Advertisement

ನೂತನ ಎಂಎಲ್‌ಸಿ : ಸೆ.18ರಂದು ಆದಿತ್ಯನಾಥ್‌, ಡಿಸಿಎಂ ಪ್ರಮಾಣ

05:06 PM Sep 16, 2017 | Team Udayavani |

ಲಕ್ನೋ : ರಾಜ್ಯ ವಿಧಾನ ಪರಿಷತ್ತಿಗೆ ಈಚೆಗೆ ಆಯ್ಕೆಯಾಗಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಉಪ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳು ಮುಂದಿನ ಸೋಮವಾರ ಸೆ.18ರಂದು ಬೆಳಗ್ಗೆ 11 ಗಂಟೆಗೆ ವಿಧಾನಸಭಾ ಕಟ್ಟಡದ ತಿಲಕ್‌ ಹಾಲ್‌ನಲ್ಲಿ ಎಂಎಲ್‌ಸಿ ಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Advertisement

ರಾಜ್ಯ ವಿಧಾನ ಪರಿಷತ್‌ ಅಧ್ಯಕ್ಷ ರಮೇಶ್‌ ಯಾದವ್‌ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ವಿಧಾನ ಪರಿಷತ್‌ ಮಂತ್ರಾಲಯದ ವಿಶೇಷ ಕಾರ್ಯದರ್ಶಿ ಛೇದಿಲಾಲ್‌ ಅವರು ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ. 

ಕಳೆದ ಸೆ.8ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಅವರ ಇಬ್ಬರು ಡೆಪ್ಯುಟಿಗಳಾದ ಕೇಶವ ಪ್ರಸಾದ್‌ ಮೌರ್ಯ ಮತ್ತು ದಿನೇಶ್‌ ಶರ್ಮಾ ಮತ್ತು ಸಚಿವ ಸ್ವಂತ್ರದೇವ ಸಿಂಗ್‌ ಅವರು ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.

ಸೆ.11ರಂದು ಉ.ಪ್ರ.ದ ಸಹಾಯಕ ಸಚಿವ ಮೊಹ್ಸಿನ್‌ ರಜಾ ಅವರು ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದರೊಂದಿಗೆ ವಿಧಾನ ಪರಿಷತ್ತಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಎಲ್ಲ ಐದು ಸ್ಥಾನಗಳು ಬಿಜೆಪಿ ಪಾಲಾಗಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next