Advertisement

ಆಡಳಿತಕ್ಕೆ ಚುರುಕು ಮುಟ್ಟಿಸಬೇಕು, ಜನರಿಗೆ ಯೋಜನೆಗಳು ತಲುಪಬೇಕು : ಸಿಎಂ

07:36 PM May 17, 2022 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಸಂಜೆ ಬಜೆಟ್ ಅನುಷ್ಠಾನ, ಕಡತ ವಿಲೇವಾರಿ ಸಂಬಂಧಿಸಿದಂತೆ ಚರ್ಚೆ ನಡೆಸಲು ತುರ್ತು ಸಭೆ ಕರೆದು

Advertisement

ವಿಧಾನ ಸೌಧದದ ಸಮ್ಮೇಳನದಲ್ಲಿ ನಡೆದ ಸಭೆಯಲ್ಲಿ, 2022-23 ನೇ ಸಾಲಿನ ಬಜೆಟ್ ಅನುಷ್ಠಾನ, ಕಡತ ವಿಲೇವಾರಿ, ಆಡಳಿತವನ್ನು ಇನ್ನಷ್ಟು ವೇಗದಲ್ಲಿ ಚುರುಕುಗೊಳಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಿಎಂ ಸಲಹೆ ನೀಡಿದರು.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ‌, ಮೊನ್ನೆ ಜಿಲ್ಲಾಧಿಕಾರಿಗಳು ಮತ್ತು ಸಿಇಒ ಹಂತದ ಸಭೆ ಮಾಡಿದ್ದೆವು.ಜಿಲ್ಲಾ ಹಂತದ ಆಡಳಿತ ಚುರುಕುಗೊಳಿಸಿ ಸರ್ಕಾರದ ಕಾರ್ಯಕ್ರಮ ಜನರಿಗೆ ಮುಟ್ಟಿಸಲು ಸೂಚಿಸಿದ್ದೆವು.ಅದೇ ರೀತಿ ರಾಜ್ಯ ಮಟ್ಟಡ ಅಧಿಕಾರಿಗಳಿಗೂ ಸೂಚನೆ ಕೊಡಬೇಕು.ಬಜೆಟ್ ಅನುಷ್ಠಾನ ಮಾಡುವುದು ಸೇರಿದಂತೆ, ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಇಲಾಖೆಗಳ ಸಮನ್ವಯತೆ ಇಲ್ಲ.
ಅದನ್ನ ಯಾವ ರೀತಿ ಮಾಡಬೇಕು ಅಂತ ಚರ್ಚೆ ಮಾಡಿದ್ದೇವೆ ಎಂದರು.

ವಿಶೇಷವಾಗಿ ಬಡವರ ಕಾರ್ಯಕ್ರಮ ಸಕಾಲದಲ್ಲಿ ಅನುಷ್ಠಾನ ಆಗಬೇಕು.ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳು ಮುಟ್ಟಬೇಕು. ಎಕನಾಮಿಕ್ ಡೆವಲಪ್ಮೆಂಟ್ ಇದೆ, ಜಮೀನು ಬೇಕು ಮುಂದಿನ ತಿಂಗಳೊಳಗೆ ಪಡೆಯಬೇಕು. ಟೆಂಡರ್ ಪ್ರೋಸೆಸ್ ಮಾಡಬೇಕು. ಜನರಿಗೆ ನೇರವಾಗಿ ತಲುಪುವ ಕಾರ್ಯಕ್ರಮ SC, ST ರೈತರ ಕಾರ್ಯಕ್ರಮಗಳಿಗೆ ನೇರವಾಗಿ ಹಣ ತುಂಬಬೇಕು. ಜೂನ್ ತಿಂಗಳಲ್ಲಿ ಪ್ರಾರಂಭಿಸಬೇಕು ಅಂತ ಸೂಚಿಸಲಾಗಿದೆ.

ಇದನ್ನೂ ಓದಿ:ಮೊಮ್ಮಗಳ ಅಗಲಿಕೆ : ಮಾಜಿ ಸಚಿವ ಜಿ.ಟಿ.ದೇವೇಗೌಡರ ನಿವಾಸಕ್ಕೆ ಎಚ್ ಡಿಕೆ ಭೇಟಿ 

Advertisement

ಆಡಳಿತಕ್ಕೆ ಚುರುಕು ಮುಟ್ಟಿಸಬೇಕು. ಸನಸಾಮಾನ್ಯರಿಗೆ ಯೋಜನೆಗಳು ನೇರವಾಗಿ ತಲುಪಬೇಕು.ಆಡಳಿತ ಸುಧಾರಣೆ ಸೂಚಿಸಿರುವ ಎಲ್ಲಾ ಕೆಲಸಗಳನ್ನು ಮಾಡಲು ಸೂಚಿಸಲಾಗಿದೆ ಎಂದರು.

ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ವಿ ಸೋಮಣ್ಣ, ಜೆ ಸಿ ಮಾಧುಸ್ವಾಮಿ, ಮುನಿರತ್ನ, ಎಂ ಟಿ ಬಿ ನಾಗರಾಜ, ಡಾ. ನಾರಾಯಣಗೌಡ, ಅರಗ ಜ್ಞಾನೇಂದ್ರ, ಬೈರತಿ ಬಸವರಾಜ ಸೇರಿದಂತೆ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next