Advertisement

ಕಲಿಕೆಯ ಹಂತದಿಂದಲೇ ಸೈಬರ್ ಸೆಕ್ಯುರಿಟಿ ಕೋರ್ಸುಗಳ ಅಳವಡಿಕೆ: ಅಶ್ವತ್ಥ ನಾರಾಯಣ

09:34 AM Oct 08, 2022 | Team Udayavani |

ಬೆಂಗಳೂರು: ಕೋವಿಡ್ ನಂತರದ ಜಗತ್ತಿನ ಚಿತ್ರಣ ಬದಲಾಗಿದ್ದು ಪಾಲಿಟೆಕ್ನಿಕ್, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಹಂತಗಳಲ್ಲಿ ಸೈಬರ್ ಸೆಕ್ಯುರಿಟಿಗೆ ಸಂಬಂಧಿಸಿದ ಹಲವು ಕೋರ್ಸುಗಳನ್ನು ಸೇರಿಸಲಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಅವರು ಶುಕ್ರವಾರ ‘ರಾಷ್ಟ್ರೀಯ ಸೈಬರ್ ಸೆಕ್ಯುರಿಟಿ ಜಾಗೃತಿ ಮಾಸ’ವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ ಹಂತದಿಂದಲೇ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಜಾಗೃತಿ ಮೂಡಿಸಲಾಗುತ್ತಿದೆ. ಸೈಬರ್ ಬೆದರಿಕೆಯ ಈ ಕಾಲಘಟ್ಟದಲ್ಲಿ ನಮ್ಮ ಐಟಿ ಸ್ವತ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾದ್ದು ಬಹಳ ದೊಡ್ಡ ಸವಾಲು ಮತ್ತು ಜರೂರಾಗಿದೆ ಎಂದರು.

ಕೋವಿಡ್ ನಂತರ ನಾವು ಬಹುದೊಡ್ಡ ಡಿಜಿಟಲ್ ಪರಿವರ್ತನೆ ಹೊಂದುತ್ತಿದ್ದೇವೆ. ಇದು ನಮಗೆ ಈಗ ಎದುರಾಗಿರುವ ಜಟಿಲ ಸವಾಲಾಗಿದೆ ಎಂದು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ:ಏಕನಾಥ ಶಿಂಧೆ ಬಣಕ್ಕೆ ಚಿಹ್ನೆ ಬೇಡ: ಉದ್ಧವ್‌ ಠಾಕ್ರೆ

Advertisement

ಸೈಬರ್ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಲು ರಾಜ್ಯದಲ್ಲಿ ‘ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್’ (ಸಿಇಆರ್ಟಿ) ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ ತಿಮ್ಮೇಗೌಡ, ಸೈಬರ್ ಸೆಕ್ಯುರಿಟಿ ಕರ್ನಾಟಕದ ಡಾ. ಕಾರ್ತಿಕ್ ಬಪ್ಪನಾಡು, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯ ಡಾ.ಅಶೋಕ ರಾಯಚೂರು, ಐಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next