ಕೊಲ್ಲಾಪುರ, ಆ. 13: ಕೊಲ್ಲಾಪುರ ಮತ್ತು ಸಾಂಗ್ಲಿಯಲ್ಲಿ ಪ್ರವಾಹ ನೀರು ಕಡಿಮೆಯಾಗುತ್ತಿರುವುದರಿಂದ, ಪಶ್ಚಿಮ ಮಹಾರಾಷ್ಟ್ರದ ಎರಡೂ ಜಿಲ್ಲೆಗಳ ಆಡಳಿತವು ಈಗ ಮಳೆಯ ಪ್ರಕೋಪದಿಂದ ಪೀಡಿತರಾಗಿರುವ ಜನರಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ.
ಕಳೆದ ಒಂಬತ್ತು ದಿನಗಳಲ್ಲಿ ರಾಜ್ಯದ ಕೊಂಕಣ ಮತ್ತು ಪಶ್ಚಿಮ ಭಾಗಗಳಲ್ಲಿ ಭಾರೀ ಮಳೆಯಿಂದ ಉಂಟಾದ ಭೀಕರ ಪ್ರವಾಹವು 43 ಜನರನ್ನು ಬಲಿಪಡೆದುಕೊಂಡಿದ್ದು, ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಉಂಟುಮಾಡಿದೆ.
ಕೊಲ್ಲಾಪುರದಲ್ಲಿ ರಕ್ಷಣಾ ಕಾರ್ಯಗಳು ಪೂರ್ಣಗೊಂಡಿವೆ. ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಪೂರೈಕೆಯನ್ನು ಪುನಃಸ್ಥಾಪಿಸಲಾಗಿದೆ. ವಿದ್ಯುತ್ ಮತ್ತು ಫೋನ್ ಸಂಪರ್ಕವನ್ನು ಪುನಃಸ್ಥಾಪಿಸುವ ಕೆಲಸ ನಡೆಯುತ್ತಿದೆ ಎಂದು ಶಿಂಧೆ ತಿಳಿಸಿದ್ದಾರೆ.
ಈಗಾಗಲೆ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪ್ರವಾಹ ಪೀಡಿತ ಜನರಿಗೆ ಅಗತ್ಯ ಸಾಮಗ್ರಿಗಳು ತಲುಪುವಂತಹ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದಿ ಶಿಂಧೆ ತಿಳಿಸಿದರು.ಪ್ರವಾಹ ಪೀಡಿತ ಜನರ ರಕ್ಷಣೆ ಮತ್ತು ಸ್ಥಳಾಂತರವನ್ನು ಒಳಗೊಂಡ ಮೊದಲ ಹಂತವು ಈಗ ಮುಗಿದಿದೆ. ಪ್ರಸ್ತುತ ಪರಿಹಾರ ಸಾಮಗ್ರಿಗಳನ್ನು ಒದಗಿಸುವ ಎರಡನೇ ಹಂತವು ನಡೆಯುತ್ತಿದೆ ಎಂದವರು ಹೇಳಿದ್ದಾರೆ. ನಷ್ಟದ ಮೌಲ್ಯಮಾಪನವನ್ನು ನಡೆಸುವ ಮೂರನೇ ಹಂತವನ್ನು ಕೂಡ ಪ್ರಾರಂಭಿಸಲಾಗಿದೆ. ನಾವು ಜನರಿಗೆ ವಿತ್ತೀಯ ಪರಿಹಾರವನ್ನು ವಿತರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.
Advertisement
ಎರಡೂ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಗಳು ಮುಗಿದಿದ್ದು, ಪ್ರವಾಹದಿಂದ ಹಾನಿಗೊಳ ಗಾದವರಿಗೆ ವಿತ್ತೀಯ ನೆರವು ನೀಡಲು ನಷ್ಟ ಮೌಲ್ಯಮಾಪನ ಮಾಡಲು ಪ್ರಾರಂಭಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಸಾಂಗ್ಲಿ ಜಿಲ್ಲಾಧಿಕಾರಿ ಅಭಿಜಿತ್ ಚೌಧರಿ ಅವರು ಕೂಡ ತಮ್ಮ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಮತ್ತು ಜನರಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸುವುದರತ್ತ ಮುಖ್ಯ ಗಮನವನ್ನು ಕೇಂದ್ರೀಕರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸ್ಥಾಪಿಸಲಾದ 160ಕ್ಕೂ ಹೆಚ್ಚು ಶಿಬಿರಗಳಲ್ಲಿ ಜನರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ ಮತ್ತು ನಷ್ಟ ಪ್ರಮಾಣವನ್ನು ನಿರ್ಣಯಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದರು. ಸಾಂಗ್ಲಿಯಲ್ಲಿ ಪ್ರವಾಹದ ನೀರು ವೇಗವಾಗಿ ಕಡಿಮೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.
