Advertisement
ಪರ್ಯಾಯೋತ್ಸವಕ್ಕೆ ಮುನ್ನ ನಡೆಯುವ ನಾಲ್ಕನೆಯದಾದ ಭತ್ತ ಮುಹೂರ್ತ ಶುಕ್ರವಾರ ಜರುಗಿದಾಗ ಆಶೀರ್ವಚನ ನೀಡಿದ ಶ್ರೀಗಳು, ಇವೇ ನಮ್ಮ ಪರ್ಯಾಯ ಕಾಲದ ಯೋಜನೆಗಳು ಎಂದರು.
Related Articles
Advertisement
ಶಾಸಕ ರಘುಪತಿ ಭಟ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹಿರಿಯರಾದ ಎ.ಜಿ. ಕೊಡ್ಗಿ, ಶ್ರೀಕೃಷ್ಣ ಸೇವಾ ಬಳಗದ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಉಪಸ್ಥಿತರಿದ್ದರು.
ಕೊನೆಯದು ಭತ್ತ ಮುಹೂರ್ತಪರ್ಯಾಯ ಪೂಜಾ ಕೈಂಕರ್ಯ ವಹಿಸಿಕೊಳ್ಳುವುದಕ್ಕೆ ಪೂರ್ವಭಾವಿ ಯಾಗಿ ಬಾಳೆಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಮತ್ತು ಭತ್ತ ಮುಹೂರ್ತಗಳನ್ನು ನಡೆಸುವುದು ಉಡುಪಿಯ ಅಷ್ಟ ಮಠಗಳ ಪರಂಪರೆ. ಶ್ರೀಕೃಷ್ಣ ಮಠ ಮತ್ತು ಪರ್ಯಾಯ ಕಾಲದಲ್ಲಿ ಅನ್ನದಾನಕ್ಕೆ ಮಹತ್ವವಿರುವುದರಿಂದ ಅದಕ್ಕೆ ಸಂವಾದಿಯಾಗಿ ಈ ನಾಲ್ಕು ಮುಹೂರ್ತಗಳಿವೆ. ಸಾಮಾನ್ಯವಾಗಿ ಭತ್ತದ ಮುಹೂರ್ತದಲ್ಲಿ ಸ್ವಾಮೀಜಿಯವರು ಇರುವುದಿಲ್ಲ. ಆದರೆ ಈ ಬಾರಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಪರ್ಯಾಯಕ್ಕೆ ಸನ್ನಿಹಿತವಾದ ಮುಹೂರ್ತ ಇದು. ಮೊದಲ 3 ಮುಹೂರ್ತಗಳು ಪರ್ಯಾಯ ಮಠದಲ್ಲಿ ನಡೆದರೆ ಕೊನೆಯ ಮುಹೂರ್ತ ಶ್ರೀಕೃಷ್ಣ ಮಠದ ಉಗ್ರಾಣದಲ್ಲಿ ನಡೆಯುವುದು ವಿಶೇಷ.