Advertisement
ತಾಲೂಕಿನ ಮೂಡಲಕೊಪ್ಪಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಶಾರದ ಪೂಜೆ ಮತ್ತು ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಬೀಳ್ಕೊಡುಗೆ ಸಮಾ ರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಮೂಡಲಕೊಪ್ಪಲು ಸರ್ಕಾರಿ ಪ್ರೌಢಶಾಲೆಯೂ ಉತ್ತಮ ಪರಿಸರದೊಂದಿಗೆ ಕೂಡಿದೆ. ಇಲ್ಲಿನ ಶಿಕ್ಷಕರು ಸಹ ಕ್ರಿಯಾಶೀಲರಾಗಿದ್ದಾರೆ. ಇಂತಹ ಪ್ರೌಢಶಾಲೆಗಳನ್ನು ಅಭಿವೃದ್ಧಿಪಡಿಸಿ ಇಲ್ಲಿನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವು ನೀಡುವುದು ಶಾಸಕರಾದ ನಮ್ಮ ಕತ್ಯರ್ವವಾಗಿದೆ. ಹಾಗಾಗಿ ಈ ಸರ್ಕಾರಿ ಪ್ರೌಢಶಾಲೆಯನ್ನು ದತ್ತುಪಡೆದು ಈ ತಾಲೂಕಿನಲ್ಲಿಯೇ ಮಾದರಿ ಆಗಿ ಅಭಿವೃದ್ಧಿಪಡಿಸ ಲಾಗುವುದು ಎಂದು ಭವರಸೆ ನೀಡಿದರು.
Related Articles
Advertisement
ವಿದ್ಯಾರ್ಥಿಗಳು ಓದುವ ಕಡೆಗೆ ಏಕಾಗ್ರತೆವಹಿಸಬೇಕು. ವಿದ್ಯಾರ್ಥಿಗಳಿಗೆ ಏಕಾಗ್ರತೆ ಇಲ್ಲದೆ ಹೋದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಜೊತೆಗೆ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.
ಪೌರಕಾರ್ಮಿಕರ ಮಕ್ಕಳಿಗೆ ನೆರವಾಗಿ: ಈ ವೇಳೆ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ಪೌರ ಕಾರ್ಮಿಕರ ಮಕ್ಕಳಿಗೆ ಸ್ವಂತ ಮನೆ ಇಲ್ಲದೆ ಗುಡಿಸಲಿನಲ್ಲಿ ವಾಸಿಸುತ್ತ ಓದುಲು ಸಾಧ್ಯವಾಗದೆ ಕಷ್ಟಪಡುತ್ತಿರುವ ಹಳೇಬೀಡು ಗ್ರಾಮದ ಪೌರ ಕಾರ್ಮಿಕರ ಮಕ್ಕಳಾದ ಅಶೋಕ್ ಮತ್ತು ಪಲ್ಲವಿಗೆ ಶಾಸಕರು ನೆರವಾಗಬೇಕು ಎಂದು ಶಿಕ್ಷಕರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸಿ.ಎಸ್.ಪುಟ್ಟರಾಜು ಅಶೋಕ್ ಮತ್ತು ಪಲ್ಲವಿ ಎಂಬ ವಿದ್ಯಾರ್ಥಿಗಳನ್ನು ಕರೆಯಿಸಿ ಮಾತನಾಡಿ, ಇಬ್ಬರು ಮಕ್ಕಳನ್ನು ತಮ್ಮ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಲ್ಲಿ ಉಚಿತವಾಗಿ ವಿದ್ಯಾಭ್ಯಾಸಕ್ಕೆ ಅವಕಾಶ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರೊ.ಎಚ್.ಆರ್.ತಿಮ್ಮೇಗೌಡ, ನಿವೃತ್ತ ಜಂಟಿ ನಿರ್ದೇಶಕ ಮರಿಸ್ವಾಮೀಗೌಡ, ಡಯಟ್ ಪ್ರಾಂಶುಪಾಲ ಶಿವಮಾದಪ್ಪ, ಬಿಇಒ ಜಿ.ಎಸ್. ಲೋಕೇಶ್, ಶ್ರೀನಿವಾಸ್, ಬಿಆರ್‌ಸಿ ತಿಮ್ಮರಾಯಿಗೌಡ, ಗ್ರಾಪಂ ಅಧ್ಯಕ್ಷೆ ಸೌಭಾಗ್ಯಮ್ಮ, ಉಪಾಧ್ಯಕ್ಷ ಪದ್ಮರಾಜ್, ಸದಸ್ಯ ಧನಂಜಯ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಡಿ.ಮರೀಸ್ವಾಮೀಗೌಡ, ಟಿಎಚ್‌ಒ ಡಾ.ಸಿ.ಎ.ಅರವಿಂದ್, ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್, ಮೂಡಲಕೊಪ್ಪಲು ಮುಖ್ಯ ಶಿಕ್ಷಕ ಲಿಂಗರಾಜು, ಆರ್ .ಸಿ.ನಾಗೇಗೌಡ, ಗೋಪಾಲಗೌಡ, ಜಯರಾಮು, ಚಂದ್ರಶೇಖರ್, ಮುಖಂಡರಾದ ಹೊಸಕೋಟೆ ಪುಟ್ಟಣ್ಣ, ಕುಳ್ಳೇಗೌಡ, ಪಿಡಿಒ ರಾಜೇಂದ್ರ, ಗ್ರಾಪಂ ಮಾಜಿ ಅಧ್ಯಕ್ಷ ಕರೀಗೌಡ ಸೇರಿದಂತೆ ಹಲವರು ಹಾಜರಿದ್ದರು.