Advertisement
ಗಮನಾರ್ಹ ವಿಚಾರವೆಂದರೆ, ಆಡಳಿತಾತ್ಮಕ ಹಾಗೂ ಪ್ರಯಾಣಿಕರ ಅನುಕೂಲದ ದೃಷ್ಟಿ ಇಟ್ಟುಕೊಂಡು ದಕ್ಷಿಣ ರೈಲ್ವೇ ವಲಯಕ್ಕೆ ಒಳಪಟ್ಟಿರುವ ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇ ವಲಯಕ್ಕೆ ಸೇರಿಸುವಂತೆ ಸುಮಾರು 17 ವರ್ಷಗಳ ಹಿಂದೆ ರೈಲ್ವೇ ಮಂಡಳಿಯೇ ಆದೇಶ ಹೊರಡಿಸಿತ್ತು. ಈಗ ತನ್ನದೇ ಹಳೆಯ ಆದೇಶಕ್ಕೆ ಮಂಡಳಿ ಉಲ್ಟಾ ಹೊಡೆದಿರುವುದು ವಿಪರ್ಯಾಸವೇ ಸರಿ.
Related Articles
Advertisement
ತನ್ನದೇ ಆದೇಶವನ್ನು ಕೈಬಿಟ್ಟ ಮಂಡಳಿರೈಲ್ವೇ ಮಂಡಳಿಯು ಈ ಆದೇಶವನ್ನು 2004ರಲ್ಲಿ ಮಾಡಿದ್ದು, ಸುಮಾರು 17 ವರ್ಷಗಳಿಂದ ಕಾರ್ಯಾನುಷ್ಠಾನ ಗೊಳ್ಳದೆ ಬಾಕಿ ಉಳಿದಿದೆ. ರೈಲ್ವೇ ಸಚಿವ ನಿತೀಶ್ ಕುಮಾರ್ 2003ರ ಡಿ. 28ರಂದು ಮಂಗಳೂರಿಗೆ ಬಂದಿದ್ದ ಸಂದರ್ಭ ಮಂಗಳೂರು ರೈಲ್ವೇ ನಿಲ್ದಾಣವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆ ಗೊಳಿಸುವಂತೆ ಸೂಚಿಸಿದ್ದರು. ಈ ಸಂಬಂಧ ರೈಲ್ವೇ ಮಂಡಳಿ 2004ರ ಡಿ. 27ರಂದು ಆದೇಶ ಹೊರಡಿಸಿತ್ತು. ಈ ಸಂದರ್ಭ ಮಂಗಳೂರು-ಹಾಸನ ನಡುವೆ ಹಳಿ ಪರಿವರ್ತನೆ ಕಾಮಗಾರಿ ನಡೆಯುತ್ತಿದ್ದ ಕಾರಣ ಗಜೆಟ್ ನೊಟೀಫಿಕೇಶನ್ ಬಾಕಿಯುಳಿದಿತ್ತು. ಇದರಿಂದಾಗಿ ಆದೇಶ ಜಾರಿಯಾಗಿರಲಿಲ್ಲ. 2008ರಲ್ಲಿ ಕಾಮಗಾರಿ ಮುಕ್ತಾಯಗೊಂಡಿದ್ದರೂ ಮಂಡಳಿ ತನ್ನ ಆದೇಶ ಜಾರಿಗೊಳಿಸಲು ಮುಂದಾಗಲಿಲ್ಲ. ನೈಋತ್ಯ ರೈಲ್ವೆಯ ಮಹಾಪ್ರಬಂಧಕ ಅಜಯ
ಕುಮಾರ್ ಸಿಂಗ್ 2020ರ ಫೆ. 10ರಂದು ರೈಲ್ವೇ ಮಂಡಳಿಯ ಅಧ್ಯಕ್ಷರಿಗೆ ಮತ್ತೆ ಪತ್ರ ಬರೆದುಮಂಗಳೂರು ಹಾಗೂ ತೋಕೂರು ರೈಲ್ವೇನಿಲ್ದಾಣವನ್ನು ನೈಋತ್ಯ ರೈಲ್ವೆಗೆ ಸೇರ್ಪಡೆಗೊಳಿಸ ಬೇಕು ಹಾಗೂ ನೈಋತ್ಯ ರೈಲ್ವೆಯ ವ್ಯಾಪ್ತಿಯನ್ನು ಮರು ಹೊಂದಾಣಿಕೆ ಮಾಡಬೇಕು. ಆದುದರಿಂದ ರೈಲ್ವೇ ಮಂಡಳಿ ಮಂಗಳೂರು ಕಾಂಪ್ಲೆಕ್ಸ್ ಹಾಗೂ ತೋಕೂರು ನಿಲ್ದಾಣವನ್ನು ನೈಋತ್ಯ ರೈಲ್ವೆಗೆ ಹಸ್ತಾಂತರಿಸಲು ನಿರ್ಧಾರ ಕೈಗೊಳ್ಳಬೇಕು ಹಾಗೂ ಈ ಕುರಿತು ಶೀಘ್ರ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಕೋರಿದ್ದರು. ಸೇರ್ಪಡೆ ಏಕೆ ಅನಿವಾರ್ಯ ?
