Advertisement

ಪ್ರಿಯಾಂಕಾ- ನಿಕ್ ಬಾಡಿಗೆ ತಾಯ್ತನದ ವಿರುದ್ಧ ತಸ್ಲೀಮಾ ನಸ್ರೀನ್ ಟ್ವೀಟ್ ವಿವಾದ:ಭಾರಿ ಚರ್ಚೆ

12:16 PM Jan 23, 2022 | Team Udayavani |

ಢಾಕಾ : ಬಾಡಿಗೆ ತಾಯಿಯ ಮೂಲಕ ತಮ್ಮ ಹೆಣ್ಣು ಮಗುವಿನ ಜನನವನ್ನು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಘೋಷಿಸಿದ ಬೆನ್ನಲ್ಲೇ ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಅವರು ಬಾಡಿಗೆ ತಾಯ್ತನದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

Advertisement

”ಬಡ ಮಹಿಳೆಯರು ಇರುವುದರಿಂದ ಬಾಡಿಗೆ ತಾಯ್ತನ ಸಾಧ್ಯವಾಗಿದೆ. ಶ್ರೀಮಂತರು ಯಾವಾಗಲೂ ತಮ್ಮ ಹಿತಾಸಕ್ತಿಗಾಗಿ ಸಮಾಜದಲ್ಲಿ ಬಡತನದ ಅಸ್ತಿತ್ವವನ್ನು ಬಯಸುತ್ತಾರೆ. ನೀವು ಮಗುವನ್ನು ಬೆಳೆಸಲು ಕಷ್ಟವಾಗಿದ್ದರೆ, ಮನೆಯಿಲ್ಲದ ಮಗುವನ್ನು ದತ್ತು ತೆಗೆದುಕೊಳ್ಳಿ. ಮಕ್ಕಳು ನಿಮ್ಮ ಗುಣಲಕ್ಷಣಗಳನ್ನು ಆನುವಂಶಿಕವಾಗಿ ಪಡೆಯಬೇಕು – ಇದು ಕೇವಲ ಸ್ವಾರ್ಥಿ ನಾರ್ಸಿಸಿಸ್ಟಿಕ್ ಅಹಂ ಆಗಿದೆ.” ಎಂದು ತಸ್ಲೀಮಾ ಟ್ವೀಟ್ ಮಾಡಿದ್ದರು.

”ಶ್ರೀಮಂತ ಮಹಿಳೆಯರು ಬಾಡಿಗೆ ತಾಯಿಯಾಗುವವರೆಗೆ ನಾನು ಬಾಡಿಗೆ ತಾಯ್ತನವನ್ನು ಸ್ವೀಕರಿಸುವುದಿಲ್ಲ. ಪುರುಷರು ಪ್ರೀತಿಯಿಂದ ಬುರ್ಖಾವನ್ನು ಧರಿಸುವವರೆಗೂ ನಾನು ಅದನ್ನು ಸ್ವೀಕರಿಸುವುದಿಲ್ಲ. ಪುರುಷ ವೇಶ್ಯಾವಾಟಿಕೆಗಳನ್ನು ನಿರ್ಮಿಸುವವರೆಗೆ ಮತ್ತು ಪುರುಷರು ಮಹಿಳಾ ಗ್ರಾಹಕರಿಗಾಗಿ ಕಾಯುವವರೆಗೂ ನಾನು ವೇಶ್ಯಾವಾಟಿಕೆಯನ್ನು ಸ್ವೀಕರಿಸುವುದಿಲ್ಲ. ಇಲ್ಲದಿದ್ದರೆ ಬಾಡಿಗೆ ತಾಯ್ತನ, ಬುರ್ಖಾ, ವೇಶ್ಯಾವಾಟಿಕೆ ಕೇವಲ ಮಹಿಳೆಯರು ಮತ್ತು ಬಡವರ ಶೋಷಣೆ” ಎಂದು ಟ್ವೀಟ್ ಮಾಡಿದ್ದಾರೆ.

ಟ್ವೀಟ್ ವೈರಲ್ ಆಗಿದ್ದು ವ್ಯಾಪ್ಯಾಕ ಪರ ವಿರೋಧದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ. ಆ ಬಳಿಕ ಇನ್ನೊಂದು ಟ್ವೀಟ್ ಮಾಡಿರುವ ಲೇಖಕಿ ”ನನ್ನ ಬಾಡಿಗೆ ತಾಯ್ತನದ ಟ್ವೀಟ್‌ಗಳು ಬಾಡಿಗೆ ತಾಯ್ತನದ ಕುರಿತು ನನ್ನ ವಿಭಿನ್ನ ಅಭಿಪ್ರಾಯಗಳ ಕುರಿತಾಗಿದೆ. ಪ್ರಿಯಾಂಕಾ-ನಿಕ್ ಗೂ ಯಾವುದೇ ಸಂಬಂಧವಿಲ್ಲ. ನಾನು ದಂಪತಿಗಳನ್ನು ಪ್ರೀತಿಸುತ್ತೇನೆ.” ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next