ಹೊಸದಿಲ್ಲಿ: ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದು, ಚುನಾವಣೆ ಸಮಯದಲ್ಲಿ ಬಿಜೆಪಿಗೆ ಹಾರಿದ್ದ ಅದಿತಿ ಸಿಂಗ್ ಗೆಲುವು ಸಾಧಿಸಿದ್ದಾರೆ. ರಾಯ್ ಬರೇಲಿ ಸದಾರ್ ವಿಧಾನಸಭೆ ಕ್ಷೇತ್ರದಲ್ಲಿ ಅದಿತಿ ಸಿಂಗ್ ಅವರು 7,175 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ರಾಯ್ ಬರೇಲಿ ಸದಾರ್ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದ ಅಖಿಲೇಶ್ ಸಿಂಗ್ ಪುತ್ರಿಯಾಗಿರುವ ಅದಿತಿ 2017ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ನಡೆಸಿ ಗೆದ್ದು, ಶಾಸಕಿಯಾಗಿದ್ದರು. ಆದರೆ ಚುನಾವಣೆ ಸನಿಹದಲ್ಲಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಕಮಲ ಪಾಳಯ ಸೇರಿದ್ದರು.
ಇದನ್ನೂ ಓದಿ:12 ರಾಜಕೀಯ ಪಕ್ಷಗಳನ್ನು ಸೋಲಿಸಿದ NOTA; ನೋಟಾ ಏಟಿಗೆ ಬಲಿಯಾದವರು ಯಾರು?
ಚುನಾವಣೆಯಲ್ಲಿ ಅದಿತಿ ಸಿಂಗ್ 101974 ಮತ ಪಡೆದಿದ್ದರೆ, ಸಮೀಪದ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ರಾಮ್ ಪ್ರತಾಪ್ ಯಾದವ್ ಅವರು 95,254 ಮತ ಪಡೆದಿದ್ದಾರೆ. ವಿಚಿತ್ರವೆಂದರೆ ಕಾಂಗ್ರೆಸ್ ಅಭ್ಯರ್ಥಿ ಗಳಿಸುವುದು ಕೇವಲ 14884 ಮತ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಬಿಜೆಪಿ 273 ಕ್ಷೇತ್ರಗಳನ್ನು ಜಯಿಸಿದ್ದರೆ, ಸಮಾಜವಾದಿ ಪಕ್ಷವು 125 ಸೀಟು ಗೆದ್ದುಕೊಂಡಿದೆ. ಕಾಂಗ್ರೆಸ್ ಎರಡು ಸ್ಥಾನ ಗೆದ್ದರೆ, ಬಿಎಸ್ ಪಿ ಒಂದರಲ್ಲಿ ಮಾತ್ರ ಗೆದ್ದುಕೊಂಡಿದೆ.