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆ ರೈಲು ಸೌಕರ್ಯ ಅಭಿವೃದ್ದಿಗೆ ಮೂರು ವಲಯಗಳಾದ ದಕ್ಷಿಣ ರೈಲ್ವೇ, ನೈಋತ್ಯ ರೈಲ್ವೇ ಮತ್ತು ಕೊಂಕಣ ನಿಗಮವನ್ನು ಆಶ್ರಯಿಸಬೇಕಾಗುತ್ತದೆ. ಮಂಗಳೂರು ಭಾಗ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುವುದರಿಂದ ಆಡಳಿತಾತ್ಮಕವಾಗಿ ಒಂದೇ ವ್ಯವಸ್ಥೆಯಡಿ ಬರುತ್ತದೆ. ಇದರಿಂದ ರೈಲ್ವೇ ಸೌಲಭ್ಯಗಳಿಗೆ ಸಂಬಂಧಪಟ್ಟಂತೆ ಇತರ ವಿಭಾಗಗಳ ಜತೆ ಸಮನ್ವಯತೆಯ ಸಮಸ್ಯೆ ನಿವಾರಣೆಯಾಗಿ ಮಂಗಳೂರು ವಲಯದ ತ್ರಿಶಂಕು ಸ್ಥಿತಿಗೆ ಪರಿಹಾರವಾಗಬಲ್ಲದು. ಮಂಗಳೂರಿನಲ್ಲಿ ಇಂಟರ್‌ಸಿಟಿ, ಮೆಟ್ರೊ ರೈಲು ಸಂಚಾರದ ಪ್ರಸ್ತಾವಗಳು ಕೇಳಿಬರುತ್ತಿವೆ. ಈ ದಿಶೆಯಲ್ಲೂ ಮಂಗಳೂರು ಪ್ರದೇಶ ಒಂದು ವ್ಯವಸ್ಥೆಯಡಿ ಒಟ್ಟು ಗೂಡುವುದು ಆವಶ್ಯ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಉದಯವಾಣಿಯು ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇ ವಲಯಕ್ಕೆ ಸೇರಿಸುವ ಪ್ರಸ್ತಾವನೆ ಮುಂದಿಟ್ಟುಕೊಂಡು ಸುಮಾರು ಎರಡು ವಾರಗಳ ಸರಣಿ ಲೇಖನಗಳ ಅಭಿಯಾನವನ್ನು ಕೂಡ ಮಾಡಿತ್ತು. ರೈಲ್ವೇ ಸಚಿವರೊಂದಿಗೆ ಚರ್ಚಿಸುವೆ
ರೈಲ್ವೇ ಮಂಡಳಿಯ ಪತ್ರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ಮಂಗಳೂರು ಭಾಗವನ್ನು ನೈಋತ್ಯ ವಿಭಾಗಕ್ಕೆ ಸೇರಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದ್ದು ಈ ಬಗ್ಗೆ ರೈಲ್ವೇ ಸಚಿವರ ಜತೆ ಮಾತನಾಡುತ್ತೇನೆ.
-ನಳಿನ್ ಕುಮಾರ್ ಕಟೀಲು,
ದ.ಕ. ಸಂಸದರು