Advertisement

ಈ ಆರು ಹಳ್ಳಿಗಳಲ್ಲಿ ನೆಗೆಟಿವ್‌ ವರದಿ ಇದ್ದರೆ ಮಾತ್ರ ಪ್ರವೇಶ

03:47 PM May 03, 2021 | Team Udayavani |

ನಂಜನಗೂಡು: ಕೊರೊನಾ ನೆಗೆಟಿವ್‌ ವರದಿ ಇದ್ದರೆ ಮಾತ್ರ ಗ್ರಾಮಕ್ಕೆ ಬನ್ನಿ. ಇಲ್ಲದಿದ್ದರೆ ಆಶ್ರಯವೂ ಇಲ್ಲ, ಪ್ರವೇಶವೂ ಇಲ್ಲ, ಇದನ್ನುಕಡ್ಡಾಯವಾಗಿ ಪಾಲಿಸಬೇಕು.ತಾಲೂಕಿನ ಕೊಣನೂರು ಗ್ರಾಮ ಪಂಚಾಯ್ತಿವ್ಯಾಪ್ತಿಯ ಆರು ಗ್ರಾಮಗಳಲ್ಲಿ ಮುಖಂಡರು ಈನಿರ್ಣಯ ಕೈಗೊಂಡಿದ್ದು, ಆರೂ ಹಳ್ಳಿಗಳ ಬೀದಿಬೀದಿಗಳಲ್ಲಿ ಈ ಕುರಿತು ಟಾಂ ಟಾಂಹೊಡೆಸಲಾಗುತ್ತಿದೆ.

Advertisement

ಇತ್ತೀಚೆಗೆ ಅಂದರೆ ನಾಲ್ಕು ದಿನಗಳ ಹಿಂದೆ ಅತ್ತೆಮನೆಗೆ ಬಂದಿದ್ದ ಅಳಿಯ ಕೊರೊನಾ ಸೋಂಕಿನಿಂದಮೃತಪಟ್ಟಿದ್ದರು. ಇದರಿಂದ ಗ್ರಾಮದ ಜನರುಹಾಗೂ ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರುಭಯಭೀತರಾಗಿದ್ದರು. ಹೀಗಾಗಿ ಕೊಣನೂರುಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಹಾಗೂಯಜಮಾನರು ಸೇರಿ ಈ ನಿರ್ಬಂಧ ನಿರ್ಣಯಕೈಗೊಂಡಿದ್ದಾರೆ.ಪಂಚಾಯ್ತಿ ವ್ಯಾಪ್ತಿಯಲ್ಲಿ ಸದ್ಯ ಹೊರಗಿನವರಿಗೆಯಾರೂ ಆಶ್ರಯ ನೀಡಬಾರದು.

ಗ್ರಾಮದವರೇಆಗಿದ್ದೂ ಪರ ಊರಿನಲ್ಲಿದ್ದವರು ಕೂಡ ಗ್ರಾಮಪ್ರವೇಶಿಸುವಾಗ ಕೊರೊನಾ ನೆಗೆಟಿವ್‌ ವರದಿಪಡೆದುಕೊಂಡು ಅದನ್ನು ತೋರಿಸಿ ಗ್ರಾಮಕ್ಕೆಬರಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂಎಷ್ಟೇ ಪ್ರಭಾವಿಯಾಗಿದ್ದರೂ ಪ್ರವೇಶ ನಿಷಿದ್ಧ. ಈಕುರಿತು ಗ್ರಾಪಂ ವ್ಯಾಪ್ತಿಗೆ ಒಳಪಡುವ ಹನುಮನಪುರ, ಮರಳ್ಳಿ, ಪಿಮರಳ್ಳಿ, ಪಾಳ್ಯ, ಕೋಣನೂರುಪಾಳ್ಯ ಹಾಗೂ ಕೊಣನೂರು ಗ್ರಾಮಗಳಲ್ಲಿ ಟಾಂಟಾಂ ಹೊಡೆಸಲಾಗಿದೆ.ಗ್ರಾಮಕ್ಕೆ ಸಮೀಪದ ದಾಸನೂರು ಸೇರಿದಂತೆಮತ್ತಿತರ ಕಡೆ ಕೊರೊನಾ ಸೋಂಕಿತರು ಹೆಚ್ಚಿನಸಂಖ್ಯೆಯಲ್ಲಿದ್ದಾರೆ.

