕ್ಕೂ ಕಾಲಕಾಲಕ್ಕೆ ತಾಂತ್ರಿಕ ಅಧ್ಯಯನ ನಡೆಸಿ ಹೆದ್ದಾರಿ ಬೆಳವಣಿಗೆ ಬಗ್ಗೆ ಇಲಾಖೆಗೆ ಸೂಕ್ತ ಸಲಹೆ ನೀಡಲಾಗುವುದು. ಹೆದ್ದಾರಿ ಕಾಮಗಾರಿ ಗಳನ್ನು ಶೈಕ್ಷಣಿಕ ಭೇಟಿಯ ಮೂಲಕ ಪ್ರಾಯೋಗಿಕವಾಗಿ ಕಲಿಯಲು ಅವಕಾಶ ಜತೆಗೆ ವಿದ್ಯಾರ್ಥಿಗಳಿಗೆ ಶಿಷ್ಯಭತ್ಯೆ ಸಹಿತ ಇಂಟರ್ನ್ ಶಿಪ್, ಆಳ್ವಾಸ್‌ನಲ್ಲಿ ಸುಸಜ್ಜಿತ ಸಂಶೋಧನಾಧಾರಿತ ಪ್ರಯೋ ಗಾಲಯದ ನಿರ್ಮಾಣ, ಹೆದ್ದಾರಿ ಕಾಮಗಾರಿಗೆ ಸಂಬಂಧಪಟ್ಟ ಗುತ್ತಿಗೆ ದಾರರು ಹಾಗೂ ಕಂಪೆನಿಯ ಎಂಜಿ ನಿಯರ್‌ಗಳೊಂದಿಗೆ ಭೇಟಿ, ತಾಂತ್ರಿಕ ವಿಷಯಗಳ ವಿನಿಮಯ ಮತ್ತು ವೃತ್ತಿಪರ ಸಂಬಂಧಗಳನ್ನು ಬೆಳೆಸಲು ಈ ಒಡಂಬಡಿಕೆ ನೆರವಾಗಲಿದೆ ಎಂದರು.
ಇದನ್ನೂ ಓದಿ:ಟಿ20 ವಿಶ್ವಕಪ್: ಸೂಪರ್-12 ಹಂತಕ್ಕೆ ನಮೀಬಿಯಾ
ಆಳ್ವಾಸ್ ವಿದ್ಯಾರ್ಥಿಗಳು ಬೆಂಗಳೂರು ಮೆಟ್ರೋ, ಕೂಳೂರು ಸೇತುವೆ, ಸಿಗಂದೂರು ಸೇತುವೆ ನಿರ್ಮಾಣ ಮೊದಲಾದ ಕಾಮಗಾರಿಗಳಲ್ಲಿ ಇಂಟರ್ನ್ಶಿಪ್ ಗಳಿಸಿದ್ದು ಕಾರ್ಯಾನುಭವ, ಉದ್ಯೋಗ ಅವಕಾಶಗಳಿಗೆ ತೆರೆದ ಹಾದಿ ತೋರಿದಂತಾಗಿದೆ ಎಂದರು. ಆಳ್ವಾಸ್ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ಫೆರ್ನಾಂಡಿಸ್, ವಿಭಾಗ ಮುಖ್ಯಸ್ಥ ಅಜಿತ್ ಹೆಬ್ಟಾರ್, ಪ್ರೊ| ವರದರಾಜ್ ಉಪಸ್ಥಿತರಿದ್ದರು.