Advertisement

ಅಡಿಗಾಸ್‌ ಯಾತ್ರಾದಿಂದ ಭಾರತ ದರ್ಶನ ಯೋಜನೆ 

07:20 AM Jun 14, 2018 | |

ಬೆಂಗಳೂರು: ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸ ಏರ್ಪಡಿಸುತ್ತಿರುವ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದ ಅಡಿಗಾಸ್‌ ಯಾತ್ರಾ ಸಂಸ್ಥೆಯು ಭಾರತ ದರ್ಶನ ವಿಶೇಷ ಯೋಜನೆ ಹಮ್ಮಿಕೊಂಡಿದೆ.

Advertisement

ಉತ್ತರ ಭಾರತ, ನೇಪಾಳ, ಕಾಶಿ, ಗಯಾ, ಚಾರಧಾಮ ಯಾತ್ರೆ,ಕಾಮಾಕ್ಯ, ಜ್ವಾಲಮುಖೀ, ವೈಷ್ಣೋದೇವಿ ಮೊದಲಾದ ಶಕ್ತಿ ಪೀಠ, ಅಷ್ಟ ವಿನಾಯಕ, ಜ್ಯೋತಿರ್ಲಿಂಗ ದರ್ಶನ, ಶಿಮ್ಲಾ, ಮನಾಲಿ, ಕಾಶ್ಮೀರ,ಸಿಕ್ಕಿಂ, ಡಾರ್ಜಿಲಿಂಗ್‌, ಮೇಘಾಲಯ, ಅರುಣಾಚಲ ಪ್ರದೇಶ ಸೇರಿದಂತೆ ದೇಶದ ಐತಿಹಾಸಿಕ ತಾಣಗಳಿಗೆ ಪ್ರವಾಸ ಯೋಜನೆಗೆ ಪ್ಯಾಕೇಜ್‌ ವ್ಯವಸ್ಥೆ ಸಿದ್ಧಪಡಿಸಿದೆ.

ಸಸ್ಯಹಾರಿ ಊಟೋಪಹಾರ, ವಸತಿ ವ್ಯವಸ್ಥೆ, ಪ್ರಯಾಣಕ್ಕೆ ರೈಲು, ವಿಮಾನ ಹಾಗೂ ವಾಹನದ ವ್ಯವಸ್ಥೆ, ಮತ್ತು
ಮಾರ್ಗದರ್ಶನವನ್ನು ಈ ಯೋಜನೆಯಡಿ ಮಾಡಲಾಗುತ್ತದೆ. ಉತ್ತರ ಭಾರತ, ನೇಪಾಳ ಪ್ರವಾಸದಲ್ಲಿ ಚಾರಧಾಮ ಯಾತ್ರೆ, ಕಾಶಿ-ಗಯಾ ಯಾತ್ರೆ, ಮುಕ್ತಿನಾಥ, ಕಾಶ್ಮೀರ ವಿಶೇಷ, ಶಿಮ್ಲಾ-ಮನಾಲಿ ಮೊದಲಾದ ಸ್ಥಳಗಳಿಗೆ 9ರಿಂದ 31 ದಿನಗಳ ಪ್ರವಾಸದ ಪ್ಯಾಕೇಜ್‌ ಇದೆ. 

ಪೂರ್ವ ಭಾರತ ಪ್ರವಾಸದಲ್ಲಿ ಭುವನೇಶ್ವರ, ಪುರಿ ಜಗನ್ನಾಥ, ಕೊನಾರ್ಕ್‌, ಡಾರ್ಜಿಲಿಂಗ್‌ ಸೇರಿ ಈಶಾನ್ಯ ರಾಜ್ಯ ಪ್ರವಾಸ ಇರುತ್ತದೆ.

9ರಿಂದ 28 ದಿನದ ಪ್ರವಾಸ ಇದಾ ಗಿದೆ. ಪಶ್ಚಿಮ ಮತ್ತು ಮಧ್ಯ ಭಾರತ ಪ್ರವಾಸದಲ್ಲಿ ದ್ವಾರಕ, ಸೋಮನಾಥ, ಸಾಸಂಗೀರ್‌, ಕಛ…ನ ರನ್‌ ಉತ್ಸವ, ಜೈಪುರ್‌, ಪುಷ್ಕರ, ಮೌಂಟ್‌ ಅಬು, ಗ್ವಾಲಿಯರ್‌ ಮೊದಲಾದ ಸ್ಥಳಕ್ಕೆ 10ರಿಂದ 12 ದಿನಗಳ ಪ್ರವಾಸದ ಪ್ಯಾಕೇಜ್‌ ಇದೆ.

Advertisement

ದಕ್ಷಿಣ ಭಾರತ ಪ್ರವಾಸದಲ್ಲಿ ಮಧುರೈ, ರಾಮೇಶ್ವರಂ, ಕನ್ಯಾಕುಮಾರಿ, ಅಲ್ಲೆಪಿ, ಮುನ್ನಾರ್‌, ತೇಕ್ಕಡಿ, ತಿರುವನಂತಪುರ, ಗುರುವಾಯೂರು, ಕಾಲಟಿ ಹಾಗೂ ಆಂಧ್ರ ಮತ್ತು ಕರ್ನಾಟಕದ ಪ್ರಮುಖ ಸ್ಥಳಗಳಿಗೆ ಪ್ರವಾಸದ ಪ್ಯಾಕೇಜ್‌ ಇದೆ ಎಂದು ಪ್ರಕಟಣೆ ತಿಳಿಸಿದೆ. 

ಮಾಹಿತಿಗಾಗಿ ಅಡಿಗಾಸ್‌ ಯಾತ್ರಾ, ನಂ.144-ಡಿವಿಜಿ ರಸ್ತೆ,ಬಸವನಗುಡಿ, ಬೆಂಗಳೂರು-560004, ದೂ:080-26616678 ಅಥವಾ 9449478944 ಅಥವಾ ವೆಬ್‌ಸೈಟ್‌ www.adigasyatra.com ನಿಂದಲೂ ಮಾಹಿತಿ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next