ಸೋಂಕಿನಿಂದಲೇ ಕೆಲವರುಸಾವನ್ನಪ್ಪಿದ್ದಾರೆ. ಹೀಗಾಗಿ ನಾವು ಬೆಂಗಳೂರು,ಮೈಸೂರು ಸೇರಿದಂತೆ ಮತ್ತಿತರ ಕಡೆ ಹೊರಗೆಹೋಗಿರುವವರನ್ನು ಊರಿಗೇ ಸೇರಿಸುತ್ತಿಲ್ಲ.ಹತ್ತಿರದ ಸಂಬಂಧಿಕರಾಗಿದ್ದರೂ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಆದರೆ, ಕೋವಿಡ್‌ ನೆಗೆಟಿವ್‌ ವರದಿ ತೋರಿಸಿಗ್ರಾಮ ಪ್ರವೇಶಿಸಬಹುದು ಎಂದು ಕೊಣನೂರುಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಲ್ಲವಿ ಅವರ ಪತಿಬಸವಣ್ಣ ತಿಳಿಸಿದ್ದಾರೆ.ಇತ್ತೀಚಿಗೆ ಬೆಂಗಳೂರಿನಿಂದ ಮಾವನ ಮನೆಗೆಬಂದಿದ ಅಳಿಯನಿಗೆ ಕೊರೊನಾ ಸೋಂಕುಕಾಣಿಸಿಕೊಂಡಿತ್ತು. ಬಳಿಕ ಮೃತಪಟ್ಟಿದ್ದಾರೆ.

ಹೀಗಾಗಿ ಆ ಮನೆಯವರ ಎಲ್ಲ ಸದಸ್ಯರನ್ನು ಕೋವಿಡ್‌ಪರೀಕ್ಷೆಗೊಳಪಡಿಸಲಾಗಿದ್ದು, ವರದಿ ಬರಬೇಕಿದೆ.ಕೊರೊನಾ 2ನೇ ಅಲೆ ತೀವ್ರವಾಗಿದೆ. ಹೀಗಾಗಿ ನಾವುಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಇದಕ್ಕಾಗಿಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳ ಜನರುಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

ನಮ್ಮಗ್ರಾಮಗಳ ರಕ್ಷಣೆಗೆ ಈ ಬಿಗಿ ನಿರ್ಬಂಧ…

ಕೊರೊನಾ ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆ ತೀವ್ರವಾಗಿದೆ. ಮೊದಲ ಅಲೆ ಪಟ್ಟಣ ಹಾಗೂನಗರಕ್ಕೆ ಸೀಮಿತವಾಗಿತ್ತು. ಆದರೆ, ಈ ಅಲೆ ಪರಿಣಾಮಕಾರಿಯಾಗಿದ್ದು, ಹಳ್ಳಿಗಳಿಗೂ ವ್ಯಾಪಿಸುತ್ತಿದೆ.ಹೆಚ್ಚಿನ ಪ್ರಮಾಣದಲ್ಲಿ ಹರಡಿದರೆ ಊರಿಗೆ ಊರೇ ತೊಂದರೆಗೆ ಸಿಲುಕಬೇಕಾಗುತ್ತದೆ.

ಮೊದಲೇಸಮರ್ಪಕವಾಗಿ ಚಿಕಿತ್ಸೆ ಇಲ್ಲ. ಪರಿಸ್ಥಿತಿ ಹೀಗಿರುವಾಗ ವೃದ್ಧರು, ಮಕ್ಕಳಿಗೆ ಸೋಂಕು ತಗುಲಿದರೆ ಜೀವಹಾನಿಗಳು ಆಗುವ ಸಂಭವ ಇದೆ. ಈ 2ನೇ ಅಲೆಗೆ ಯುವಕರೇ ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಹೀಗಾಗಿಬೆಂಗಳೂರು, ಮೈಸೂರು ಸೇರಿದಂತೆ ಯಾವ ಪ್ರದೇಶದವರೇ ಆಗಿದ್ದರೂ ನೆಗೆಟಿವ್‌ ವರದಿ ತೋರಿಸಿಗ್ರಾಮ ಪ್ರವೇಶ ಮಾಡಬೇಕು. ಇಲ್ಲದಿದ್ದರೆ ಎಷ್ಟೇ ಪ್ರಭಾವಿಯಾಗಿದ್ದರೂ, ಸಂಬಂಧಿಕರಾಗಿದ್ದರೂಆಶ್ರಯ, ಪ್ರವೇಶ ನೀಡುವುದಿಲ್ಲ. ನಮ್ಮೂರನ್ನು ರಕ್ಷಿಸಿಕೊಳ್ಳಲು ನಾವು ಹಾಕಿಕೊಂಡಿರುವ ಬೇಲಿ. ಇದನ್ನುಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಮುಖಂಡರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next