Advertisement

Uppinangady ಮಾನಸಿಕ ಅಸ್ವಸ್ಥೆ ಆಸ್ಪತ್ರೆಗೆ ದಾಖಲು

12:43 AM Jan 13, 2024 | Team Udayavani |

ಉಪ್ಪಿನಂಗಡಿ: ಇಲ್ಲಿನ ಪೇಟೆಯಲ್ಲಿ ಚಿತ್ರವಿಚಿತ್ರ ಉಡುಪುಗಳನ್ನು ಧರಿಸಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥೆ ಲಲಿತಾ (50) ಎಂಬಾಕೆಯನ್ನು ಆಕೆಯ ಆಕ್ರಮಣಕಾರಿ ಪ್ರತಿರೋಧದ ನಡುವೆ ಆಸ್ಪತ್ರೆಗೆ ದಾಖಲಿಸುವ ಕಾರ್ಯ ಶುಕ್ರವಾರ ನಡೆಯಿತು.

Advertisement

ಉಪ್ಪಿನಂಗಡಿ ಗ್ರಾ. ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಅವರು ವಹಿಸಿದ ಮಾನವೀಯ ಕಾಳಜಿಯಿಂದಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಯಿತು. ಮಹಿಳಾ ಪೊಲೀಸರ ಸಹಕಾರದೊಂದಿಗೆ ಆಕೆಯನ್ನು ವಶಕ್ಕೆ ಪಡೆದುಕೊಳ್ಳಲು ಪ್ರಯತ್ನಿಸಿದಾಗ ಆಕೆ ತನ್ನಲ್ಲಿದ್ದ ಚಾಕುವಿನಿಂದ ತಿವಿದಾಗ ಮಹಿಳಾ ಪೊಲೀಸ್‌ ಸಿಬಂದಿ ಕೈಗೆ ಗಾಯವಾಯಿತು.

ಇನ್ನೋರ್ವ ಮಹಿಳಾ ಪೊಲೀಸ್‌ ಸಿಬಂದಿಯ ಕುತ್ತಿಗೆಗೆ ಇರಿಯಲು ಯತ್ನಿಸಿದಳಾದರೂ ಆಕೆ ಸ್ವಲ್ಪದರಲ್ಲಿ ಪಾರಾದರು. ಆಬಳಿಕ ಆಕೆಯನ್ನು ಬಲವಂತವಾಗಿ ಆ್ಯಂಬುಲೆನ್ಸ್‌ ನಲ್ಲಿ ವೆನ್ಲಾಕ್ ಗೆ ಕರೆದೊಯ್ಯಲಾಯಿತು. ಈ ಹಿಂದೆ ಆಕೆ ಪಂಚಾಯತ್‌ ಕಚೇರಿಯಲ್ಲಿ ದಾಂಧಲೆ ನಡೆಸಿದಾಗ ಪಿಡಿಒ ಅವರು ಬೆದರಿಸಿ ಆಕೆಯನ್ನು ಹೊರಗಟ್ಟಿದ ಘಟನೆಯೂ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next