Advertisement

ಆಡಳಿತ ಪಕ್ಷದವರಿಂದಲೇ ಸಭಾತ್ಯಾಗ

12:43 PM Apr 04, 2017 | Team Udayavani |

ಹುಬ್ಬಳ್ಳಿ: ಬೀಗಮುದ್ರೆ ಹಾಕಿದ ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಗಳ ಬೀಗ ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರ ಹೇಳಿಕೆಯಿಂದ ಆಕ್ರೋಶಗೊಂಡ ಆಡಳಿತ ಪಕ್ಷದ ಸದಸ್ಯರೇ ಸಭಾತ್ಯಾಗ ಮಾಡಿದ ಅಪರೂಪದ ಘಟನೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆಯಿತು. 

Advertisement

ಬಾಕಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಕಿದ ಬೀಗಮುದ್ರೆಯನ್ನು ಒಡೆದು ಕೆಲವರು ಅಂಗಡಿ ಪ್ರವೇಶ ಮಾಡಿದ್ದರೂ ಯಾವುದೇ ಕ್ರಮ ಆಗಿಲ್ಲ. ಆಯುಕ್ತರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪಾಲಿಕೆಯಲ್ಲಿ ಆಡಳಿತರೂಢ ಬಿಜೆಪಿ ಸದಸ್ಯರು ಸದನದಿಂದ ಹೊರ ನಡೆದರು.

ಬಿಜೆಪಿ ಸದಸ್ಯರನ್ನು ಬೆಂಬಲಿಸಿ ಜೆಡಿಎಸ್‌ ಸದಸ್ಯರೂ ಸಹ ಸಭಾತ್ಯಾಗ ಕೈಗೊಂಡರು. ನಡೆದಿದ್ದೇನು?: ಕಾಂಗ್ರೆಸ್‌ ಸದಸ್ಯರ  ಗಣೇಶ ಟಗರಗುಂಟಿ ಹಾಗೂಬಿಜೆಪಿಯ ಸುಧೀರ ಸರಾಫ್ ಅವರು  ಪಾದಚಾರಿ ಮಾರ್ಗ, ವಾಹನ ನಿಲುಗಡೆ ಜಾಗ ಅತಿಕ್ರಮಣ, ಕರ ವಸೂಲಾತಿ ಕುರಿತು ಗಮನ ಸೆಳೆಯುವ ಸೂಚನೆ ಮಂಡಿಸಿದರು. 

ಪಾಲಿಕೆ ಹೆಚ್ಚುವರಿ ಆಯುಕ್ತ ಅಜೀಜ್‌ ದೇಸಾಯಿ ಮಾತನಾಡಿ, ಆಸ್ತಿಕರ ವಿಭಾಗದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ 55.77 ಕೋಟಿ ರೂ. ಕರ ಸಂಗ್ರಹ ಗುರಿ ಇತ್ತು ಅದರಲ್ಲಿ 51.53 ಕೋಟಿ ರೂ. ವಸೂಲಿಯಾಗಿದೆ. ಇದರಲ್ಲಿ 10ಕೋಟಿ ರೂ. ದಂಡವೂ ಸೇರಿದೆ. ಜಾಹೀರಾತು ವಿಭಾಗದಲ್ಲಿ 3.3 ಕೋಟಿ ರೂ.ನಲ್ಲಿ 2.22 ಕೋಟಿ ರೂ. ಸಂಗ್ರಹವಾಗಿದ್ದು, ಪಾಲಿಕೆ ಒಡೆತನದ ಮಳಿಗೆಗಳ ಬಾಡಿಗೆಯಿಂದ 10.26 ಕೋಟಿ ರೂ.ನಲ್ಲಿ 7.65 ಕೋಟಿ ರೂ. ಸಂಗ್ರಹವಾಗಿದೆ ಎಂದರು.

ಕಿಮ್ಸ್‌ನಿಂದ 50 ಲಕ್ಷ ರೂ.ಬೇಡಿಕೆಯಲ್ಲಿ 23ಲಕ್ಷ ರೂ. ಪಾವತಿಸಿದ್ದು, ದಂಡ ಬೇರೆ ಇದೆ. ವಾಯವ್ಯ ಸಾರಿಗೆ ಸಂಸ್ಥೆಯಿಂದ 59ಲಕ್ಷ ರೂ. ಬಾಕಿ ಬರಬೇಕಿದೆ. ಎಪಿಎಂಸಿಯಿಂದ 1998-2008ರವರೆಗೆ ಸುಮಾರು 4ಕೋಟಿ ರೂ. ಬಾಕಿ ಹಾಗೂ ದಂಡ ಬರಬೇಕಿದೆ. ಎಸ್‌ಡಿಎಂಸಿ ಶಿಕ್ಷಣ ಸಂಸ್ಥೆಯಿಂದ 2.5ಕೋಟಿ ರೂ. ಬಾಕಿ ಬರಬೇಕಿದ್ದು, ಪ್ರಕರಣ ಕೋರ್ಟ್‌ನಲ್ಲಿದೆ ಎಂದರು.

Advertisement

ಕೆಎಲ್‌ಇ ಸಂಸ್ಥೆಯಿಂದ ಕರ ರೂಪದಲ್ಲಿ 60 ಲಕ್ಷ ರೂ. ಬಾಕಿ ಇದ್ದು, ಅದರಲ್ಲಿ 40ಲಕ್ಷ ರೂ. ಪಾವತಿ ಮಾಡಲಾಗಿದೆ. ಇದೇ ಸಂಸ್ಥೆಯ ಕಟ್ಟಡಗಳ  ಪರವಾನಗಿ ಇನ್ನಿತರ ವಿಚಾರದಲ್ಲಿ ಒಟ್ಟಾರೆ8.80ಕೋಟಿ ರೂ. ಬರಬೇಕಿದ್ದು, ಪ್ರಕರಣ  ಲೋಕ ಅದಾಲತ್‌ನಲ್ಲಿದೆ ಎಂದರು. 

ನಗರ ಯೋಜನೆ ವಿಭಾಗ ಅಧಿಕಾರಿ ಮಾತನಾಡಿ, ಕಟ್ಟಡ ಪರವಾನಗಿಯಿಂದ ಧಾರವಾಡದಲ್ಲಿ 3.44ಕೋಟಿ ರೂ., ಹುಬ್ಬಳ್ಳಿಯಲ್ಲಿ 10.06 ಕೋಟಿ ರೂ, ವಿನ್ಯಾಸ, ನವೀಕರಣ, ಪೂರ್ಣಗೊಂಡ ಪ್ರಮಾಣ ಪತ್ರ ಇತ್ಯಾದಿ ರೂಪದಲ್ಲಿ 3.29 ಕೋಟಿ ರೂ.ಸಂಗ್ರಹವಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ 24 ಕೋಟಿ ರೂ. ಬೇಡಿಕೆಗೆ 16.80 ಕೋಟಿ ರೂ. ಸಂಗ್ರಹವಾಗಿದೆ ಎಂದರು.   

Advertisement

Udayavani is now on Telegram. Click here to join our channel and stay updated with the latest news.

Next