Advertisement

ಆದಿಜಾಂಬವ ಸಮುದಾಯಕ್ಕೆ ಮೂರು ಪಕ್ಷಗಳು ಅನ್ಯಾಯ ಮಾಡಿವೆ: ಮಹದೇವ್ ಆಕ್ರೋಶ

04:38 PM Dec 29, 2022 | Team Udayavani |

ಹುಣಸೂರು: ಕಳೆದ ಮೂವತ್ತು ವರ್ಷಗಳಿಂದ ಆದಿಜಾಂಭವ ಸಮುದಾಯಕ್ಕೆ ನ್ಯಾ. ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿ ಕಲ್ಪಿಸುವಂತೆ ಸಾಕಷ್ಟು ಹೋರಾಟ ನಡೆಸಿದ್ದರೂ ರಾಜ್ಯದ ಮೂರು ಪಕ್ಷಗಳು ಸ್ಪಂದಿಸದೆ ಅನ್ಯಾಯ ಮಾಡಿವೆ ಎಂದು ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಜೆ.ಮಹದೇವ್ ಬೇಸರ ವ್ಯಕ್ತಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯದ ಒಳ ಮೀಸಲಾತಿ ಎಂಬುದು ನಮ್ಮ ನ್ಯಾಯಯುತ ಬೇಡಿಕೆಗೆ ಈಗಿನ ಆಡಳಿತ ಸರಕಾರವು ಸ್ಪಂದಿಸುತ್ತಿಲ್ಲ, ಬದಲಿಗೆ ನ್ಯಾಯಯುತ ಹೋರಾಟ ನಡೆಸುತ್ತಿರುವವರ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನ ದೊಡ್ಡ ಬಹುಮಾನ ನೀಡಿದೆ ಎಂದು ಆಕ್ರೋಶ ಹೊರಹಾಕಿದರು.

ಇತ್ತೀಚೆಗೆ ನಡೆದ ದಲಿತರ ಏಕತಾ ಸಮಾವೇಶದಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸುವಂತೆ ನಿರ್ಣಯಿಸಲಾಗಿದೆ. ಒಳ ಮೀಸಲಾತಿ ಬೇಡಿಕೆಗೆ ಎಡ-ಬಲ ಸಮುದಾಯಗಳು ಒಟ್ಟಿಗೆ ಹೆಜ್ಜೆ ಇಟ್ಟಿದ್ದು, ಈಗಲಾದರೂ ಒಳ ಮೀಸಲಾತಿ ಕಲ್ಪಿಸಲು ಮುಂದಾಗುವಂತೆ ಆಗ್ರಹಿಸಿದರು.

ಎತ್ತಿ ಕಟ್ಟುವ ತಂತ್ರ
ಒಳಮೀಸಲಾತಿ ಕಲ್ಪಿಸುವ ಕುರಿತು ಪ್ರಸ್ತುತ ನಡೆಯುತ್ತಿರುವ ಬೆಳಗಾವಿ ಅವೇಶನದಲ್ಲಿ ಕ್ಯಾಬಿನೆಟ್ ಉಪಸಮಿತಿ ರಚಿಸಿರುವುದು ಕಾಲಹರಣದ ತಂತ್ರ ಎಂದು ಟೀಕಿಸಿ, ಒಳ ಮೀಸಲಾತಿ ವಿರೋದಿಸಿ ಮೀಸಲಾತಿಯ ಸೌಲಭ್ಯ ಪಡೆಯುತ್ತಿರುವ ಸೃಷ್ಯ ಸಮಾಜಗಳ ಜ.10 ರಂದು ನಡೆಸುವ ಪ್ರತಿಭಟನೆಗೆ ರಾಜ್ಯ ಸರ್ಕಾರವೇ ಪ್ರಚೋದನೆ ನೀಡಿದೆ ಎಂದು ಬೇಸರಿಸಿದರು.

ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ನಗರಸಭೆ ಮಾಜಿ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ ಸುಪ್ರೀಂ ಕೋರ್ಟ್ ಒಳಮೀಸಲಾತಿ ಕುರಿತಂತೆ ಸಂವಿಧಾನ ಪೀಠ ನಡೆದಿದೆ, ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಮೂಲಕ ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ಅಲ್ಲದೆ ಬೆಂಗಳೂರಿನಲ್ಲಿ ಈ ಕುರಿತು ಕಳೆದ 15 ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ತಾಲೂಕು ಘಟಕ ಸಂಪೂರ್ಣ ಬೆಂಬಲ ನೀಡುತ್ತೇವೆಂದರು.

Advertisement

ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯನವರು ಈಗ ನಮ್ಮ ಸರಕಾರ ಬಂದಲ್ಲಿ ಒಳ ಮೀಸಲಾತಿ ಕಲ್ಪಿಸುತ್ತೇವೆಂದು ಹೇಳುತ್ತಿದ್ದಾರೆ. ಆದರೆ ಅವರದ್ದೆ ಸರಕಾರವಿದ್ದಾಗ ಏಕೆ ಜಾರಿಗೊಳಿಸಲಿಲ್ಲವೆಂದು ಪ್ರಶ್ನಿಸಿದರು. ಇದಾಗದಿದ್ದಲ್ಲಿ ರಾಜ್ಯಾದ್ಯಂತ ಆದಿಜಾಂಭವ ಸಮಾಜವು ದೊಡ್ಡ ಹೋರಾಟ ರೂಪಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸತೀಶ್, ಸಣ್ಣಮಾದಯ್ಯ, ರಾಯನಹಳ್ಳಿ ಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next