Advertisement

ಕಾಂಗ್ರೆಸ್‌ನಿಂದ ಅಧಿವೇಶನದಲ್ಲಿ ಕಾಲಹರಣ

05:35 PM Mar 02, 2022 | Shwetha M |

ಇಂಡಿ: ಮಂಗಳೂರಿನಲ್ಲಿ ಆರಂಭಗೊಂಡ ಹಿಜಾಬ್‌ ವಿವಾದ ಹಿಡಿದು ಶಿವಮೊಗ್ಗದ ಹಿಂದೂ ಯುವಕ ಹರ್ಷನ ಕೊಲೆ ಕೇಸ್‌ನ್ನು ಬೇರೆಡೆ ಸೆಳೆಯಲು ಅಧಿವೇಶನದಲ್ಲಿ ಸಚಿವ ಈಶ್ವರಪ್ಪನವರ ಕೇಸರಿ ಬಾವುಟದ ಹೇಳಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್‌ ಕಾಲಹರಣ ಮಾಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ ಹಿರೇಮನಿ ಹೇಳಿದರು.

Advertisement

ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಲಯದಲ್ಲಿ ಕಾಂಗ್ರೆಸ್‌ ಜನವಿರೋಧಿ ನೀತಿಗಳ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ಕುಮ್ಮಕ್ಕಿನಿಂದ ಮಂಗಳೂರಿನ ಆರು ವಿದ್ಯಾರ್ಥಿನಿಯರು ಹಿಜಾಬ್‌ ಎಂಬ ಶಬ್ದವನ್ನು ಉದ್ಭವಿಸಿ ದೇಶದಲ್ಲಿ ತಲ್ಲಣ ಉಂಟು ಮಾಡಿದ್ದಾರೆ ಎಂದರು.

ಭಾರತದಲ್ಲಿ ಗ್ರಾಪಂ ಸದಸ್ಯನಿಂದ ರಾಷ್ಟ್ರಪತಿಯವರೆಗೆ ಮುಸ್ಲಿಂ ಜನಾಂಗದವರಿಗೆ ಅಧಿಕಾರ ನೀಡಲಾಗಿದೆ. ಆದರೆ ವಿಶ್ವದ ಯಾವೊಂದು ದೇಶದಲ್ಲೂ ಹಿಂದೂಗಳಿಗೆ ಸ್ಥಾನಮಾನ ಸಿಕ್ಕಿಲ್ಲ, ನಮ್ಮದು ಪ್ರಜಾಪ್ರಭುತ್ವ ದೇಶ ಎಂದ ಅವರು, ಕಾಂಗ್ರೆಸ್‌ ನಾಯಕರ ರಾಜಕೀಯ ನಾಟಕಕ್ಕೆ ಬಲಿಯಾಗದೆ ಹಿಜಾಬ್‌ ವಿವಾದ್‌ ಛೋಡೋ ಕಿತಾಬ್‌ ಪಕಡೋ ಎಂದು ಮನವಿ ಮಾಡುತ್ತೇವೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಕಾಸುಗೌಡ ಬಿರಾದಾರ, ದಯಸಾಗರ ಪಾಟೀಲ, ಕಾಸುಗೌಡ ಬಿರಾದಾರ, ಅನಿಲ ಜಮಾದಾರ, ಶೀಲವಂತ ಉಮರಾಣಿ, ಸಿದ್ದಲಿಂಗ ಹಂಜಗಿ, ಹನುಮಂತರಾಯಗೌಡ ಪಾಟೀಲ, ಶ್ರೀಶೈಲಗೌಡ ಬಿರಾದಾರ ಮಾತನಾಡಿದರು.

ಚಿದಾನಂದ ಚಲವಾದಿ, ಭೀಮಸಿಂಗ್‌ ರಾಠೊಡ, ರಾಜಕುಮಾರ ಸಗಾಯಿ, ರವಿ ವಗ್ಗೆ, ಗುರದೇವಿ ತರಡಿ, ವಿಜಯಕುಮಾರ ಮೂರಮನ, ಶ್ರೀನಿವಾಸ ಕಂದಗಲ, ಸಂಜು ದಶವಂತ, ಶಾಂತು ಕಂಬಾರ, ಕಾಶೀನಾಥ ನಾಯ್ಕೊಡಿ, ಅಶೋಕಗೌಡ ಬಿರಾದಾರ, ಸೋಮು ನಿಂಬರಗಿಮಠ, ರಾಜಶೇಖರ ಯರಗಲ್‌, ಬೋರಮ್ಮ ಮುಳಜಿ, ಅನಸೂಯಾ ಮದರಿ, ಸುನಂದಾ ಗಿರಣಿವಡ್ಡರ ಸೇರಿದಂತೆ ಬಿಜೆಪಿ ಮುಖಂಡರು ಭಾಗಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next