ಸಾಂಗ್ಲಿಯ ಇರ್ವಿನ್ ಸೇತುವೆಯಲ್ಲಿರುವ ಕೃಷ್ಣಾ ನದಿಯ ನೀರಿನ ಮಟ್ಟ ಮತ್ತು ಕೊಲ್ಲಾಪುರದ ರಾಜಾರಾಮ್ ವೀರ್‌ನಲ್ಲಿರುವ ಪಂಚಗಂಗಾ ನದಿಯ ಮಟ್ಟವು ಮಂಗಳವಾರ 47 ಅಡಿಗಳಷ್ಟು ದಾಖಲಾಗಿದ್ದು, ಇದು ಇನ್ನೂ ಅಪಾಯದ ಗುರುತುಗಿಂತ ಮೇಲೆ ಹರಿಯುತ್ತಿದೆ. ಸಾಂಗ್ಲಿಯಲ್ಲಿ ಕೃಷ್ಣಾ ನದಿಯ ಅಪಾಯದ ಗುರುತು 45 ಅಡಿಗಳಷ್ಟಿದ್ದರೆ,ಕೊಲ್ಲಾಪುರದ ಪಂಚಗಂಗಾ ನದಿಗೆ ಅಪಾಯದ ಗುರುತು 43 ಅಡಿ ಆಗಿದೆ.
ಕಳೆದ ವಾರ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿದ್ದ ಮುಂಬಯಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್ -4) ನೀರು ಕಡಿಮೆಯಾದ ಅನಂತರ ಸೋಮವಾರ ಭಾಗಶಃ ಸಂಚಾರಕ್ಕಾಗಿ ತೆರೆಯಲ್ಪಟ್ಟಿದ್ದು, ನಿಧಾನಗತಿಯ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಕೊಲ್ಲಾಪುರ ಉಪ ಜಿಲ್ಲಾಧಿಕಾರಿ ಸಂಜಯ್ ಶಿಂಧೆ ಹೇಳಿದ್ದಾರೆ.
ಸಾಂಗ್ಲಿಯ ಸುಮಾರು 17 ಗ್ರಾಮಗಳು ಜಲಮಯವಾಗಿವೆ. ಆ ಪ್ರದೇಶಗಳಲ್ಲಿನ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿರುವುದರಿಂದ ಅಗತ್ಯ ವಸ್ತುಗಳನ್ನು ದೋಣಿಗಳ ಮೂಲಕ ಕಳುಹಿಸಲಾಗುತ್ತಿದೆ.ಆರೋಗ್ಯದ ಅಪಾಯಗಳನ್ನು ತಡೆಗಟ್ಟಲು ಶುದ್ಧೀಕರಣ ಘಟಕಗಳಲ್ಲಿ ಶುದ್ಧೀಕರಿಸಿದ ನೀರನ್ನು ಸಂತ್ರಸ್ತರಿಗೆ ಸರಬರಾಜು ಮಾಡಲಾಗುತ್ತಿದೆ ಮತ್ತು ನೀರಿನ ಟ್ಯಾಂಕರ್‌ಗಳನ್ನು ಕೂಡ ಸರಿಯಾಗಿ ಶುದ್ಧೀಕರಿಸಲಾಗಿದೆ ಎಂದು ಸಾಂಗ್ಲಿ ಜಿಲ್ಲಾಧಿಕಾರಿ ಅಭಿಜಿತ್ ಚೌಧರಿ ತಿಳಿಸಿದ್ದಾರೆ. ಸಾಂಗ್ಲಿಯ ವಿವಿಧ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಸ್ಥಾಪಿಸಲಾಗಿದೆ ಮತ್ತು ಸೋಮವಾರದವರೆಗೆ 10,000ಕ್ಕೂ ಹೆಚ್ಚು ಜನರು ತಪಾಸಣೆಗಾಗಿ ಅಲ್ಲಿಗೆ ಹೋಗಿ ಔಷಧಗಳನ್ನು ಪಡೆದುಕೊಂಡಿದ್ದಾರೆ ಎಂದರು. ಪ್ರವಾಹದ ನೀರು ಕಡಿಮೆಯಾಗುತ್ತಿರುವ ಹೊರತಾಗಿಯೂ ಕೊಲ್ಲಾಪುರ ಮತ್ತು ಸಾಂಗ್ಲಿ ಎರಡೂ ಜಿಲ್ಲೆಗಳ ಪ್ರಮುಖ ನದಿಗಳು ಇನ್ನೂ ಅಪಾಯದ ಮಟ್ಟಕ್ಕಿಂತ ಹೆಚ್ಚಳವಾಗಿ ಹರಿಯುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುದ್ಧೀಕರಿಸಿದ ನೀರು, ಔಷಧ ವಿತರಣೆ: